ಅಸ್ಸಾಂ ಪೊಲೀಸರು ಮತ್ತು ಜನಸಮೂಹದ ನಡುವಿನ ಘರ್ಷಣೆಯಲ್ಲಿ ಅಸ್ಸಾಂ ಫಾರೆಸ್ಟ್ ಗಾರ್ಡ್ ಸೇರಿದಂತೆ ಆರು ಮಂದಿ ಸಾವನ್ನಪ್ಪಿ ಹಲವಾರು ಮಂದಿ ಗಾಯಗೊಂಡ ಘಟನೆ ನಡೆದು ಎರಡು ವರ್ಷಗಳ ನಂತರ ಮಂಗಳವಾರ ಸಿಬಿಐ ಕೊಲೆ ಮತ್ತು ಕ್ರಿಮಿನಲ್ ಪಿತೂರಿಯ ಎಫ್‌ಐಆರ್ ದಾಖಲಿಸಿದೆ.
ಮೇಘಾಲಯದ ಹಳ್ಳಿಯೊಂದರ ಬಳಿ ಮರ ಕಳ್ಳಸಾಗಣೆ ಯತ್ನದ ಆರೋಪದಲ್ಲಿ ಈ ಘರ್ಷಣೆ ನಡೆದಿತ್ತು. ಅಸ್ಸಾಂ ಪೊಲೀಸರ ದೂರಿನ ಮೇರೆಗೆ ಪೊಲೀಸ್ ತಂಡದ ಮೇಲಿನ ದಾಳಿ, ಗಲಭೆ, ಸುಲಿಗೆ, ಕೊಲೆಗೆ ಸಂಬಂಧಿಸಿದಂತೆ ಸಿಬಿಐ ಮತ್ತೊಂದು ಪ್ರಕರಣವನ್ನು ದಾಖಲಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ| ನೀತಿ ಸಂಹಿತೆ ಉಲ್ಲಂಘನೆ; ಮೆಹಬೂಬಾ ಮುಫ್ತಿ ವಿರುದ್ಧ ಎಫ್‌ಐಆರ್
ಅಸ್ಸಾಂ ಮತ್ತು ಮೇಘಾಲಯ ಸರ್ಕಾರಗಳು ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಲು ನಿರ್ಧರಿಸಿದ ಬೆನ್ನಲ್ಲೇ ಮೇಘಾಲಯದ ಪಶ್ಚಿಮ ಜೈನ್ತಿಯಾ ಹಿಲ್ಸ್ ಜಿಲ್ಲೆಯ ನಾರ್ಟಿಯಾಂಗ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸ್ಟೀವನ್ಸನ್ ದಖರ್ ಅವರು ನೀಡಿದ ದೂರಿನ ಮೇ ಮಂಗಳರೆಗೆವಾರ ಮೊದಲ ಪ್ರಕರಣ ದಾಖಲಿಸಲಾಗಿದೆ.
2022ರ ನವೆಂಬರ್ 22ರಂದು ಮುಂಜಾನೆ 3 ಗಂಟೆಯ ಸುಮಾರಿಗೆ ಅಸ್ಸಾಂನ ಪಶ್ಚಿಮ ಕರ್ಬಿ ಆಂಗ್ಲಾಂಗ್ ಜಿಲ್ಲೆ ಮತ್ತು ಮೇಘಾಲಯದ ಪಶ್ಚಿಮ ಜೈನ್ತಿಯಾ ಹಿಲ್ಸ್‌ನ ಮುಖೋಹ್ ಗ್ರಾಮದ ಗಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಘಟನೆಯ ನಂತರ, ಅಸ್ಸಾಂ ಪೊಲೀಸರು ಘರ್ಷಣೆಯ ಸಮಯದಲ್ಲಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿರುವುದಾಗಿ ಹೇಳಿಕೊಂಡಿದ್ದಾರೆ. ಈ ಘಟನೆಯಲ್ಲಿ ಅರಣ್ಯ ಸಿಬ್ಬಂದಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.
ಇದನ್ನು ಓದಿದ್ದೀರಾ? ಮುರುಘಾಶ್ರೀ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದ ಸಂತ್ರಸ್ತೆಗೆ ಕಿರುಕುಳ; ಚಿಕ್ಕಪ್ಪನ ವಿರುದ್ಧ ಎಫ್‌ಐಆರ್
ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಗಾಯಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಮೃತರಲ್ಲಿ ಐವರು ಮೇಘಾಲಯದವರಾಗಿದ್ದಾರೆ. “ಅಸ್ಸಾಂ ಪೊಲೀಸರಿಂದ ಅಪ್ರಚೋದಿತ ಗುಂಡಿನ ದಾಳಿ ನಡೆದಿದೆ, ಇದು ಅಮಾನವೀಯ” ಎಂದು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಹೇಳಿದ್ದರು.