ಹೋಟೆಲ್ ಉದ್ಯಮಿ ಜಯ್‌ಶೆಟ್ಟಿ ಅವರನ್ನು 2001ರಲ್ಲಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಚೋಟಾ ರಾಜನ್‌ಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಮೊಕಾಕ ಕೋರ್ಟ್ 2024 ಮೇ 30ರಂದು ಚೋಟಾ ರಾಜನ್ ಮತ್ತು ಆನ ಸಹಚರರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವ್ಯಕ್ತಿ, ಕುಟುಂಬ, ಜಾತಿ ಪ್ರತಿಷ್ಠೆಯ ಕಣ ಚನ್ನಪಟ್ಟಣ
ಇದು ಚೋಟಾ ರಾಜನ್‌ಗೆ ವಿಧಿಸಲಾಗಿರುವ ಎರಡನೇ ಜೀವಾವಧಿ ಶಿಕ್ಷೆಯಾಗಿದ್ದು, ಪತ್ರಕರ್ತ ಜ್ಯೋತಿರ್ಮಯ್ ಡೇ ಅವರ ಹತ್ಯೆಗೆ ಸಂಬಂಧಿಸಿದಂತೆ 2011ರಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.
ನ್ಯಾಯಮೂರ್ತಿಗಳಾದ ರೇವತಿ ಮೊಹಿತೆ ಹಾಗೂ ಪೃಥ್ವಿರಾಜ್ ಚವಾಣ್ ನೇತೃತ್ವದ ಪೀಠ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿತು. ಚೋಟಾ ರಾಜನ್ ವಿಶೇಷ ಮೊಕಾಕ ಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ.
2001ರ ಮೇ 4 ರಂದು ಚೋಟಾ ಗ್ಯಾಂಗ್ ಸದಸ್ಯರು ಚೋಟಾಗೆ ಹಣ ನೀಡದ ಕಾರಣ ಮುಂಬೈನ ಗೋಲ್ಡ್ ಕ್ರೌನ್ ಹೋಟೆಲ್‌ನ ಮಾಲೀಕರಾದ ಜಯ್‌ಶೆಟ್ಟಿಯನ್ನು ಗುಂಡಿಕ್ಕಿ ಕೊಂದಿದ್ದರು.
