ರಾಜಸ್ಥಾನದ ಅಜ್ಮೀರ್‌ನಲ್ಲಿ ಗೂಡ್ಸ್ ರೈಲನ್ನು ಹಳಿ ತಪ್ಪಿಸುವ ಯತ್ನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸರಕು ಸಾಗಣೆ ಕಾರಿಡಾರ್ ಹಳಿಗಳಲ್ಲಿ ಸಿಮೆಂಟ್ ಬ್ಲಾಕ್‌ಗಳು ಪತ್ತೆಯಾಗಿದೆ.
“ಪಶ್ಚಿಮ ಮೀಸಲಾದ ಸರಕು ಸಾಗಣೆ ಕಾರಿಡಾರ್‌ನ ಹಳಿಗಳ ಮೇಲೆ ಎರಡು ಸಿಮೆಂಟ್ ಬ್ಲಾಕ್‌ಗಳನ್ನು ಹಾಕುವ ಮೂಲಕ ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿ ಸರಕು ರೈಲನ್ನು ಹಳಿತಪ್ಪಿಸಲು ಪ್ರಯತ್ನಿಸಲಾಗಿದೆ” ಎಂದು ರೈಲ್ವೆ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಗೂಡ್ಸ್ ರೈಲು ಬ್ಲಾಕ್‌ಗಳಿಗೆ ಅಪ್ಪಳಿಸಿ ನಿಂತಿದೆ. ಯಾವುದೇ ಅಹಿತಕರ ಘಟನೆ ಸಂಭವಿಸಲಿಲ್ಲ. ಸಿಮೆಂಟ್ ಬ್ಲಾಕ್‌ಗಳು ತಲಾ 70 ಕೆಜಿ ತೂಕವಿತ್ತು ಎಂದು ಹೇಳಿದ್ದಾರೆ.
ಆರಂಭದಲ್ಲಿ ಹಳಿಯ ಮೇಲೆ ಸಿಮೆಂಟ್ ಬ್ಲಾಕ್ ಹಾಕಿರುವ ಮಾಹಿತಿ ನೌಕರರಿಗೆ ಸಿಕ್ಕಿದ್ದು, ಸ್ಥಳಕ್ಕಾಗಮಿಸಿದಾಗ ಬ್ಲಾಕ್ ಮುರಿದಿರುವುದು ಕಂಡು ಬಂದಿದೆ. ಅದೇ ಹಳಿಯಲ್ಲಿ ಮತ್ತೊಂದು ಸಿಮೆಂಟ್ ಬ್ಲಾಕ್ ಕೂಡಾ ಕಂಡು ಬಂದಿದೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನು ಓದಿದ್ದೀರಾ? ಹಳಿ ತಪ್ಪಿದ ಸಬರಮತಿ ಎಕ್ಸ್‌ಪ್ರೆಸ್‌ನ 20 ಬೋಗಿಗಳು; ವಿಧ್ವಂಸಕ ಕೃತ್ಯ ಎಂದ ರೈಲ್ವೇ ಸಚಿವ
ಭಾನುವಾರ ಇಂತಹುದ್ದೆ ಒಂದು ಘಟನೆ ನಡೆದಿದೆ. ಕಾನ್ಪುರದ ರೈಲು ಹಳಿ ಮೇಲೆ ಯಾರೋ ಎಲ್‌ಪಿಜಿ ಸಿಲಿಂಡರ್ ಇರಿಸಿದ್ದು, ಪ್ರಯಾಗ್‌ರಾಜ್‌ನಿಂದ ಹರಿಯಾಣದ ಭಿವಾನಿಗೆ ಪ್ರಯಾಣಿಸುತ್ತಿದ್ದ ಕಾಳಿಂದಿ ಎಕ್ಸ್‌ಪ್ರೆಸ್ ರೈಲು ಇದಕ್ಕೆ ಡಿಕ್ಕಿ ಹೊಡೆದಿದೆ. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ.
ಸಿಲಿಂಡರ್‌ಗೆ ಡಿಕ್ಕಿ ಹೊಡೆದ ನಂತರ ರೈಲು ನಿಂತಿದ್ದು, ಹಳಿಯಲ್ಲಿ ಸಿಲಿಂಡರ್, ಪೆಟ್ರೋಲ್ ಬಾಟಲಿ, ಬೆಂಕಿಕಡ್ಡಿ ಸೇರಿದಂತೆ ಹಲವಾರು ಅನುಮಾನಾಸ್ಪದ ವಸ್ತುಗಳು ಕಂಡು ಬಂದಿದೆ. ಕಾನ್ಪುರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಈವರೆಗೆ ಆರು ಮಂದಿಯನ್ನು ಬಂಧಿಸಲಾಗಿದೆ.
Rajasthan: In Ajmer, a conspiracy to derail a train on the Phulera-Ahmedabad route was foiled when miscreants placed 70 kg cement blocks on the track between Saradhna and Bangar Gram stations.
— IANS (@ians_india) September 10, 2024
The train passed safely, breaking the blocks, averting a major accident. DFCC and RPF… pic.twitter.com/75Qgr0cQiG
