ವಂದೇ ಭಾರತ್ ರೈಲಿಗೆ ಚಾಲನೆ ನೀಡುವ ಸಮಯದಲ್ಲಿ ಆಯತಪ್ಪಿ ಬಿಜೆಪಿ ಶಾಸಕಿ ರೈಲ್ವೇ ಹಳಿ ಮೇಲೆ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಇಟಾವಾ ರೈಲು ನಿಲ್ದಾಣದಲ್ಲಿ ನಡೆದಿದೆ.
ಆಗ್ರಾ ಮತ್ತು ವಾರಣಾಸಿ ನಡುವೆ ಸಂಚರಿಸುವ ವಂದೇ ಭಾರತ್ ರೈಲಿಗೆ ಮಂಗಳವಾರ ಚಾಲನೆ ನೀಡಲಾಗಿದೆ. ಇಟಾವಾ ರೈಲು ನಿಲ್ದಾಣದಲ್ಲಿ ನಡೆದ ಚಾಲನಾ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ, ಸಚಿವರು ಭಾಗಿಯಾಗಿದ್ದರು.ಈ ವೇಳೆ, ಇಟಾವಾದ ಬಿಜೆಪಿ ಶಾಸಕಿ ಸದರ್ ಸರಿತಾ ಬದೌರಿಯಾ ಅವರು ಆಯತಪ್ಪಿ ಪ್ಲಾಟ್‌ಫಾರ್ಮ್‌ನಿಂದ ರೈಲ್ವೇ ಹಳಿ ಮೇಲೆ ಬಿದ್ದಿದ್ದಾರೆ.
ವಂದೇ ಭಾರತ್‌ಗೆ ಹಸಿರು ನಿಶಾನೆ ತೋರಿಸಿ, ಫೋಟೋ ತೆಗೆದುಕೊಳ್ಳಲು ಶಾಸಕಿ ಮುಂದಾಗಿದ್ದಾರೆ. ಈ ವೇಳೆ, ಸ್ಥಳದಲ್ಲಿದ್ದ ಜನರ ನಡುವೆ ನೂಕು-ನುಗ್ಗಲು ನಡೆದಿದೆ. ಪರಿಣಾಮ ಶಾಸಕಿ ಹಳಿ ಮೇಲೆ ಬಿದ್ದಿದ್ದಾರೆ. ಸದ್ಯ, ಅವರಿಗೆ ಯಾವುದೇ ಅಪಾಯಗಳು ಸಂಭವಿಸಿಲ್ಲ.