ನಕಲಿ ಸುದ್ದಿ ಹರಡಲು ಬಿಜೆಪಿ ಐಟಿ ಸೆಲ್ ಉದ್ಯೋಗಿಗಳಿಗೆ ಮಾಸಿಕ 50 ಸಾವಿರ ರೂ. ವೇತನ!

Date:

Advertisements

ಸಿಂಗಾಪುರ ಮೂಲದ ಮಾಧ್ಯಮ ನ್ಯೂಸ್ ಏಷ್ಯಾ ಸಾಕ್ಷ್ಯಚಿತ್ರ (documentary) ಒಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ನಕಲಿ ಸುದ್ದಿ ಹರಡಲು ಬಿಜೆಪಿ ಐಟಿ ಸೆಲ್ ಉದ್ಯೋಗಿಗಳಿಗೆ ಮಾಸಿಕ 50 ಸಾವಿರ ರೂಪಾಯಿ ನೀಡಲಾಗುತ್ತದೆ ಎಂಬ ವಿಚಾರ ಬಹಿರಂಗವಾಗಿದೆ.

ಸಾಕ್ಷ್ಯಚಿತ್ರದಲ್ಲಿ ಮಾತನಾಡಿರುವ ಬಿಜೆಪಿ ಐಟಿ ಸೆಲ್‌ನ ಫ್ರೀಲಾನ್ಸರ್‌ ಅನಿಲ್ ಕುಮಾರ್, “ಬಿಜೆಪಿ ಐಟಿ ಸೆಲ್ ಮಾಹಿತಿಗಳನ್ನು ಹರಡುವ ಕೆಲಸ ಮಾಡುತ್ತದೆ. ನಾನು ಕಳೆದ ಒಂದೂವರೆ ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮನ್ನು ಯಾವುದೇ ಏಜೆನ್ಸಿ ನೇಮಕಾತಿ ಮಾಡುವುದಿಲ್ಲ. ಚುನಾವಣೆ ಬಂದಾಗ ಅಭ್ಯರ್ಥಿಗಳೇ ನಮ್ಮನ್ನು ಫ್ರೀಲಾನ್ಸರ್ ಆಗಿ ನೇಮಿಸುತ್ತಾರೆ. ಮಾಸಿಕವಾಗಿ ನಮಗೆ 40-50 ಸಾವಿರ ವೇತನ ಸಿಗುತ್ತದೆ” ಎಂದು ಹೇಳಿದ್ದಾರೆ.

ರಾಜಸ್ಥಾನದ ನಿಂಬಹೇರ ಎಂಬ ಸಣ್ಣ ಪಟ್ಟಣದಲ್ಲಿ ನ್ಯೂಸ್ ಏಷ್ಯಾ ಸಾಕ್ಷ್ಯಚಿತ್ರವನ್ನು ನಿರ್ಮಿಸಿದೆ. ಭಾರತದಲ್ಲಿ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಪ್ರಚಾರ ಮಾಡಲು ಫ್ರೀಲಾನ್ಸರ್‌ಗಳಿಗೆ ಹೆಚ್ಚು ಬೇಡಿಕೆಯಿದೆ. ರಾಜಕೀಯ ಪಕ್ಷಗಳು ತಮ್ಮ ಅಜೆಂಡಾವನ್ನು ಹರಡಲು ಸಾವಿರಾರು ಮಂದಿಯನ್ನು ನೇಮಿಸುತ್ತದೆ. ಜೊತೆಗೆ ಈ ಐಟಿ ಸೆಲ್ ಉದ್ಯೋಗಿಗಳು ಬೇರೆ ಬೇರೆ ಪ್ರದೇಶಕ್ಕೆ ಪ್ರಯಾಣ ಮಾಡಬೇಕಾಗುತ್ತದೆ. ಆ ಸಂದರ್ಭದಲ್ಲಿ ಬೇಕಾದ ವಸತಿ ವ್ಯವಸ್ಥೆಯನ್ನು ಕೂಡಾ ಮಾಡಲಾಗುತ್ತದೆ ಎಂದು ಈ ಸಾಕ್ಷ್ಯಚಿತ್ರ ಹೇಳುತ್ತದೆ.

Advertisements

ಇದನ್ನು ಓದಿದ್ದೀರಾ?  ಪಕ್ಷವೊಂದರ ಬಗ್ಗೆ ಪ್ರಚಾರದ ನಕಲಿ ವಿಡಿಯೋ: ಪ್ರಕರಣ ದಾಖಲಿಸಿದ ಅಮೀರ್ ಖಾನ್

“ನಮಗೆ ಮೋದಿ ಅವರು ಮಾಡಿದ ಘೋಷಣೆಗಳು, ರಾಷ್ಟ್ರವಾದ ಮತ್ತು ಹಿಂದುತ್ವ – ಪ್ರಮುಖ ಪ್ರಚಾರ ವಿಷಯಗಳಾಗಿರುತ್ತದೆ. ನಮ್ಮಲ್ಲಿ ಎಡಿಟರ್‌ಗಳು, ಸ್ಕ್ರಿಪ್ಟ್ ರೈಟರ್ (Script Writer), ನಟರನ್ನು ನಾವು ಹೊರಗಿನಿಂದ ಕರೆಸಿಕೊಳ್ಳುತ್ತೇವೆ. ಸಂಪೂರ್ಣ ಸ್ಕ್ರಿಪ್ಟ್ ಬರೆದು ನಾವು ನಟನೆ ಮಾಡಿಸುತ್ತೇವೆ” ಎಂದು ಅನಿಲ್ ಕುಮಾರ್ ಹೇಳುತ್ತಾರೆ.

ಇನ್ನು ಈ ಸಾಕ್ಷ್ಯಚಿತ್ರದಲ್ಲಿ ಅನಿಲ್ ಕುಮಾರ್‌ನಂತಹ ಬಿಜೆಪಿ ಐಟಿ ಸೆಲ್ ಉದ್ಯೋಗಿಗಳು ಹೇಗೆ ವಿಪಕ್ಷಗಳ ವಿರುದ್ಧ ನಕಲಿ ಸುದ್ದಿಯನ್ನು, ವಿಡಿಯೋವನ್ನು ಸೃಷ್ಟಿಸುತ್ತಾರೆ ಎಂಬುವುದನ್ನು ತೋರಿಸಲಾಗಿದೆ.

“ಬಿಜೆಪಿ ಐಟಿ ಸೆಲ್‌ನಲ್ಲಿ ಕಾಮೆಂಟ್‌ಗಳನ್ನು ಮಾಡಲೆಂದೇ ಒಂದು ತಂಡ ಇರುತ್ತದೆ. ಈ ತಂಡದ ಮುಖ್ಯ ಕಾರ್ಯ ಅಪಮಾನ ಮಾಡುವುದೇ ಆಗಿರುತ್ತದೆ. ವಿಪಕ್ಷಗಳು ಯಾವುದೇ ಪೋಸ್ಟ್ ಮಾಡಿದರೂ ಅವರ ಪೋಸ್ಟ್‌ಗೆ ಅವಹೇಳನಕಾರಿಯಾಗಿ ಕಾಮೆಂಟ್ ಮಾಡುವುದು ಆ ತಂಡದ ಕೆಲಸವಾಗಿದೆ” ಎಂದು ಅನಿಲ್ ಕುಮಾರ್ ಹೇಳಿದ್ದಾರೆ.

ಇದನ್ನು ಓದಿದ್ದೀರಾ?  ಮುಸ್ಲಿಮರ ಓಟು ಸಾಕು‌; ಸಿಎಂ ಸಿದ್ದರಾಮಯ್ಯ ವಿರುದ್ಧ ‘ಸುಳ್ಳು ಸುದ್ದಿ’ ಹರಿಬಿಟ್ಟ ಕಿಡಿಗೇಡಿಗಳು

ಇನ್ನು ಬಿಜೆಪಿ ಐಟಿ ಸೆಲ್‌ನ ಈ ಉದ್ಯೋಗಿಗಳಿಗೆ ಯಾರು ಗುರಿ ಎನ್ನುವುದನ್ನು ಕೂಡಾ ಅನಿಲ್ ಕುಮಾರ್ ಈ ಸಾಕ್ಷ್ಯಚಿತ್ರದಲ್ಲಿ ಹೇಳಿದ್ದಾರೆ. “ಖಂಡಿತವಾಗಿಯೂ ನಮಗೆ ಕಾಂಗ್ರೆಸ್ ಟಾರ್ಗೆಟ್ ಆಗಿರುತ್ತದೆ. ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡು ನಾವು ಕಾರ್ಟೂನ್‌ಗಳನ್ನು ರಚಿಸುತ್ತೇವೆ. ಮೀಮ್ಸ್‌ ಮಾಡುತ್ತೇವೆ. ಜನರಿಗೆ ನಾವು ಕಾರ್ಟೂನ್‌ಗಳನ್ನು ಬಳಸಿಕೊಂಡು ಮೀಮ್ಸ್ ಮಾಡಿದರೆ ಅದು ಇಷ್ಟವಾಗುತ್ತದೆ. ಅದಕ್ಕಾಗಿ ಅದನ್ನೇ ಬಳಸಲಾಗುತ್ತದೆ” ಎಂದು ಅವರು ಹೇಳುತ್ತಾರೆ.

ಭಾರತದಲ್ಲಿ ನಕಲಿ ಸುದ್ದಿಯೇ ಒಂದು ಇಂಡಸ್ಟ್ರಿ!

ಇನ್ನು 2019ರಲ್ಲಿ ಬಿಜೆಪಿಯು ಉತ್ತರ ಪ್ರದೇಶ ಒಂದು ರಾಜ್ಯದಲ್ಲೇ ಎರಡು ಸಾವಿರ ಸೈಬರ್ ವಾರಿಯರ್‌ಗಳನ್ನು ನೇಮಿಸುವ ಯೋಜನೆ ರೂಪಿಸಿಕೊಂಡಿತ್ತು. 2019ರಲ್ಲಿ ಫೇಸ್‌ಬುಕ್ ಕಾಂಗ್ರೆಸ್ ಹಾಗೂ ಬಿಜೆಪಿಯ ಪರವಾಗಿ ನಕಲಿ ಸುದ್ದಿಗಳನ್ನು ಹರಡುತ್ತಿದ್ದ ಸುಮಾರು 700 ಪೇಜ್‌ಗಳನ್ನು ಬ್ಲಾಕ್ ಮಾಡಿದೆ. ಭಾರತದಲ್ಲಿ ನಕಲಿ ಸುದ್ದಿಯೇ ಒಂದು ಇಂಡಸ್ಟ್ರಿಯಾಗಿದೆ ಎಂದು ವರದಿ ಹೇಳುತ್ತದೆ.

ಇದನ್ನು ಓದಿದ್ದೀರಾ?  ಜೆಎನ್‌ಯುವಿನಲ್ಲಿ ಎಬಿವಿಪಿ ಕ್ಲೀನ್‌ಸ್ವೀಪ್ ಎಂದು ಸುಳ್ಳು ಸುದ್ದಿ ಪ್ರಕಟಿಸಿದ ಸುವರ್ಣ ನ್ಯೂಸ್!

15 ವರ್ಷಗಳ ಕಾಲ ನಡೆಸಿದ ತನಿಖೆಯ ಪ್ರಕಾರ 2005ರಿಂದ ಈವರೆಗೆ ಭಾರತದಲ್ಲಿ 750ಕ್ಕೂ ಅಧಿಕ ನಕಲಿ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿದೆ. ಇದು 116 ರಾಷ್ಟ್ರಗಳಲ್ಲಿ ಪಸರಿಸಿದೆ. ಇವೆಲ್ಲವೂ ಕೂಡಾ ನಕಲಿ ಸುದ್ದಿಗಳನ್ನು ಹರಡುತ್ತಿದೆ ಎಂದು ವರದಿ ಹೇಳುತ್ತದೆ.

ಇನ್ನು 2024 ರ ಲೋಕಸಭೆ ಮತ್ತು ವಿಧಾನ ಸಭೆ ಚುನಾವಣೆಗಳಿಗೆ ಮುಂಚಿತವಾಗಿ, 30 ಲಕ್ಷ ಸಾಮಾಜಿಕ ಮಾಧ್ಯಮ ಕಾರ್ಯಕರ್ತರ ಐಟಿ ಸೆಲ್ ಅನ್ನು ಆರಂಭಿಸಲು ಈ ಹಿಂದೆಯೇ ಮಹಾರಾಷ್ಟ್ರ ಬಿಜೆಪಿ ನಿರ್ಧರಿಸಿದೆ ಎಂದು ಕಳೆದ ವರ್ಷ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X