2020ರಲ್ಲಿ ಮಾಡಿದ್ದ ಟ್ವೀಟ್‌ವೊಂದಕ್ಕೆ ಸಂಬಂಧಿಸಿದಂತೆ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ, ಪತ್ರಕರ್ತ ಮೊಹಮ್ಮದ್ ಝುಬೇರ್ ವಿರುದ್ಧ ದಾಖಲಾಗಿದ್ದ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಕ್ತಾಯಗೊಳಿಸುವ ವರದಿಯನ್ನು ಸಲ್ಲಿಸಿದ್ದಾರೆ ಎಂದು ಛತ್ತೀಸ್‌ಗಢ ರಾಜ್ಯ ಸರ್ಕಾರವು ಅಧಿಕೃತವಾಗಿ ಛತ್ತೀಸ್‌ಗಢ ಹೈಕೋರ್ಟಿಗೆ ತಿಳಿಸಿರುವುದಾಗಿ ಲೈವ್ ಲಾ ವರದಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ರಮೇಶ್ ಸಿನ್ಹಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ವರ್ಮಾ ಅವರ ಪೀಠದ ಮುಂದೆ ಛತ್ತೀಸ್‌ಗಢ ರಾಜ್ಯ ಸರ್ಕಾರದ ಪರ ವಕೀಲರು ತಮ್ಮ ಅರ್ಜಿಯನ್ನು ಸಲ್ಲಿಸಿದ್ದು, ಈ ಅರ್ಜಿಯನ್ನು ವಿಭಾಗೀಯ ಪೀಠವು ವಿಲೇವಾರಿ ಮಾಡಿರುವುದಾಗಿ ವರದಿ ತಿಳಿಸಿದೆ.
ಜಗದೀಶ್ ಸಿಂಗ್ ಎಂಬುವವರಿಗೆ ಟ್ವಿಟರ್ ಹ್ಯಾಂಡಲ್ @JSINGH2252 ನಿಂದ ನೀಡಿದ ಪ್ರತಿಕ್ರಿಯೆಯಲ್ಲಿ ಜುಬೇರ್ ಅವರು, “ಸಾಮಾಜಿಕ ಮಾಧ್ಯಮದಲ್ಲಿ ಜನರನ್ನು ನಿಂದಿಸುವ ನಿಮ್ಮ ಅರೆಕಾಲಿಕ ವೃತ್ತಿ ಬಗ್ಗೆ ನಿಮ್ಮ ಮುದ್ದಾದ ಮೊಮ್ಮಗಳಿಗೆ ತಿಳಿದಿದೆಯೇ? ನಿಮ್ಮ ಪ್ರೊಫೈಲ್ ಚಿತ್ರವನ್ನು ಬದಲಾಯಿಸಲು ನಾನು ನಿಮಗೆ ಸೂಚಿಸುತ್ತೇನೆ” ಎಂದು ಹೇಳಿದ್ದರು. ಜಗದೀಶ್ ಸಿಂಗ್ ಅವರ ಮೊಮ್ಮಗಳ ಫೋಟೋವನ್ನು ಮಸುಕಾಗಿಸಿ, 2020ರ ಆಗಸ್ಟ್ 6ರಂದು ಮೊಹಮ್ಮದ್ ಝುಬೇರ್ ಅವರು ಟ್ವೀಟ್ ಮಾಡಿದ್ದರು.
ಇದರ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಮಂಡಳಿಗೆ ದೂರು ನೀಡಿದ್ದ ದೂರುದಾರ ಜಗದೀಶ್ ಸಿಂಗ್, ನನ್ನ ಮೊಮ್ಮಗಳ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಕಿರುಕುಳಕ್ಕೆ ಕಾರಣವಾಗಿದ್ದಾರೆ ಎಂದು ಉಲ್ಲೇಖಿಸಿದ್ದಲ್ಲದ್ದರು.
ಈ ದೂರಿನ ಮೇರೆಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಮಂಡಳಿಯ ಅಧ್ಯಕ್ಷ (NCPCR) ಪ್ರಿಯಾಂಕ್ ಕಾನುಂಗೋ ದೆಹಲಿ ಪೊಲೀಸರು ಮತ್ತು ರಾಯ್‌ಪುರ ಪೊಲೀಸರಿಗೆ ಪತ್ರ ಬರೆದು, ಜುಬೈರ್ ಅವರ ಟ್ವೀಟ್ ಅಪ್ರಾಪ್ತ ಬಾಲಕಿಗೆ ಚಿತ್ರಹಿಂಸೆ ಮತ್ತು ಕಿರುಕುಳ ನೀಡಿದೆ ಎಂದು ಆರೋಪಿಸಿತ್ತಲ್ಲದೇ, ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದರು.
#JustIN | The State Government today informed the #ChhattisgarhHighCourt that the state police has submitted a closure report in the case against Alt News Co-Founder Mohammed Zubair (@zoo_bear) under the POCSO Act, related to a 2020 tweet. pic.twitter.com/IeNurC9Mlm
— Live Law (@LiveLawIndia) April 2, 2025
ಈ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ, ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನಿಬಂಧನೆಗಳನ್ನು ಉಲ್ಲೇಖಿಸಿ ರಾಯ್‌ಪುರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು.
ರಾಯ್‌ಪುರದಲ್ಲಿ ದಾಖಲಾದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಜುಬೇರ್ ಛತ್ತೀಸ್‌ಗಡ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಅಕ್ಟೋಬರ್ 2020 ರಲ್ಲಿ, ಜುಬೇರ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ಆದೇಶಿಸಿತ್ತು. ಇದೀಗ, ಈ ಪ್ರಕರಣಕ್ಕೆ ಸಂಬಂಧಿಸಂತೆ ಪೊಲೀಸರು ಮುಕ್ತಾಯಗೊಳಿಸುವ ವರದಿಯನ್ನು ಸಲ್ಲಿಸಿದ್ದಾರೆ ಎಂದು ಛತ್ತೀಸ್‌ಗಢ ರಾಜ್ಯ ಸರ್ಕಾರವು ಅಧಿಕೃತವಾಗಿ ಛತ್ತೀಸ್‌ಗಢ ಹೈಕೋರ್ಟಿಗೆ ತಿಳಿಸಿದೆ.
Truth can be troubled, but not defeated. Justice prevails!
— Mohammed Zubair (@zoo_bear) April 2, 2025
Two down, Ten more FIRs to go. 4 years after an FIR against me under POCSO act in Chhatisgarh, The Raipur Police has finally submitted a closure report. The Chhattisgarh court has disposed the order. In this case,… https://t.co/tiglY3YEwZ pic.twitter.com/MzKaLyBbxt
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಪತ್ರಕರ್ತ ಮೊಹಮ್ಮದ್ ಝುಬೇರ್, “ಸತ್ಯವನ್ನು ಹೇಳಿದಾಗ ನಮಗೆ ತೊಂದರೆಗಳು ಬರಬಹುದು, ಆದರೆ ಸತ್ಯವನ್ನು ಸೋಲಿಸಲು ಸಾಧ್ಯವಿಲ್ಲ. ನ್ಯಾಯ ಗೆದ್ದೇ ಗೆಲ್ಲುತ್ತದೆ. ಸದ್ಯ ನನ್ನ ಮೇಲಿದ್ದ ಎರಡು ಎಫ್‌ಐಆರ್ ಕಡಿಮೆಯಾಗಿದೆ, ಇನ್ನೂ ಹತ್ತು ಎಫ್‌ಐಆರ್‌ಗಳು ಬಾಕಿ ಇವೆ. ಛತ್ತೀಸ್‌ಗಢದಲ್ಲಿ ಪೋಕ್ಸೋ ಕಾಯ್ದೆಯಡಿ ನನ್ನ ವಿರುದ್ಧ ಎಫ್‌ಐಆರ್ ದಾಖಲಾಗಿ 4 ವರ್ಷಗಳ ನಂತರ, ರಾಯ್‌ಪುರ ಪೊಲೀಸರು ಅಂತಿಮವಾಗಿ ಮುಕ್ತಾಯ ವರದಿಯನ್ನು ಸಲ್ಲಿಸಿದ್ದಾರೆ. ಛತ್ತೀಸ್‌ಗಢ ನ್ಯಾಯಾಲಯವು ಆದೇಶವನ್ನು ವಿಲೇವಾರಿ ಮಾಡಿದೆ” ಎಂದಿದ್ದಾರೆ.
“ಈ ಪ್ರಕರಣದಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಮಂಡಳಿಯ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ತನ್ನ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ದೆಹಲಿ ಮತ್ತು ರಾಯ್‌ಪುರ ಪೊಲೀಸರಿಗೆ ಪತ್ರ ಬರೆದು ನನ್ನ ಟ್ವೀಟ್ ಅಪ್ರಾಪ್ತ ಬಾಲಕಿಯ ಮೇಲೆ ಚಿತ್ರಹಿಂಸೆ ಮತ್ತು ಕಿರುಕುಳ ನೀಡಿದೆ ಎಂದು ಆರೋಪಿಸಿದ್ದಲ್ಲದೇ, ಅಪಪ್ರಚಾರ ನಡೆಸಿದ್ದರು. ಆದರೆ ಕಳೆದ ವರ್ಷ ದೆಹಲಿ ನ್ಯಾಯಾಲಯವು ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದ ವ್ಯಕ್ತಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಕೇಳಿತ್ತು. ಈಗ ಛತ್ತೀಸ್‌ಗಢ ಪೊಲೀಸರು ಪ್ರಕರಣವನ್ನು ಮುಕ್ತಾಯಗೊಳಿಸಿ ನನ್ನ ಮೇಲಿನ ಆರೋಪವನ್ನು ತೆರವುಗೊಳಿಸಿದೆ” ಎಂದು ಝುಬೇರ್ ಪ್ರತಿಕ್ರಿಯೆ ನೀಡಿದ್ದಾರೆ.
ದೂರುದಾರನಿಗೆ ಕ್ಷಮೆ ಯಾಚನೆಗೆ ತಿಳಿಸಿದ್ದ ನ್ಯಾಯಾಲಯ
ಮೊಮ್ಮಗಳ ಫೋಟೊ ಹಂಚಿಕೊಂಡಿದ್ದಾರೆಂದು ದೂರು ನೀಡಿದ್ದ ದೂರುದಾರ ಜಗದೀಶ್ ಸಿಂಗ್ ಅವರನ್ನು ಕ್ಷಮೆಯಾಚಿಸುವಂತೆ ತಿಳಿಸಿದ್ದ ಪ್ರಕರಣ ಕೂಡ ನಡೆದಿತ್ತು. ಮೊಹಮ್ಮದ್ ಜುಬೈರ್ ಅವರನ್ನು ‘ಜಿಹಾದಿ’ ಎಂದು ಕರೆದಿದ್ದ ಜಗದೀಶ್ ಸಿಂಗ್ ತನ್ನ ಎಕ್ಸ್ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಕ್ಷಮೆಯಾಚಿಸಬೇಕು ಎಂದು ದೆಹಲಿ ಹೈಕೋರ್ಟ್ 2024ರ ಆಗಸ್ಟ್‌ನಲ್ಲಿ ಆದೇಶಿಸಿತ್ತು.
ಸಿಂಗ್ ಕ್ಷಮೆಯಾಚನೆ ಕನಿಷ್ಠ ಎರಡು ತಿಂಗಳ ಕಾಲ ಖಾತೆಯಲ್ಲಿ ಪ್ರಕಟವಾಗಿರಬೇಕು ಎಂದು ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಭಾನಿ ಅವರು ತಿಳಿಸಿದ್ದರು.
ಜುಬೇರ್ ಅವರನ್ನು ಉಲ್ಲೇಖಿಸಿ, ‘ಒಮ್ಮೆ ಜಿಹಾದಿಯಾದವನು ಸದಾ ಜಿಹಾದಿಯೇ’ ಎಂದು ಸಿಂಗ್ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿಂಗ್ ಕ್ಷಮೆಯಾಚಿಸಬೇಕು ಎಂದಿದ್ದ ನ್ಯಾಯಾಲಯವು, “ಈ ಮೇಲಿನ ಹೇಳಿಕೆ ನೀಡಿದ್ದಕ್ಕಾಗಿ ವಿಷಾದಿಸುತ್ತೇನೆ, ಯಾವುದೇ ದುರುದ್ದೇಶ ಅಥವಾ ಜುಬೇರ್ ಅವರನ್ನು ನೋಯಿಸುವ ಇಲ್ಲವೇ ಕುಕೃತ್ಯದ ಸಲುವಾಗಿ ಇದನ್ನು ಮಾಡಿಲ್ಲ” ಎಂದು ಸಿಂಗ್ ಉಲ್ಲೇಖಿಸಬೇಕು ಎಂದಿತ್ತು.