ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್‌ನ ಬಾತ್‌ರೂಮ್ ಮತ್ತು ಟಾಯ್ಲೆಟ್‌ನಲ್ಲಿ ಹಾಸ್ಟೆಲ್ ಸಿಬ್ಬಂದಿಗಳೇ ಹಿಡನ್ ಕ್ಯಾಮೆರಾ ಇಟ್ಟು, ವಿದ್ಯಾರ್ಥಿನಿಯರ ಖಾಸಗಿ ದೃಶ್ಯಗಳನ್ನು ವಿಡಿಯೋ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಹಾಸ್ಟೆಲ್‌ನ ನೂರಾರು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ.
ತೆಲಂಗಾಣದ ಮೇಡ್ಚಲ್‌ನಲ್ಲಿರುವ ಸಿಎಂಆರ್ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಘಟನೆ ನಡೆಸಿದೆ. ಹಾಸ್ಟೆಲ್ ಬಾತ್‌ರೂಮ್‌ನಲ್ಲಿ ಹಿಡನ್ ಕ್ಯಾಮೆರಾ ಇಡಲಾಗಿದೆ. ಸಿಬ್ಬಂದಿಗಳು ವಿದ್ಯಾರ್ಥಿನಿಯರ ಖಾಸಗಿ ದೃಶ್ಯಗಳಿರುವ 300ಕ್ಕೂ ಹೆಚ್ಚು ವಿಡಿಯೋಗಳನ್ನು ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ. ಕ್ರಮಕ್ಕೆ ಆಗ್ರಹಿಸಿದ್ದಾರೆ.
ಡಿಸೆಂಬರ್ 31ರ ನಡುರಾತ್ರಿ ಹಾಸ್ಟೆಲ್‌ನಲ್ಲಿ ಹೊಸವರ್ಷದ ಸಂಭ್ರಮಾಚರಣೆ ಆಯೋಜಿಸಲಾಗಿತ್ತು. ಕಾರ್ಯಕ್ರಮ ಮುಗಿಸಿ ಹಾಸ್ಟೆಲ್‌ಗೆ ತೆರಳಿದ ವಿದ್ಯಾರ್ಥಿನಿಯರಿಗೆ ಬಾತ್‌ರೂಮ್‌ನಲ್ಲಿ ಹಿಡನ್ ಕ್ಯಾಮೆರಾ ಇರುವುದು ಕಂಡುಬಂದಿದೆ. ಬಾತ್ ರೂಂನ ವೆಂಟಿಲೇಟರ್ ಮತ್ತು ಕನ್ನಡಿಯ ಮೇಲೆ ಕೈಗಳ ಅಚ್ಚೆಯ ಗುರುತುಗಳು ಕಂಡುಬಂದಿದ್ದು, ಕನ್ನಡಿಯ ಬಳಿ ಕ್ಯಾಮೆರಾ ಅಳವಡಿಸಿರುವುದು ಪತ್ತೆಯಾಗಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
Privacy Breach Triggers Protest at CMR College
— Informed Alerts (@InformedAlerts) January 2, 2025
Late Wednesday night, female students of CMR Engineering College in Medchal protested over allegations that hostel cooking staff secretly recorded videos in bathrooms. Chanting "We want justice," they demanded immediate action. pic.twitter.com/v1esnIKLvF
ಅಲ್ಲದೆ, ಕಳೆದ ಮೂರು ತಿಂಗಳಿನಿಂದ ಸುಮಾರು 300 ವಿಡಿಯೋಗಳನ್ನು ಸೆರೆಹಿಡಿಯಲಾಗಿದೆ. ಹಾಸ್ಟೆಲ್‌ನ ಅಡುಗೆ ಸಿಬ್ಬಂದಿಗಳೇ ಈ ಕೃತ್ಯ ಎಸಗಿದ್ದಾರೆ ಎಂದು ಪ್ರತಿಭಟನೆ ನಡೆಸಿರುವ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ವಿದ್ಯಾರ್ಥಿನಿಯರ ಪ್ರತಿಭಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹಾಸ್ಟೆಲ್‌ಗೆ ಭೇಟಿ ನೀಡಿದ್ದು, ವಿದ್ಯಾರ್ಥಿನಿಯರಿಂದ ದೂರು ಪಡೆದಿದ್ದಾರೆ. ಏಳು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳಿಂದ 12 ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.