ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಲೂರ್‌ಘಾಟ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಬಂಗಾಳ ಅಧ್ಯಕ್ಷ ಸುಕಾಂತ ಮಜುಂದಾರ್ ಅವರ ಆಸ್ತಿ 2019ರಿಂದ ಈವರೆಗೆ ಬರೋಬ್ಬರಿ ಶೇಕಡ 114ರಷ್ಟು ಏರಿಕೆಯಾಗಿದೆ ಎಂದು ಅವರ ಆಸ್ತಿ ವಿವರದಲ್ಲಿ ಬಹಿರಂಗವಾಗಿರುವುದಾಗಿ ಪಿಟಿಐ ವರದಿ ಮಾಡಿದೆ.
ಈ ನಡುವೆ ಡಾರ್ಜಿಲಿಂಗ್‌ನ ಹಾಲಿ ಬಿಜೆಪಿ ಸಂಸದ ರಾಜು ಬಿಸ್ತಾ ಅವರ ಆಸ್ತಿ ಕಳೆದ ಲೋಕಸಭೆ ಚುನಾವಣೆಗಿಂತ ಬರೋಬ್ಬರಿ ಶೇಕಡ 215ರಷ್ಟು ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಇದನ್ನು ಓದಿದ್ದೀರಾ? ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆಸ್ತಿ ಐದು ವರ್ಷದಲ್ಲಿ 30 ಪಟ್ಟು ಹೆಚ್ಚಳ: ₹13 ಲಕ್ಷದಿಂದ ₹4 ಕೋಟಿಗೆ ಏರಿಕೆ!
ವೆಸ್ಟ್ ಬೆಂಗಾಳ್ ಎಲೆಕ್ಷನ್ ವಾಚ್ ಆಂಡ್ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪಶ್ಚಿಮ ಬಂಗಾಳದ ಮೂರು ಕ್ಷೇತ್ರಗಳಾದ ಡಾರ್ಜಿಲಿಂಗ್, ಬಲೂರ್‌ಘಾಟ್ ಮತ್ತು ರಾಯ್‌ಗಂಜ್‌ನಿಂದ ಸ್ಪರ್ಧಿಸುತ್ತಿರುವ ಎಲ್ಲಾ 47 ಅಭ್ಯರ್ಥಿಗಳ ಆಸ್ತಿ ಪ್ರಮಾಣಪತ್ರದ ಅಫಿಡವಿಟ್ ಅನ್ನು ವಿಶ್ಲೇಷಿಸಿದೆ. ಇಲ್ಲಿ ಏಪ್ರಿಲ್ 26ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ.
ಡಾರ್ಜಿಲಿಂಗ್‌ನ ಹಾಲಿ ಬಿಜೆಪಿ ಸಂಸದ ರಾಜು ಬಿಸ್ತಾ ಅವರು 2019ರ ಚುನಾವಣೆಯ ಸಂದರ್ಭದಲ್ಲಿ ಸಲ್ಲಿಸಿದ ಅಫಿಡವಿಟ್ ಪ್ರಕಾರ, 15 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ. ಈ ಚುನಾವಣೆಯ ಅಫಿಡವಿಟ್‌ನಲ್ಲಿ ಅವರು 47 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದು ಆದಾಯದಲ್ಲಿ ಸುಮಾರು 32 ಕೋಟಿ ರೂಪಾಯಿ ಏರಿಕೆಯಾಗಿದೆ.
ಇನ್ನು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಅವರು 2019ರಲ್ಲಿ ಅವರು 58.25 ಲಕ್ಷ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದರು. ಆದರೆ 2024 ರಲ್ಲಿ 1.24 ಕೋಟಿ ರೂಪಾಯಿಗಳಿಗೆ ಈ ಆಸ್ತಿಯು ಏರಿಕೆಯಾಗಿದೆ ಎಂದು ವರದಿ ಹೇಳಿದೆ.