ರಾಜ್ಯದಲ್ಲಿನ ನಾಗರಿಕ ಸಂಸ್ಥೆಗಳ ನೇಮಕಾತಿಯಲ್ಲಿನ ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಅಕ್ಟೋಬರ್ 8 ರಂದು ಭಾನುವಾರ ಬೆಳಿಗ್ಗೆ ಪಶ್ಚಿಮ ಬಂಗಾಳ ಹಿರಿಯ ಸಚಿವ ಫಿರ್ಹಾದ್ ಹಕೀಮ್ ಹಾಗೂ ಶಾಸಕ ಮದನ್ ಮಿತ್ರ ಅವರ ಕೋಲ್ಕತ್ತಾದ ನಿವಾಸಗಳ ಮೇಲೆ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರಾಭಿವೃದ್ಧಿ ಮತ್ತು ಮುನ್ಸಿಪಲ್ ವ್ಯವಹಾರಗಳ ಸಚಿವರಾದ ಫಿರ್ಹಾದ್ ಹಕೀಮ್ ಅವರು ಕೋಲ್ಕತ್ತಾದ ಮೇಯರ್ ಕೂಡ ಆಗಿದ್ದಾರೆ. ಅವರು ಟಿಎಂಸಿಯ ಹಿರಿಯ ನಾಯಕರಾಗಿದ್ದು, ಪಕ್ಷದ ಸಂಘಟನೆಯಲ್ಲಿ ಪ್ರಮುಖ ಹಿಡಿತ ಹೊಂದಿದ್ದಾರೆ.
ಸಿಬಿಐ ಅಧಿಕಾರಿಗಳ ತಂಡವು ಕೇಂದ್ರ ಮೀಸಲು ಪಡೆಗಳ ದೊಡ್ಡ ತುಕಡಿಯೊಂದಿಗೆ ದಕ್ಷಿಣ ಕೋಲ್ಕತ್ತಾದ ಚೆಟ್ಲಾ ಪ್ರದೇಶದಲ್ಲಿರುವ ಹಕೀಮ್ ಅವರ ನಿವಾಸವನ್ನು ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ಸಿಬಿಐ ಅಧಿಕಾರಿಗಳು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಸಿಬಿಐ ಶೋಧ ಪ್ರಾರಂಭವಾಗುತ್ತಿದ್ದಂತೆ, ಹಕೀಮ್ ಅವರ ಬೆಂಬಲಿಗರು ಅವರ ಮನೆಯ ಹೊರಗೆ ಜಮಾಯಿಸಿದರು ಮತ್ತು ಪ್ರತಿಭಟನೆಯನ್ನು ಪ್ರಾರಂಭಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ, ಜಾರಿ ನಿರ್ದೇಶನಾಲಯ (ಇಡಿ) ಆಹಾರ ಮತ್ತು ಸರಬರಾಜು ಸಚಿವ ರಥಿನ್ ಘೋಷ್ ಅವರ ನಿವಾಸ ಸೇರಿದಂತೆ ಅನೇಕ ಸ್ಥಳಗಳಲ್ಲಿ ಶೋಧ ನಡೆಸಿತು.
ಈ ಸುದ್ದಿ ಓದಿದ್ದೀರಾ? ಕೇರಳ | ತಪ್ಪು ಮಾಹಿತಿ ನೀಡಿದ ಗೂಗಲ್ ಮ್ಯಾಪ್: ಕಾರು ನದಿಗೆ ಉರುಳಿ ಇಬ್ಬರು ವೈದ್ಯರ ಸಾವು
2014 ಮತ್ತು 2018 ರ ನಡುವೆ ಪಶ್ಚಿಮ ಬಂಗಾಳ ರಾಜ್ಯದ ವಿವಿಧ ನಾಗರಿಕ ಸಂಸ್ಥೆಗಳು ವಿತ್ತೀಯ ಪರಿಗಣನೆಗೆ ವಿರುದ್ಧವಾಗಿ ಸುಮಾರು 1,500 ಜನರನ್ನು ಅಕ್ರಮವಾಗಿ ನೇಮಕ ಮಾಡಿಕೊಂಡಿವೆ ಎಂದು ಸಿಬಿಐ ಆರೋಪಿಸಿದೆ.
ಉತ್ತರ 24 ಪರಗಣ ಜಿಲ್ಲೆಯ ಕಮರ್ಹಾಟಿಯ ಶಾಸಕ ಹಾಗೂ ಮಾಜಿ ಸಚಿವ ಮದನ್ ಮಿತ್ರ ಅವರ ಮನೆ ಮೇಲೂ ಸಿಬಿಐ ದಾಳಿ ನಡೆಸಿದೆ.
ಈ ಹಿಂದೆ ಹಕೀಮ್ ಮತ್ತು ಮದನ್ ಮಿತ್ರ ಇಬ್ಬರನ್ನೂ 2021ರಲ್ಲಿ ನಾರದ ಕುಟುಕು ಕಾರ್ಯಾಚರಣೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. 2014ರಲ್ಲಿ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಮಿತ್ರ ಅವರನ್ನು ಸಿಬಿಐ ಬಂಧಿಸಿತ್ತು.
ಕೋಲ್ಕತ್ತಾ ಹೈಕೋರ್ಟ್‌ನ ಏಕಸದಸ್ಯ ಪೀಠವು ಈ ವರ್ಷ ಏಪ್ರಿಲ್ 21 ರಂದು ಮುನ್ಸಿಪಲ್ ನೇಮಕಾತಿ ಹಗರಣದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆದೇಶಿಸಿತು. ಜಾರಿ ನಿರ್ದೇಶನಾಲಯದ (ಇಡಿ) ಅರ್ಜಿಯನ್ನು ಆಧರಿಸಿ ಈ ಆದೇಶವನ್ನು ಜಾರಿಗೊಳಿಸಲಾಗಿದೆ.