ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಆಸ್ಪತ್ರೆಯ ಬೆಡ್‌ನಲ್ಲಿ ಮಲಗಿದ್ದ ನನ್ನೊಂದಿಗೆ ಚಿತ್ರವನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಬೇರೆ ಯಾವುದೇ ಸಹಾಯವನ್ನು ಮಾಡಿಲ್ಲ. ವಿಷಯವನ್ನು ರಾಜಕೀಯಗೊಳಿಸಿದ್ದಾರೆ ಎಂದು ಮಹಿಳಾ ಕುಸ್ತಿಪಟು, ಕಾಂಗ್ರೆಸ್ ನಾಯಕಿ ವಿನೇಶ್ ಫೋಗಟ್ ಅವರು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮುಖ್ಯಸ್ಥೆ ಪಿಟಿ ಉಷಾ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 50 ಕೆಜಿ ಕುಸ್ತಿ ಪಂದ್ಯದಲ್ಲಿ ಬರೀ 100 ಗ್ರಾಂ ತೂಕ ಹೆಚ್ಚಿದ್ದ ಕಾರಣ ವಿನೇಶ್ ಫೋಗಟ್ ಪಂದ್ಯದಿಂದ ಅನರ್ಹಗೊಂಡಿದ್ದರು. ಕಾನೂನು ಹೋರಾಟ ನಡೆಸಿದರೂ ಬೆಳ್ಳಿ ಪದಕವೂ ದಕ್ಕಿಲ್ಲ. ಒಲಿಂಪಿಕ್ಸ್ ಫೈನಲ್ ತಲುಪಿದ ದೇಶದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ವಿನೇಶ್ ಬರಿಗೈಯಲ್ಲಿ ಮರಳಬೇಕಾಯಿತು.
ತನ್ನ ತೂಕ ಇಳಿಸಲು ರಾತ್ರಿಯಿಡೀ ಶ್ರಮ ಪಟ್ಟಿದ್ದ ವಿನೇಶ್ ಫೋಗಟ್ ಡಿಹೈಡ್ರೇಷನ್‌ನಿಂದಾಗಿ (ನಿರ್ಜಲೀಕರಣ) ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಐಒಎ ಮುಖ್ಯಸ್ಥೆ ಪಿಟಿ ಉಷಾ ಅವರು ವಿನೇಶ್ ಫೋಗಟ್ ಅವರನ್ನು ಭೇಟಿಯಾಗಿದ್ದರು. ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಎಲ್ಲಾ ಬೆಂಬಲದ ಭರವಸೆಯನ್ನು ನೀಡಿದ್ದರು. ಈ ಚಿತ್ರ ಭಾರೀ ವೈರಲ್ ಆಗಿತ್ತು.
ಇದನ್ನು ಓದಿದ್ದೀರಾ? ಹರಿಯಾಣ ವಿಧಾನಸಭಾ ಚುನಾವಣೆ: ಕಾಂಗ್ರೆಸ್‌ಗೆ ಸೇರಿದ ದಿನವೇ ವಿನೇಶ್ ಫೋಗಟ್‌ಗೆ ಟಿಕೆಟ್
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ವಿನೇಶ್ ಪೋಗಟ್, “ಆಸ್ಪತ್ರೆಯ ಹಾಸಿಗೆಯಲ್ಲಿದ್ದೆ, ಹೊರಗೆ ಏನಾಗುತ್ತಿದೆ ಎಂದು ನನಗೆ ತಿಳಿದಿಲ್ಲ. ಜೀವನದ ಅತ್ಯಂತ ಕೆಟ್ಟ ಹಂತಗಳಲ್ಲಿ ಒಂದನ್ನು ಎದುರಿಸುತ್ತಿದ್ದೆ. ಆ ವೇಳೆ ಬಂದು ನನ್ನ ಒಪ್ಪಿಗೆಯಿಲ್ಲದೆ ನನ್ನ ಬಳಿ ನಿಂತು ಫೋಟೋವನ್ನು ತೆಗೆದಿದ್ದಾರೆ. ನನ್ನೊಂದಿಗೆ ಇರುವುದಾಗಿ ಬೆಂಬಲ ಸೂಚಿಸಿ ಪೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದಾರೆ. ಆದರೆ ಯಾವುದೇ ಬೆಂಬಲ ನೀಡಿಲ್ಲ” ಎಂದು ಹೇಳಿದ್ದಾರೆ.
“ಈ ಘಟನೆಯಿಂದ ಮನನೊಂದಿದ್ದೇನೆ. ನನಗೆ ಅಲ್ಲಿ ಏನು ಬೆಂಬಲ ಸಿಕ್ಕಿತು ಎಂದು ನನಗೆ ತಿಳಿದಿಲ್ಲ. ಪಿಟಿ ಉಷಾ ಮೇಡಂ ನನ್ನನ್ನು ಆಸ್ಪತ್ರೆಯಲ್ಲಿ ಭೇಟಿಯಾದರು, ಒಂದು ಫೋಟೋ ಕ್ಲಿಕ್ ಮಾಡಿದರು, ಹೋದರು. ನೀವು ಹೇಳಿದಂತೆ, ರಾಜಕೀಯದಲ್ಲಿ ಮುಚ್ಚಿದ ಬಾಗಿಲಿನ ಹಿಂದೆ ಬಹಳಷ್ಟು ನಡೆಯುತ್ತದೆ. ಹಾಗೆಯೇ, ಅಲ್ಲಿ (ಪ್ಯಾರಿಸ್‌ನಲ್ಲಿ) ರಾಜಕೀಯ ನಡೆಯಿತು. ಹಾಗಾಗಿಯೇ ನಾನು ಕುಸ್ತಿಯನ್ನು ಬಿಡಬೇಕಾಯಿತು” ಎಂದು ತಿಳಿಸಿದ್ದಾರೆ.
BIG EXPOSE BY VINESH PHOGAT
— Newton (@newt0nlaws) September 10, 2024
When Vinesh Phogat was in the hospital after disqualification, PT Usha gone there just to click a picture with her.
PT Usha clicked a picture of Vinesh without her permission to post it on Social Media and left from there without saying anything. pic.twitter.com/53xQVwDMvu
