ಪಂಜಾಬ್ ಸಚಿವರ ಅಮೆರಿಕ ಭೇಟಿಗೆ ಅನುಮತಿ ನಿರಾಕರಿಸಿದ ಕೇಂದ್ರ

Date:

Advertisements

ಪಂಜಾಬಿನ ವಿದ್ಯುತ್ ಮತ್ತು ಲೋಕೋಪಯೋಗಿ ಸಚಿವ ಹರ್ಭಜನ್ ಸಿಂಗ್ ಅವರ ನಿಗದಿತ ಅಮೆರಿಕ ಭೇಟಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಾಜಕೀಯ ಅನುಮತಿಯನ್ನು ನಿರಾಕರಿಸಿದ ಬಳಿಕ ಆಪ್ ನೇತೃತ್ವದ ಪಂಜಾಬ್ ಸರ್ಕಾರ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಗಳ ನಡುವೆ ಮತ್ತೆ ಉದ್ವಿಗ್ನತೆ ತಲೆದೋರಿದೆ ಎಂದು ವರದಿಯಾಗಿದೆ.

ಆ.4ರಿಂದ 6ರವರೆಗೆ ಮಸಾಚುಸೆಟ್ಸ್‌ನ ಬಾಸ್ಟನ್ ನಗರದಲ್ಲಿ ನಡೆಯಲಿರುವ ರಾಜ್ಯಶಾಸಕಾಂಗಗಳ ರಾಷ್ಟ್ರೀಯ ಸಮ್ಮೇಳನ(ಎನ್‌ಸಿಎಸ್‌ಎಲ್) ಶಾಸಕಾಂಗ ಶೃಂಗಸಭೆ 2025ರಲ್ಲಿ ಪಾಲ್ಗೊಳ್ಳುವಂತೆ ಸಿಂಗ್ ಅವರನ್ನು ಆಹ್ವಾನಿಸಲಾಗಿತ್ತು. ಇದರೊಂದಿಗೆ ಸಿಂಗ್ ಕೇಂದ್ರದಿಂದ ವಿದೇಶ ಪ್ರಯಾಣಕ್ಕೆ ಅನುಮತಿ ನಿರಾಕರಿಸಲ್ಪಟ್ಟ ಪಂಜಾಬಿನ ನಾಲ್ಕನೇ ಆಪ್ ಸಚಿವರಾಗಿದ್ದಾರೆ.

ಮೂಲಗಳ ಪ್ರಕಾರ ಎಲ್ಲ ರಾಜಕೀಯ ನಾಯಕರು ವಿದೇಶಗಳಿಗೆ ಭೇಟಿ ನೀಡಲು ವಿದೇಶಾಂಗ ಸಚಿವಾಲಯದ ಅನುಮತಿ ಅಗತ್ಯವಾಗಿದೆ. ಸಿಂಗ್ ಪ್ರಕರಣದಲ್ಲಿ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಅನುಮತಿಯನ್ನು ನಿರಾಕರಿಸಲಾಗಿದೆ.

Advertisements

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಸಿಂಗ್, ಶೃಂಗಸಭೆಯು ಅಮೂಲ್ಯಕಲಿಕೆಯ ಹಾಗೂ ವಿಶ್ವದಾದ್ಯಂತ ಇರುವ ಶಾಸಕರು ಮತ್ತು ನೀತಿ ರೂಪಕರೊಂದಿಗೆ ಸಂವಾದದ ಅವಕಾಶವನ್ನು ಒದಗಿಸುತ್ತಿತ್ತು. ಇದು ಪಂಜಾಬಿನ ಪ್ರಯೋಜನಕ್ಕಾಗಿ ಪ್ರಗತಿಪರ ವಿಚಾರಗಳೊಂದಿಗೆ ಮರಳಲು ನೆರವಾಗುತ್ತಿತ್ತು ಎಂದು ಹೇಳಿದರು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬಲಾಢ್ಯರೊಂದಿಗೆ ಜೊತೆಯಾಗುವುದು ಜನದ್ರೋಹ

ಕೇಂದ್ರ ಸರ್ಕಾರದ ನಿರ್ಧಾರವನ್ನು ಟೀಕಿಸಿದ ಆಪ್‌ನ ಪಂಜಾಬ್ ವಕ್ತಾರ ನೀಲ್ ಗರ್ಗ್ ಅವರು, ಅದು ಒಕ್ಕೂಟ ವ್ಯವಸ್ಥೆಯನ್ನು ಹತ್ತಿಕ್ಕುತ್ತಿದೆ ಮತ್ತು ಆಪ್‌ನ ಆಡಳಿತ ಮಾದರಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಕಿಗೆ ಬರುತ್ತದೆ ಎಂಬ ಭೀತಿಯಲ್ಲಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರವು ಕಳೆದ ವರ್ಷ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್, ವಿಧಾನಸಭಾ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಅವರ ವಿದೇಶ ಭೇಟಿಗಳಿಗೆ ಅನುಮತಿಯನ್ನು ನಿರಾಕರಿಸಿತ್ತು. ಅದಕ್ಕೂ ಮುನ್ನ 2022ರಲ್ಲಿ ಆಗಿನ ನವೀಕರಿಸಬಹುದಾದ ಇಂಧನ ಮತ್ತು ಆಡಳಿತ ಸುಧಾರಣಾ ಸಚಿವ ಅಮನ್ ಅರೋರಾ ಅವರೂ ಅನುಮತಿಯಿಂದ ವಂಚಿತರಾಗಿದ್ದರು.

ವಿದೇಶ ಪ್ರಯಾಣಕ್ಕೆ ಅನುಮತಿಯು ಆಡಳಿತಾತ್ಮಕ ವಿಷಯವಾಗಿದೆ, ರಾಜಕೀಯ ವಿಷಯವಲ್ಲ. ಆಪ್ ನಾಯಕರು ಇದಕ್ಕೆ ರಾಜಕೀಯ ಬಣ್ಣ ನೀಡುವುದರಿಂದ ದೂರವಿರಬೇಕು, ಬದಲಿಗೆ ನಿರ್ಧಾರದ ಹಿಂದಿನ ಕಾರಣಗಳಿಗಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಸಂಪರ್ಕಿಸಬೇಕು ಎಂದು ಪಂಜಾಬ್ ಬಿಜೆಪಿ ವಕ್ತಾರ ಅನಿಲ ಸರೀನ್ ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X