ತೆಲಂಗಾಣ ರಾಜ್ಯದ ಹೈದರಾಬಾದ್ ನಗರದ ನಾಂಪಲ್ಲಿ ಪ್ರದೇಶದ ಬಜಾರ್‌ಘಾಟ್‌ನಲ್ಲಿ ನಾಲ್ಕು ಅಂತಸ್ತಿನ ಕಟ್ಟಡದ ಮೊದಲ ಮಹಡಿಯಲ್ಲಿರುವ ರಾಸಾಯನಿಕ ಗೋಡೌನ್‌ನಲ್ಲಿ ಸೋಮವಾರ ಭಾರಿ ಬೆಂಕಿ ಅವಘಡ ಉಂಟಾಗಿ ಕನಿಷ್ಠ ಒಂಭತ್ತು ಜನರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.
ಹೈದರಾಬಾದ್ ಕೇಂದ್ರ ವಲಯ ಡಿಸಿಪಿ ವೆಂಕಟೇಶ್ವರ್ ರಾವ್ ಪ್ರಕಾರ, ಬೆಳಗ್ಗೆ 9:30ರ ಸುಮಾರಿಗೆ ಸ್ಟಿಲ್ ಫ್ಲೋರ್‌ನಲ್ಲಿ ಕಾರನ್ನು ದುರಸ್ತಿ ಮಾಡುವಾಗ ಸಣ್ಣ ಕಿಡಿಯಿಂದ ಬೆಂಕಿ ಕಾಣಿಸಿಕೊಂಡು ಬೆಂಕಿ ಹೊತ್ತುಕೊಂಡಿದೆ. ಸ್ಥಳದಲ್ಲಿ ರಾಸಾಯನಿಕವನ್ನು ಸಂಗ್ರಹಿಸುವ ಹಲವಾರು ಡ್ರಮ್‌ಗಳನ್ನು ಸಹ ಸಂಗ್ರಹಿಸಲಾಗಿರುವುದರಿಂದ ಬೆಂಕಿಯ ಕೆನ್ನಾಲಿಗೆ ಎಲ್ಲೆಡೆ ವ್ಯಾಪಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಉರಿದು ಉಳಿದ ಮಣ್ಣಿನ ಹಣತೆಯಲ್ಲಿ ಎಣ್ಣೆ ಹೆಕ್ಕುವ ಬಡವರು ಮತ್ತು ವಿಶ್ವಗುರು
ನೆಲಮಹಡಿಯಲ್ಲಿರುವ ಗೋಡೌನ್‌ನಲ್ಲಿ ಕಾರಿನ ರಿಪೇರಿ ಕಾರ್ಯ ನಡೆಯುತ್ತಿದ್ದು, ಕಿಡಿಗಳು ಗೋಡೌನ್‌ನಲ್ಲಿ ಇರಿಸಲಾಗಿದ್ದ ಕೆಮಿಕಲ್ ಬ್ಯಾರೆಲ್‌ಗೆ ವ್ಯಾಪಿಸಿ ಬೆಂಕಿ ಹೊತ್ತಿಕೊಂಡಿದೆ. ಫೈಬರ್ – ಪ್ಲಾಸ್ಟಿಕ್ ತಯಾರಿಕೆಯಲ್ಲಿ ಶೇಖರಿಸಲಾಗಿದ್ದ ದಹನಕಾರಿ ರಾಸಾಯನಿಕ ಇದಾಗಿದೆ. ಸ್ವಲ್ಪ ಸಮಯದಲ್ಲೇ ಬೆಂಕಿ ಕಟ್ಟಡದ ಇತರ ಮಹಡಿಗಳನ್ನು ಆವರಿಸಿತು ಮತ್ತು ಆರು ಸಾವುಗಳಿಗೆ ಕಾರಣವಾಯಿತು” ಎಂದು ಡಿಸಿಪಿ ಹೇಳಿದ್ದಾರೆ.
Around 7 persons are suspected to have been killed in a fire mishap in a chemical godown in Bazarghat of Hyderabad’s Nampally. While 16 persons have been rescued casualties are expected to rise #Hyderabad #ChemicalGowdown #FireAccident @DeccanHerald pic.twitter.com/3oO18cH2jp
— SNV Sudhir (@sudhirjourno) November 13, 2023
ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿಯನ್ನು ಹತೋಟಿಗೆ ತರಲಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ಎರಡು ತಂಡಗಳನ್ನು ಕಳುಹಿಸಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಗೂ ಎಚ್ಚರಿಕೆ ನೀಡಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
“ನಾವು ಒಂದು ಗಂಟೆಯೊಳಗೆ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದೇವೆ ಮತ್ತು ಕಟ್ಟಡದಲ್ಲಿ ಸಿಲುಕಿದ್ದ 21 ಜನರನ್ನು ರಕ್ಷಿಸಿದ್ದೇವೆ. ಗಾಯಗೊಂಡವರನ್ನು ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ಸೇರಿಸಿದ್ದೇವೆ” ಎಂದು ಡಿಸಿಪಿ ತಿಳಿಸಿದ್ದಾರೆ.
ಅಗ್ನಿ ಅವಘಡಕ್ಕೆ ಕಾರಣ ಮತ್ತು ಹಾನಿಯ ಪ್ರಮಾಣ ಇನ್ನೂ ಅಧಿಕೃತವಾಗಿ ತಿಳಿದು ಬರಬೇಕಿದೆ.
ಮೊನ್ನೆಯಷ್ಟೇ ಹೈದರಾಬಾದ್‌ನ ಶಾಲಿಬಂಡಾದಲ್ಲಿರುವ ಎಲೆಕ್ಟ್ರಾನಿಕ್ಸ್ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆರು ಅಗ್ನಿಶಾಮಕ ವಾಹನಗಳು ಮತ್ತು 30 ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಯಶಸ್ವಿಯಾಗಿ ಬೆಂಕಿಯನ್ನು ನಂದಿಸಿದ್ದಾರೆ.
ಮತ್ತೊಂದು ಘಟನೆ
“ಶಾಲಿಬಂಡಾದಲ್ಲಿರುವ ಎಲೆಕ್ಟ್ರಾನಿಕ್ಸ್ ಶೋರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿ ಶೋರೂಮ್‌ನ ಎರಡು ಮತ್ತು ಮೂರನೇ ಮಹಡಿಗೆ ವ್ಯಾಪಿಸಿತು. ಒಟ್ಟು ಆರು ಅಗ್ನಿಶಾಮಕ ವಾಹನಗಳು ಮತ್ತು 30 ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಮೂರು ಗಂಟೆಗಳ ಕಾರ್ಯಾಚರಣೆಯ ನಂತರ ನಾವು ಬೆಂಕಿಯನ್ನು ನಿಯಂತ್ರಿಸಿದ್ದೇವೆ. ಇಂದು ಮುಂಜಾನೆ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೈದರಾಬಾದ್‌ನ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.