ಮುಂದಿನ ಜನಗಣತಿಯಲ್ಲಿ ದೇಶಾದ್ಯಂತ ಜಾತಿಗಣತಿಯು ಭಾಗವಾಗಿರಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸಂಪುಟ ಸಭೆಯ ನಂತರ ಮಾತನಾಡಿದ ಅವರು ಜನಗಣತಿಯಲ್ಲಿ ಕೇಳುವ ಪ್ರಶ್ನೆಗಳಲ್ಲಿ ಜಾತಿಯ ಪ್ರಶ್ನೆಯೂ ಸೇರ್ಪಡೆಗೊಂಡಿರುತ್ತದೆ. ಈ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಪ್ರತಿಪಕ್ಷಗಳು ಆಗಾಗ್ಗೆ ಮತ್ತು ತೀವ್ರವಾಗಿ ಎತ್ತುತ್ತಿರುವ ಬೇಡಿಕೆಯಾದ ಸರ್ಕಾರದ ಈ ಪ್ರಮುಖ ನಿರ್ಧಾರವು ಬಿಹಾರದಲ್ಲಿ ನಿರ್ಣಾಯಕ ವಿಧಾನಸಭಾ ಚುನಾವಣೆಗೆ ಕೆಲ ತಿಂಗಳುಗಳು ಬಾಕಿ ಇರುವಾಗ ಬಂದಿದೆ.
2023ರ ಅಕ್ಟೋಬರ್‌ನಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸರ್ಕಾರ ರಾಷ್ಟ್ರೀಯ ಜನತಾ ದಳ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾಗ ಜಾತಿ ಸಮೀಕ್ಷೆಯನ್ನು ನಡೆಸಿತು.
ಬಿಹಾರವು ಜಾತಿ ಗಣತಿ ದತ್ತಾಂಶವನ್ನು ಬಿಡುಗಡೆ ಮಾಡಿದ ಮೊದಲ ರಾಜ್ಯವಾಯಿತು. ರಾಜ್ಯದ ಜನಸಂಖ್ಯೆಯ ಶೇ. 36 ರಷ್ಟು ಅತೀ ಹಿಂದುಳಿದ ವರ್ಗ, ಶೇ. 27.1 ರಷ್ಟು ಹಿಂದುಳಿದ ವರ್ಗ,ಶೇ. 19.7 ರಷ್ಟು ಪರಿಶಿಷ್ಟ ಜಾತಿ, ಮತ್ತು ಶೇ. 1.7 ರಷ್ಟು ಜನರು ಪರಿಶಿಷ್ಟ ಪಂಗಡಗಳಿಗೆ ಸೇರಿದವರು ಎಂದು ಸಮೀಕ್ಷೆಯು ತಿಳಿಸಿತ್ತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಭಾಗವತ್ ಅಹಿಂಸೆಯ ಮಾತಾಡಿದ್ದಾರೆ; ಅಂದಮೇಲೆ ಸಿದ್ದರಾಮಯ್ಯರ ಹೇಳಿಕೆಯಲ್ಲಿ ತಪ್ಪೇನಿದೆ?
Big news Breaking now:
— Rajdeep Sardesai (@sardesairajdeep) April 30, 2025
Union Cabinet greenlights caste survey in upcoming census. Next census will include caste enumeration. @RahulGandhi has made the demand for a caste census his core political plank for the last couple of years. Now Modi govt has acted. Qs is: what after a…