ಬಾಂಗ್ಲಾದೇಶ ಹಿಂಸಾಚಾರದ ನಡುವೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಾಂಗ್ಲಾ ನಿರಾಶ್ರಿತರಿಗೆ ಆಶ್ರಯ ನೀಡುವುದಾಗಿ ಹೇಳಿದ್ದಾರೆ. ನೆರೆಯ ದೇಶದಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ತಮ್ಮ ರಾಜ್ಯದ ಬಾಗಿಲುಗಳನ್ನು ತೆರೆದಿಡಲು ಮತ್ತು ಅವರಿಗೆ ಆಶ್ರಯ ನೀಡುವಂತೆ ಭಾನುವಾರ ಸಲಹೆ ನೀಡಿದ್ದಾರೆ.
ಕೋಲ್ಕತ್ತಾದ ಎಸ್‌ಪ್ಲನೇಡ್‌ನಲ್ಲಿ ಟಿಎಂಸಿಯ ‘ಹುತಾತ್ಮರ ದಿನಾಚರಣೆ’ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, “ಬಾಂಗ್ಲಾದೇಶದಲ್ಲಿ ಏನಾಗುತ್ತಿದೆಯೋ ಅದು ಅವರ ಆಂತರಿಕ ವಿಷಯವಾಗಿದೆ. ರಾಜ್ಯವಾಗಿ ನಾವು ಈ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆದರೆ ಯುಎನ್ ಮಾರ್ಗಸೂಚಿಗಳ ಪ್ರಕಾರ ಬಾಂಗ್ಲಾದೇಶದಲ್ಲಿರುವ ತಮ್ಮ ಮನೆಯಿಂದ ಹೊರಹಾಕಲ್ಪಟ್ಟ ಮತ್ತು ನಮ್ಮ ರಾಜ್ಯದಲ್ಲಿ ಆಶ್ರಯ ಪಡೆಯುವ ಎಲ್ಲಾ ನಿರಾಶ್ರಿತರನ್ನು ನಾವು ಸ್ವಾಗತಿಸುತ್ತೇವೆ” ಎಂದು ಹೇಳಿದ್ದಾರೆ.
ಈಶಾನ್ಯ ರಾಜ್ಯದಲ್ಲಿ ಬೋಡೋ ಕಲಹದ ಸಮಯದಲ್ಲಿ ಉತ್ತರ ಬಂಗಾಳದ ಅಲಿಪುರ್ದವಾರ್ಸ್ ಪ್ರದೇಶದಲ್ಲಿ ಸಾಕಷ್ಟು ಕಾಲ ವಾಸಿಸಲು ಅಸ್ಸಾಮಿ ಜನರ ಅವಕಾಶ ನೀಡಿರುವ ಬಗ್ಗೆ ಅವರು ಉದಾಹರಣೆಯನ್ನು ವಿವರಿಸಿದ್ದಾರೆ.
ಅಂತರಾಷ್ಟ್ರೀಯ ಗಡಿಯ ಪೂರ್ವ ಭಾಗದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದಲ್ಲಿ ತಮ್ಮ ಸಂಬಂಧಿಕರು ಸಿಲುಕಿಕೊಂಡಿದ್ದರೆ ಅವರನ್ನು ಪಶ್ಚಿಮ ಬಂಗಾಳಕ್ಕೆ ವಾಪಸ್ ಕರೆತರಲು ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುತ್ತದೆ ಎಂದು ಹೇಳಿದರು. ಹಾಗೆಯೇ ಬಂಗಾಳಕ್ಕೆ ಬಂದು ತಮ್ಮ ಮನೆಗೆ ವಾಪಸ್ ಮರಳಲು ಕಷ್ಟಪಡುತ್ತಿರುವ ಬಾಂಗ್ಲಾದೇಶೀಯರಿಗೂ ಸಹಾಯ ಮಾಡುವ ಭರವಸೆಯನ್ನು ಮಮತಾ ಬ್ಯಾನರ್ಜಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಬಾಂಗ್ಲಾದೇಶ ಹಿಂಸಾಚಾರ | ಒಂದು ಸಾವಿರ ಭಾರತೀಯ ವಿದ್ಯಾರ್ಥಿಗಳು ತವರೂರಿಗೆ ವಾಪಸ್
ಈ ಸಂದರ್ಭದಲ್ಲಿ, “ಪಶ್ಚಿಮ ಬಂಗಾಳದಲ್ಲಿ ಉದ್ವಿಗ್ನತೆ ಮತ್ತು ತೊಂದರೆಯನ್ನು ಉಂಟುಮಾಡುವ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಯಾವುದೇ ಪ್ರಚೋದನೆಗೆ ಒಳಗಾಗಬೇಡಿ ಅಥವಾ ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ” ಎಂದು ಪಶ್ಚಿಮ ಬಂಗಾಳದ ಜನರಿಗೆ ಮನವಿ ಮಾಡಿದ್ದಾರೆ.
ಕಳೆದ ತಿಂಗಳ ಕೊನೆಯಲ್ಲಿ ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿ ಪ್ರತಿಭಟನೆ ಆರಂಭವಾಗಿದ್ದು, ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ವಿದ್ಯಾರ್ಥಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ ಕನಿಷ್ಠ 133 ಮಂದಿ ಸಾವನ್ನಪ್ಪಿದ್ದಾರೆ. ಈ ಬೆನ್ನಲ್ಲೇ ಬಾಂಗ್ಲಾದೇಶದ ಅಧಿಕಾರಿಗಳು ರಾಷ್ಟ್ರವ್ಯಾಪಿ ಕರ್ಫ್ಯೂ ವಿಧಿಸಿದ್ದಾರೆ.
1971ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಜನರ ಕುಟುಂಬಗಳಿಗೆ ಶೇಕಡ 30ರಷ್ಟು ಸರ್ಕಾರಿ ಉದ್ಯೋಗ ಮೀಸಲಾತಿಯನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವ್ಯವಸ್ಥೆಯು ತಾರತಮ್ಯದಿಂದ ಕೂಡಿದೆ ಮತ್ತು ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಬೆಂಬಲಿಗರಿಗೆ ಅಸಮಾನವಾಗಿ ಪ್ರಯೋಜನವನ್ನು ನೀಡುತ್ತದೆ ಎಂಬುದು ಪ್ರತಿಭಟನಾಕಾರರ ವಾದವಾಗಿದೆ.
Restrictions on #internet and news channels in #Bangladesh.
Nationwide #curfew has been announced… 105 people have died so far in the violence against #reservation.#QuotaSystem #BangladeshProtests #বাংলাদেশ #BangladeshRiots pic.twitter.com/N7EquXRVFu— Sanjeev 🇮🇳 (@sun4shiva) July 20, 2024