ಮನೆಯಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ ಮೂವರು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ನಡೆದಿದೆ ಎಂದು ಪಿಟಿಐ ವರದಿ ಮಾಡಿದೆ.
ಸಾಗರ್‌ಪಾರಾ ಪೊಲೀಸ್ ಠಾಣೆ ವ್ಯಾಪ್ತಿಯ ಖಯರ್ತಲಾ ಪ್ರದೇಶದಲ್ಲಿ ಬಾಂಬ್ ಸ್ಫೋಟವಾಗಿರುವ ಶಂಕೆಯಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಮನೆಯಲ್ಲಿಯೇ ಬಾಂಬ್ ತಯಾರಿಸಲಾಗಿದ್ದು, ಆ ಮನೆಯೂ ಕುಸಿದಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ | ತಮ್ಮ ಪ್ರತಿಮೆಯನ್ನು ತಾವೇ ಅನಾವರಣ ಮಾಡಿದ ರಾಜ್ಯಪಾಲ
ಮೃತರನ್ನು ಮಾಮುನ್ ಮುಲ್ಲಾ, ಸಾಕಿರುಲ್ ಸರ್ಕಾರ್, ಮುಸ್ತಾಕಿನ್ ಶೇಖ್ ಎಂದು ಗುರುತಿಸಲಾಗಿದೆ.
VIDEO | West Bengal: At least three people have been reportedly killed in an explosion at a house in #Murshidabad. More details are awaited.
— Press Trust of India (@PTI_News) December 9, 2024
(Full video available on PTI Videos – https://t.co/n147TvqRQz) pic.twitter.com/lgU9zOSFsa
ಮೃತರ ಕುಟುಂಬಸ್ಥರು ಮಾತ್ರ ಬಾಂಬ್ ತಯಾರಿಕೆ ವೇಳೆ ಸ್ಫೋಟಗೊಂಡಿರುವ ವರದಿಯನ್ನು ಅಲ್ಲಗಳೆದಿದ್ದಾರೆ. ಮನೆಯ ಮೇಲೆ ಬಾಂಬ್ ದಾಳಿ ಮಾಡಿದ್ದರಿಂದ ಮೂವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
