ಜಾತಿ ನಿಂದನೆ | ದಲಿತನಾಗಿದ್ದಕ್ಕೆ ಉದ್ಯೋಗ ಸಿಕ್ಕಿದೆಯೆಂದು ನಿಂದಿಸಿದ್ದ NFI ಅಧಿಕಾರಿಗಳು; ಎಫ್‌ಐಆರ್ ದಾಖಲು

Date:

Advertisements

ಕೆಲಸ ಸ್ಥಳದಲ್ಲಿ ದಲಿತ ಅಧಿಕಾರಿಗಳಿಗೆ ‘ನೀವು ದಲಿತರಾಗಿರುವ ಕಾರಣಕ್ಕೆ ನಿಮಗೆ ಉದ್ಯೋಗ ಸಿಕ್ಕಿದೆ’ ಎಂದು ಜಾತಿ ನಿಂದನೆ ಮಾಡಿರುವ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ನ್ಯಾಷನಲ್ ಫೌಡೇಷನ್ ಫಾರ್ ಇಂಡಿಯಾದ (ಎನ್‌ಎಫ್‌ಐ) ಅಧಿಕಾರಿ ಇಪ್ಸಾ ಪ್ರತಿಬಿಂಬತ ಸಾರಂಗಿ ಮತ್ತು ಬಿರಾಜ್ ಪಟ್ನಾಯಕ್ ಸೇರಿದಂತೆ ಹಲವರು ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಆರೋಪಿಗಳು ಎನ್‌ಎಫ್‌ಐ ಅಧಿಕಾರಿಯಾಗಿರುವ ಪರಿಶಿಷ್ಟ ಜಾತಿ (ಧೋಬಾ) ಸಮುದಾಯದ ಮಧುಸೂದನ್ ಸೇಥಿ ಅವರನ್ನು ಜಾತಿ ಹೆಸರಿನಿಂದ ನಿಂದಿಸಿ, ಅಪಮಾನ ಮಾಡಿದ್ದಾರೆ ಎಂದು ವರದಿಯಾಗಿದೆ. ಸೇಥಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಅವರ ದೂರಿನ ಆಧಾರದ ಮೇಲೆ, ಭುವನೇಶ್ವರದ ನಯಪಲ್ಲಿ ಪೊಲೀಸರು ಜಾತಿ ಆಧಾರಿತ ತಾರತಮ್ಯ, ಕೆಲಸದ ಸ್ಥಳದಲ್ಲಿ ಕಿರುಕುಳ, ಮೌಖಿಕ ನಿಂದನೆ, ಆರ್ಥಿಕ ಶೋಷಣೆಗೆ ಸಂಬಂಧಿತ ಬಿಎನ್‌ಎಸ್‌ ಸೆಕ್ಷನ್‌ಗಳು ಹಾಗೂ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

Advertisements

ಸೇಥಿ ಅವರ ದೂರಿನಲ್ಲಿ, “2024ರ ಅಕ್ಟೋಬರ್ 1ರಂದು ನನ್ನನ್ನು ಎನ್‌ಎಫ್‌ಐಗೆ ನೇಮಕ ಮಾಡಲಾಯಿತು. ನಾಲ್ಕು ಹಂತದ ಕಠಿಣ ಸಂದರ್ಶನಗಳನ್ನು ಎದುರಿಸಿದ ಬಳಿಕ, 380 ಅರ್ಜಿದಾರರಲ್ಲಿ ನನ್ನ ನ್ನು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ನೇಮಕ ಮಾಡಲಾಗಿದೆ. ಆದರೆ, ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ತಮ್ಮ ಮೇಲೆ ಹಿರಿಯ ಅಧಿಕಾರಿಗಳು, ವಿಶೇಷವಾಗಿ ಇಪ್ಸಾ ಪ್ರತಿಬಿಂಬತ ಸಾರಂಗಿ ಮತ್ತು ಬಿರಾಜ್ ಪಟ್ನಾಯಕ್ ಅವರು ಜಾತಿ ಆಧಾರಿತ ತಾರತಮ್ಯ ಮತ್ತು ಕಿರುಕುಳ ನೀಡಲು ಆರಂಭಿಸಿದರು. ಅಲ್ಲದೆ, ಹಣ ಸಂಗ್ರಹಿಸಲು ನನ್ನ ಜಾತಿ ಗುರುತನ್ನು ದುರುಪಯೋಗ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು” ಎಂದು ಆರೋಪಿಸಿದ್ದಾರೆ.

“ಕಚೇರಿಯಲ್ಲಿ ಉದ್ದೇಶಪೂರ್ವಕವಾಗಿ ನನಗೆ ವೈ-ಫೈ, ಕುರ್ಚಿಗಳು ಮತ್ತು ಫೈಲಿಂಗ್ ಕ್ಯಾಬಿನೆಟ್‌ಗಳಂತಹ ಮೂಲಭೂತ ಕಚೇರಿ ಸೌಕರ್ಯಗಳನ್ನು ಬಳಸಲು ಅವಕಾಶ ನೀಡಲಿಲ್ಲ. ನನಗೆ ಅಡುಗೆಮನೆಯಲ್ಲಿ ಕುಳಿತ ಕೆಲಸ ಮಾಡುವಂತೆ ಒತ್ತಾಯಿಸಿದ್ದಾರೆ. ನಿರಂತರವಾಗಿ ಅವಮಾನಿಸಿದ್ದಾರೆ. ಪ್ರತ್ಯೇಕವಾಗಿ ಕೂರಿಸಿ ಜಾತಿ ದೌರ್ಜನ್ಯ ಎಸಗಿದ್ದಾರೆ” ಎಂದು ಸೇಥಿ ಆರೋಪಿಸಿದ್ದಾರೆ.

“ಸಾರಂಗಿ ಮತ್ತು ಪಟ್ನಾಯಕ್ ಇಬ್ಬರೂ ಸೇರಿ, ಆದಿವಾಸಿ ನಾಯಕ ಬಿರ್ಸಾ ಮುಂಡಾ ಅವರನ್ನು “‘ಭಯೋತ್ಪಾದಕನೆಂದು ಅಪಮಾನಿಸಿದ್ದಾರೆ. ನನ್ನ ಬಳಿ ಇಟ್ಟುಕೊಂಡಿದ್ದ ಬುದ್ಧನ ಪ್ರತಿಮೆಯನ್ನು ಹೊಡೆದುಹಾಕಿದ್ದಾರೆ. ಅಂಬೇಡ್ಕರ್ ಭಾವಚಿತ್ರವಿದ್ದ ಸಂವಿಧಾನ ಭವನದ ಮರದ ಪ್ರತಿಕೃತಿಯನ್ನು ಕಸದ ಬುಟ್ಟಿಗೆ ಎಸೆದು ಅವಮಾನಿಸಿದ್ದಾರೆ” ಎಂದು ಅವರು ವಿವರಿಸಿದ್ದಾರೆ.

“2024ರ ಅಕ್ಟೋಬರ್ 15ರಂದು ತಂಪಾರ ಗೋಪಾಲಪುರ ರೆಸಾರ್ಟ್‌ನಲ್ಲಿ ತರಬೇತಿ ನೀಡುತ್ತಿದ್ದ ಸಮಯದಲ್ಲಿ, ನನಗೆ ಈಜುಕೊಳವನ್ನು ಬಳಸಲು ಸಾರಂಗಿ ಬಿಡಲಿಲ್ಲ. ‘ಧೋಬಾ ಜಾತಿಯ ಜನರು ಈಜುಕೊಳದಲ್ಲಿ ಸ್ನಾನ ಮಾಡಲು ಅರ್ಹರಲ್ಲ. ಅವರು ನಮ್ಮ ಮನೆಯ ಬಟ್ಟೆಗಳನ್ನು ಕೆರೆಯಲ್ಲಿ ತೊರೆಯಲು ಮಾತ್ರವೇ ಅರ್ಹರು’ ಎಂಬುದಾಗಿ ಜಾತಿ ನಿಂದನೆ ಮಾಡಿದ್ದಾರೆ” ಎಂದು ಸೇಥಿ ಅವರು ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X