‘ಜಾತಿ ತಾರತಮ್ಯ’ ಪ್ರತಿಭಟಿಸಿದ್ದಕ್ಕೆ ಕ್ಯಾಬ್ ಚಾಲಕನ ಖಾತೆ 100 ವರ್ಷ ಸಸ್ಪೆಂಡ್

Date:

ಕ್ಯಾಬ್‌ನಲ್ಲಿ ಪ್ರಯಾಣಿಕರು ನಿರ್ದಿಷ್ಟ ಸಮುದಾಯದ ವಿರುದ್ಧ ಬಳಸಿದ ಜಾತಿ ನಿಂದನಾತ್ಮಕ ಮಾತುಗಳನ್ನು ಪ್ರಶ್ನಿಸಿ, ಅವರನ್ನು ಕಾರಿನಿಂದ ಕೆಳಗಿಳಿಸಿದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. Rapido ಚಾಲಕ ಅಂಕಿತ್ ಕುಮಾರ್ ಅವರು ತಮ್ಮ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತದ್ದ ಪ್ರಯಾಣಿಕರು ಎಸಗಿದ ಜಾತಿ ನಿಂದನೆಯನ್ನು ವಿರೋಧಿಸಿದ್ದರು. ಆದರೆ, ಜಾತಿ ನಿಂದನೆಯನ್ನು ವಿರೋಧಿಸಿದ್ದಕ್ಕಾಗಿ ರ‍್ಯಾಪಿಡೋ ಸಂಸ್ಥೆಯು ಚಾಲಕ ಅಂಕಿತ್ ಅವರ ಖಾತೆಯನ್ನು ಬರೋಬ್ಬರಿ ‘99 ವರ್ಷ 11 ತಿಂಗಳು’ ಅಂದರೆ 100 ವರ್ಷಗಳ ಕಾಲ ಸಸ್ಪೆಂಡ್ ಮಾಡಿದೆ. ಆದಾಗ್ಯೂ, ಭಾರತೀಯ ರೈಲ್ವೆ ಉದ್ಯೋಗಿಗಳಾಗಿದ್ದ ಆ ಪ್ರಯಾಣಿಕರ ವಿರುದ್ಧ ಸಂಸ್ಥೆಯಾಗಲಿ ಅಥವಾ ರೈಲ್ವೆ ಇಲಾಖೆಯಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ.

- Advertisement -

ಈ ಘಟನೆಯು ‘ಪರಿಶಿಷ್ಟ ಜಾತಿ/ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ’ಯ ಉಲ್ಲಂಘನೆ ಮತ್ತು ಗಿಗ್ ವಲಯದಲ್ಲಿನ ಆಡಳಿತಾತ್ಮಕ ತಾರತಮ್ಯವನ್ನು ಎತ್ತಿಹಿಡಿದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

ಸಾರ್ವಜನಿಕ ಅಥವಾ ಸರ್ಕಾರಿ ವಲಯದ ಉದ್ಯೋಗಿಗಳಿಗೆ ಜಾತಿ ತಾರತಮ್ಯ ಎದುರಾದರೆ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಆಂತರಿಕ ದೂರು ಸಮಿತಿಗಳ ರಕ್ಷಣೆ ಸಿಗುತ್ತದೆ. ಆದರೆ, ಭಾರತದ ಬೃಹತ್ ಖಾಸಗಿ ವಲಯವಾಗಿ ಬೆಳೆದಿರುವ ‘ಗಿಗ್ ಎಕಾನಮಿ’ಯಲ್ಲಿ (ಕ್ಯಾಬ್, ಡೆಲಿವರಿ ಆ್ಯಪ್‌ಗಳು) ಇಂತಹ ಯಾವುದೇ ಕಾನೂನಾತ್ಮಕ ರಕ್ಷಣೆಗಳಿಲ್ಲ. ಭಾರತೀಯ ಸಂವಿಧಾನದ ವಿಧಿ 14, 15 ಹಾಗೂ 19(1)(g) ಮೂಲಕ ಸಮಾನತೆಯ ಹಕ್ಕನ್ನು ನೀಡಲಾಗಿದ್ದರೂ, ಅವು ಹೆಚ್ಚಾಗಿ ಸರ್ಕಾರಿ ರಕ್ಷಣೆಗೆ ಮಾತ್ರ ಸೀಮಿತವಾಗಿವೆ ಎಂಬ ಕಳವಳಕ್ಕೂ ಕಾರಣವಾಗಿವೆ.

ಖಾಸಗಿ ವಲಯದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ತಡೆಗೆ ‘ಪೋಶ್’ (POSH) ಕಾಯ್ದೆ ಮತ್ತು ವಿಕಲಚೇತನರ ಹಕ್ಕುಗಳ ಕಾಯ್ದೆಗಳಿವೆಯಾದರೂ, ಜಾತಿ ಆಧಾರಿತ ತಾರತಮ್ಯ ತಡೆಯಲು ಯಾವುದೇ ಸ್ಪಷ್ಟ ಕಾಯ್ದೆಗಳಿಲ್ಲ. ಅದರಲ್ಲೂ ರ‍್ಯಾಪಿಡೋ, ಓಲಾ, ಜೊಮ್ಯಾಟೋದಂತಹ ಸಂಸ್ಥೆಗಳು ತಮ್ಮ ಗಿಗ್ ಕಾರ್ಮಿಕರನ್ನು ‘ಸಹಭಾಗಿಗಳು’ (Partners) ಅಥವಾ ‘ಸ್ವತಂತ್ರ ಗುತ್ತಿಗೆದಾರರು’ ಎಂದು ಪರಿಗಣಿಸುವುದರಿಂದ, ಇವರು ಸಾಂಪ್ರದಾಯಿಕ ಕಾರ್ಮಿಕ ಕಾಯ್ದೆಗಳ ವ್ಯಾಪ್ತಿಯಿಂದಲೇ ಹೊರಗುಳಿಯುತ್ತಾರೆ.

2014ರಲ್ಲಿ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠವು, ಓಲಾ ಚಾಲಕರನ್ನು ಪೋಶ್‌ ಕಾಯ್ದೆಯಡಿ ‘ಉದ್ಯೋಗಿಗಳು’ ಎಂದೇ ಪರಿಗಣಿಸಿ ಲೈಂಗಿಕ ಕಿರುಕುಳ ದೂರಿಗೆ ಸ್ಪಂದಿಸದ ಕಂಪನಿಗೆ ದಂಡ ವಿಧಿಸಿತ್ತು. ಆದರೆ, ಓಲಾ ಸಂಸ್ಥೆ ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದು, 2024ರ ಅಕ್ಟೋಬರ್‌ನಲ್ಲಿ ವಿಭಾಗೀಯ ಪೀಠವು ಆ ತೀರ್ಪಿಗೆ ತಡೆ ನೀಡಿದೆ. ಆ್ಯಪ್‌ಗಳಲ್ಲಿ ಕಾರ್ಯನಿರ್ವಹಿಸುವ ಚಾಲಕರು ಕೇವಲ ‘ಬಳಕೆದಾರರೇ’ ಹೊರತು ಉದ್ಯೋಗಿಗಳಲ್ಲ ಎಂಬುದು ಸಂಸ್ಥೆಗಳ ವಾದ. ಲಿಂಗಸಮಾನತೆ ಕಾಯ್ದೆಗಳಿಗೇ ಈ ಪರಿಸ್ಥಿತಿಯಿರುವಾಗ, ಖಾಸಗಿ ವಲಯದಲ್ಲಿ ಜಾತಿ ತಾರತಮ್ಯದ ದೂರುಗಳಿಗೆ ಜಾಗವೇ ಇಲ್ಲದಂತಾಗಿದೆ.

ಈ ಹಿಂದೆ 2006ರಿಂದ 2019ರ ನಡುವೆ ಖಾಸಗಿ ವಲಯದಲ್ಲೂ ಮೀಸಲಾತಿ ಮತ್ತು ಸಮಾನ ಅವಕಾಶಗಳ ಆಯೋಗ ರಚಿಸುವ ಕುರಿತು ಸಚಿವರ ಸಮಿತಿ ಚರ್ಚೆ ನಡೆಸಿತ್ತಾದರೂ, ಉದ್ಯಮ ವಲಯದ ತೀವ್ರ ವಿರೋಧದಿಂದಾಗಿ ಯಾವುದೇ ಕಾನೂನು ಜಾರಿಯಾಗಲಿಲ್ಲ.

ಗಿಗ್ ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ಇಂತಹ ಅನ್ಯಾಯಗಳು ಆಗದಂತೆ ತಡೆಯಲು ಶೈಕ್ಷಣಿಕ ಮತ್ತು ಕಾನೂನು ತಜ್ಞರು ಮೂರು ಪ್ರಮುಖ ಸುಧಾರಣೆಗಳಿಗೆ ಒತ್ತಾಯಿಸುತ್ತಿದ್ದಾರೆ:

  • ಗಿಗ್ ಕಂಪನಿಗಳು ಮತ್ತು ಕಾರ್ಮಿಕರ ನಡುವಿನ ಸಂಬಂಧವನ್ನು ಮರುಪರಿಶೀಲಿಸಿ, ಅವರಿಗೆ ಕಾರ್ಮಿಕ ಕಾಯ್ದೆಯಡಿ ಕಾನೂನಾತ್ಮಕ ಉದ್ಯೋಗಿ ಸ್ಥಾನಮಾನ ನೀಡುವುದು.
  • ಖಾಸಗಿ ವಲಯ ಮತ್ತು ಗಿಗ್ ಆ್ಯಪ್‌ಗಳ ನೀತಿ ಸಂಹಿತೆಯಲ್ಲಿ ‘ಜಾತಿ ತಾರತಮ್ಯ’ವನ್ನು ನಿರ್ದಿಷ್ಟವಾಗಿ ಅಪರಾಧ ಎಂದು ಸೇರ್ಪಡೆಗೊಳಿಸುವುದು.
  • ಕಂಪನಿಯ ಹಸ್ತಕ್ಷೇಪವಿಲ್ಲದ, ಸ್ವತಂತ್ರ ದೂರು ನಿವಾರಣಾ ಮತ್ತು ತನಿಖಾ ಮಂಡಳಿಯನ್ನು ಸ್ಥಾಪಿಸುವುದು.

ಈ ಸುಧಾರಣೆಗಳನ್ನು ಸರ್ಕಾರಗಳು ಜಾರಿಗೆ ತರುವವರೆಗೂ, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಅಂಕಿತ್ ಕುಮಾರ್‌ರಂತಹ ಸಾಮಾನ್ಯ ಗಿಗ್ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುವುದು ತಪ್ಪುವುದಿಲ್ಲ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಜೊತೆ ನಾಳೆ ಖರ್ಗೆ ಸಭೆ: ಎಸ್‌ಐಆರ್, ಕ್ಷೇತ್ರ ಪುನರ್‌ವಿಂಗಡಣೆ, ಮಹಿಳಾ ಮೀಸಲಾತಿ ಕುರಿತು ಚರ್ಚೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್), ಕ್ಷೇತ್ರ ಮರುವಿಂಗಡಣೆ ಮತ್ತು...

ಏಷ್ಯನ್ ಪ್ಯಾರಾ ಗೇಮ್ಸ್: ಮಹಿಳೆಯರ 200 ಮೀಟರ್ಸ್ ಓಟದಲ್ಲಿ ಸಿಮ್ರಾನ್‌ಗೆ ಚಿನ್ನ, ತೇಜಲ್‌ಬೆನ್‌ಗೆ ಕಂಚು

ಮಂಗಳವಾರ ಜಪಾನಿನ ನಗೋಯಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನ ಮಹಿಳೆಯರ 200...

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ ನಡುವೆ ಟ್ರಂಪ್‌ಗೆ ಅಗ್ನಿಪರೀಕ್ಷೆ!

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್...