ಕ್ಯಾನ್ಸರ್ ರೋಗಿಗಳು ದನದ ಕೊಟ್ಟಿಗೆ ಸ್ವಚ್ಛಗೊಳಿಸಿ ಅಲ್ಲಿ ಮಲಗುವುದರಿಂದ ಕ್ಯಾನ್ಸರ್ ರೋಗ ಗುಣಮುಖವಾಗುತ್ತದೆ ಎಂದು ಉತ್ತರ ಪ್ರದೇಶದ ಸಚಿವ ಸಂಜಯ್ ಸಿಂಗ್ ಗಂಗ್ವಾರ್ ಹೇಳಿದ್ದಾರೆ.
ಕಬ್ಬು ಬೆಳೆ ಅಭಿವೃದ್ಧಿಯ ಸಚಿವ ಗಂಗ್ವಾರ್, ಭಾನುವಾರ ತಮ್ಮ ಕ್ಷೇತ್ರವಾದ ಪಿಲಿಭಿತ್‌ನ ಪಕಾಡಿಯಾ ನೌಗಾವಾನ್‌ನಲ್ಲಿ ಗೋಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಜನರನ್ನುದ್ದೇಶಿಸಿ ಮಾತನಾಡುತ್ತಾ ಈ ಹೇಳಿಕೆ ನೀಡಿದರು. ಹಸುಗಳಿಗೆ ಮೇವು ನೀಡಿ ಸಾಕುವುದರಿಂದ ರಕ್ತದೊತ್ತಡ ಸಮಸ್ಯೆಯು ಕೇವಲ 10 ದಿನಗಳಲ್ಲಿ ಅರ್ಧದಷ್ಟು ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಜನರು ತಮ್ಮ ವಿವಾಹ ವಾರ್ಷಿಕೋತ್ಸವ ಮತ್ತು ಮಕ್ಕಳ ಜನ್ಮದಿನವನ್ನು ಗೋಶಾಲೆಗಳಲ್ಲಿ ಆಚರಿಸುವಂತೆ ಒತ್ತಾಯಿಸಿದ ಸಚಿವರು ಕ್ಯಾನ್ಸರ್ ರೋಗಿಗಳು ಗೋಶಾಲೆಗಳನ್ನು ಸ್ವಚ್ಛಗೊಳಿಸಿ ಅದರಲ್ಲಿ ಮಲಗುವುದರಿಂದ ತಮ್ಮ ರೋಗ ಗುಣಪಡಿಸಿಕೊಳ್ಳಬಹುದು. ಹಸುಗಳನ್ನು ಸಾಕಿ ಅವುಗಳ ಸೇವೆ ಮಾಡುವ ಮೂಲಕ ರಕ್ತದೊತ್ತಡದ ಔಷಧಿಗಳ ಪ್ರಮಾಣವನ್ನು 10 ದಿನಗಳಲ್ಲಿ ಅರ್ಧಕ್ಕೆ ಇಳಿಸಬಹುದು ಎಂದು ಅವರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎಚ್‌ಡಿಕೆ V/s ಎಡಿಜಿಪಿ ಚಂದ್ರಶೇಖರ್- ಇದು ಸಾಮಾನ್ಯ ವಿದ್ಯಮಾನವಲ್ಲ
‘‘ರಕ್ತದೊತ್ತಡದ ರೋಗಿಗಳಿದ್ದರೆ ಕೇಳಿ. ಇಲ್ಲಿ ಹಸುಗಳಿವೆ. ಆ ವ್ಯಕ್ತಿ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಹಸುವಿನ ಸೇವೆ ಮಾಡುವುದರಿಂದ ತನ್ನ ಔಷಧವನ್ನು ಅರ್ಧ ಪ್ರಮಾಣಕ್ಕೆ ಇಳಿಸಬಹುದು. ಆ ವ್ಯಕ್ತಿ ರಕ್ತದೊತ್ತಡಕ್ಕೆ ಔಷಧಿಯಾಗಿ 20 ಮಿ.ಗ್ರಾಂ ಡೋಸ್ ತೆಗೆದುಕೊಳ್ಳುತ್ತಿದ್ದರೆ. ಹಸುವಿನ ಸೇವೆಯಿಂದ 10 ದಿನಗಳಲ್ಲಿ 10 ಮಿಗ್ರಾಂಗೆ ಔಷಧಿ ಪ್ರಮಾಣ ಇಳಿಯುತ್ತದೆ” ಎಂದು ಅವರು ಕರೆ ನೀಡಿದ್ದಾರೆ.
” ನೀವು ಹಸುವಿನ ಬೆರಣಿ ಸುಟ್ಕರೆ ಸೊಳ್ಳೆಗಳಿಂದ ನಿಮಗೆ ಪರಿಹಾರ ಸಿಗುತ್ತದೆ. ಆದ್ದರಿಂದ, ಹಸು ಉತ್ಪಾದಿಸುವ ಎಲ್ಲವೂ ಒಂದು ರೀತಿಯಲ್ಲಿ ಉಪಯುಕ್ತವಾಗಿದೆ,” ಎಂದು ಅವರು ಪ್ರತಿಪಾದಿಸಿದ್ದಾರೆ.
