ಉತ್ತರ ಪ್ರದೇಶದಲ್ಲಿ ಶುಕ್ರವಾರ ಮೊದಲ ಹಂತದ ಮತದಾನ ನಡೆದಿದ್ದು ಇದಾದ ಒಂದು ದಿನದ ಬಳಿಕವೇ ಮೊರಾದಾಬಾದ್ನ ಬಿಜೆಪಿ ಅಭ್ಯರ್ಥಿ ಕುನ್ವರ್ ಸರ್ವೇಶ್ ಸಿಂಗ್ ಶನಿವಾರ ನಿಧನರಾಗಿದ್ದಾರೆ.
ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕುನ್ವರ್ ಸಿಂಗ್ ಅವರು ಶುಕ್ರವಾರ ಮತದಾನ ಮಾಡಿದ್ದರು. 72 ವರ್ಷ ಪ್ರಾಯದ ಕುನ್ವರ್ ಅವರು ಅನಾರೋಗ್ಯ ಕಾರಣ ದೆಹಲಿಯ ಏಮ್ಸ್ಗೆ ದಾಖಲಾಗಿದ್ದು ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಇದನ್ನು ಓದಿದ್ದೀರಾ? ವಿಪಕ್ಷಗಳನ್ನು ಹಿಂದು ವಿರೋಧಿ ಎಂದು ಬಿಂಬಿಸುವುದೇ ಮೋದಿ ಪ್ರಮುಖ ತಂತ್ರ
ಬಿಜೆಪಿ ಅಭ್ಯರ್ಥಿಯ ನಿಧನಕ್ಕೆ ಹೃದಯಾಘಾತ ಕಾರಣ ಎಂದು ಹೇಳಲಾಗಿದೆ. ಆದರೆ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದ್ರ ಚೌಧರಿ ಸಿಂಗ್ ಅವರು ಕುನ್ವರ್ ಸಿಂಗ್ ಅವರ ನಿಧನದ ಬಗ್ಗೆ ಮಾಹಿತಿ ನೀಡಿದ್ದಾರೆ.
भारतीय जनता पार्टी के कर्मठशील नेता, मुरादाबाद भाजपा कार्यकर्ताओं के प्रेरणास्रोत तथा मुरादाबाद के पूर्व सांसद कुंवर सर्वेश सिंह जी का असामयिक निधन अत्यंत दुःखद एवं पीड़ादायक है। सर्वेश सिंह जी का गोलोकवासी होना मुरादाबाद ही नहीं बल्कि उत्तर प्रदेश भाजपा परिवार के लिए अपूरणीय… pic.twitter.com/879Q54zGxh
— Bhupendra Singh Chaudhary (मोदी का परिवार) (@Bhupendraupbjp) April 20, 2024
“ಮೊರಾದಾಬಾದ್ ಬಿಜೆಪಿ ಕಾರ್ಯಕರ್ತರಿಗೆ ಸ್ಫೂರ್ತಿಯ ಮೂಲವಾಗಿದ್ದ ಮತ್ತು ಮೊರಾದಾಬಾದ್ನ ಮಾಜಿ ಸಂಸದ, ಭಾರತೀಯ ಜನತಾ ಪಕ್ಷದ ಕಠಿಣ ಪರಿಶ್ರಮದ ನಾಯಕ ಕುನ್ವರ್ ಸರ್ವೇಶ್ ಸಿಂಗ್ ಅವರ ಅಕಾಲಿಕ ನಿಧನವು ಅತ್ಯಂತ ದುಃಖ ಮತ್ತು ನೋವಿನ ಸಂಗತಿಯಾಗಿದೆ” ಎಂದು ಭೂಪೇಂದ್ರ ಚೌಧರಿ ಸಿಂಗ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಸರ್ವೇಶ್ ಸಿಂಗ್ ಅವರು ಗೋಲೋಕ್ ನಿವಾಸಿಯಾಗಿದ್ದು ಅವರ ಸಾವು ಮೊರಾದಾಬಾದ್ಗೆ ಮಾತ್ರವಲ್ಲದೆ ಉತ್ತರ ಪ್ರದೇಶದ ಬಿಜೆಪಿ ಕುಟುಂಬಕ್ಕೂ ತುಂಬಲಾರದ ನಷ್ಟವಾಗಿದೆ. ಅವರ ಬೆಂಬಲಿಗರಿಗೆ ಮತ್ತು ಕುಟುಂಬ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿ ನೀಡುವಂತೆ ಭಗವಂತ ಶ್ರೀರಾಮನಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಸಂತಾಪಗಳು” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ | ಚಪ್ಪಲಿ ಹಾರ ಹಾಕಿಕೊಂಡು ಮತಯಾಚಿಸಿದ ಅಭ್ಯರ್ಥಿ
ಕುನ್ವರ್ ಸರ್ವೇಶ್ ಸಿಂಗ್ ಅವರು ಮೊರಾದಾಬಾದ್ನ ಠಾಕುರ್ದ್ವಾರ ವಿಧಾನಸಭಾ ಕ್ಷೇತ್ರದಲ್ಲಿ ಐದು ಬಾರಿ ಬಿಜೆಪಿಯ ಶಾಸಕರಾಗಿದ್ದು 1991, 1993, 1996, 2002 ಮತ್ತು 2012 ರಲ್ಲಿ ಯುಪಿ ವಿಧಾನಸಭೆ ಸದಸ್ಯರಾಗಿದ್ದರು. 2014ರಲ್ಲಿ ಮೊರಾದಾಬಾದ್ನಿಂದ ಸಂಸದರಾಗಿ ಆಯ್ಕೆಯಾದ ಅವರು 2019ರಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ವಿಫಲರಾದರು. ಸಮಾಜವಾದಿ ಪಕ್ಷದ ಅಭ್ಯರ್ಥಿ ಡಾ.ಎಸ್.ಟಿ.ಹಸನ್ ವಿರುದ್ಧ ಸೋಲು ಕಂಡರು.
ಇನ್ನು “ಬಿಜೆಪಿ ಅಭ್ಯರ್ಥಿಯ ನಿಧನವು ಚುನಾವಣಾ ಪ್ರಕ್ರಿಯೆಗೆ ಅಡ್ಡಿಯಾಗುವುದಿಲ್ಲ. ಜೂನ್ 4 ರಂದು ನಿಗದಿಯಂತೆ ಮೊರಾದಾಬಾದ್ನ ಮತ ಎಣಿಕೆ ನಡೆಯಲಿದೆ. ಬಿಜೆಪಿ ಅಭ್ಯರ್ಥಿ ಗೆದ್ದರೆ ಮಾತ್ರ ಉಪಚುನಾವಣೆ ನಡೆಯಲಿದೆ” ಎಂದು ಡಿಎಂ ಮಾನವೇಂದ್ರ ಸಿಂಗ್ ತಿಳಿಸಿದ್ದಾರೆ.