ದೇಶದಲ್ಲಿ ಲೋಕಸಭಾ ಚುನಾವಣೆ ಕಾವು ಜೋರಾಗುತ್ತಿದ್ದು, ಎಲ್ಲ ಪಕ್ಷಗಳು ಮತದಾರರನ್ನು ಒಲಿಸಿಕೊಳ್ಳಲು ಭರ್ಜರಿ ಪ್ರಚಾರ, ರೋಡ್ ಶೋಗಳನ್ನು ನಡೆಸುತ್ತಿದೆ.
ಆಂಧ್ರ ಪ್ರದೇಶದ ವಿಜಯವಾಡಾದಲ್ಲಿ ತೆರೆದ ವಾಹನದ ಮೂಲಕ ರೋಡ್ ಶೋ ನಡೆಸುತ್ತಿದ್ದ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇದರ ಪರಿಣಾಮ ಜಗನ್ ಹಣೆ, ಎಡಗಣ್ಣು ಹಾಗೂ ತಲೆಗೆ ಗಾಯವಾಗಿದೆ. ರಕ್ತ ಸೋರುತ್ತಿದ್ದ ಜಗನ್‌ಗೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಲಾಗಿದೆ.
AP CM Y S Jagan Mohan Reddy was injured during #MemanthaSiddham roadshow in Vijaywada. Stone was pelted along with flowers at him. He was given first aid immediately pic.twitter.com/xf4mvTIUh8
— Naveena (@TheNaveena) April 13, 2024
ವೈಎಸ್‌ಆರ್‌ಪಿ ಪಕ್ಷ ವಿಜಯವಾಡಾದಲ್ಲಿ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿರುವ ವೇಳೆ ಈ ಘಟನೆ ನಡೆದಿದೆ. ಜಗನ್ ಹಣೆ, ತಲೆ, ಎಡಗಣ್ಣಿ ಕಲ್ಲು ಬಡಿದಿದೆ. ಇದರ ಪರಿಣಾಮ ರಕ್ತ ಜಿನುಗಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಜಗನ್ ಪಕ್ಕದಲ್ಲಿದ್ದ ನಾಯಕರಿಗೂ ಕಲ್ಲೇಟು ಬಿದ್ದಿದೆ. ಓರ್ವ ನಾಯಕ ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಜಗನ್ ಜೊತೆಗೆ ತೆರೆದ ಬಸ್‌ನಲ್ಲಿದ್ದ ಶಾಸಕ ವೇಲಂಪಲ್ಲಿ ಶ್ರೀನಿವಾಸ್ ಕೂಡ ಗಾಯಗೊಂಡಿದ್ದಾರೆ. ತಕ್ಷಣವೇ ಜಗನ್ ಅವರಿಗೆ ಭದ್ರತಾ ಪಡೆಗಳು ರಕ್ಷಣೆ ನೀಡಿದೆ. ಇಷ್ಟೇ ಅಲ್ಲ ಜಗನ್ ಅವರನ್ನು ಬಸ್ ಯಾತ್ರೆಯಿಂದ ಕೆಳಗೆ ಇಳಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಕೆಲ ಹೊತ್ತು ವಿಶ್ರಾಂತಿ ಪಡೆಯಲು ವೈದ್ಯಾಧಿಕಾರಿಗಳ ತಂಡ ಸೂಚಿಸಿದೆ. ಆದರೆ ಜಗನ್ ಪ್ರಥಮ ಚಿಕಿತ್ಸೆ ಪಡೆದು ಮತ್ತೆ ಪ್ರಚಾರ ಕಾರ್ಯ ಮುಂದುವರಿಸಿರುವುದಾಗಿ ತಿಳಿದುಬಂದಿದೆ.
ವಿಜಯವಾಡದಲ್ಲಿ ಜಗನ್ ಬಸ್ ಯಾತ್ರೆಗೆ ಅದ್ಧೂರಿ ಸ್ವಾಗತ ಸಿಕ್ಕಿತ್ತು. ಬೆಂಬಲಿಗರು, ಜನರು ಜಗನ್‌ಗೆ ಹೂವಿನ ಸ್ವಾಗತ ನೀಡಿದ್ದರು. ಹಲವರು ಹೂವಿನ ದಳಗಳನ್ನು ಎಸೆದಿದ್ದರು. ಇದರ ನಡುವೆಯೇ ಕಲ್ಲು ತೂರಿ ಬಂದಿದೆ.
VIDEO | Andhra Pradesh Chief Minister YS Jagan Mohan Reddy receives treatment after stone were pelted at his convoy in Vijayawada.
STORY | Andhra Pradesh CM Jagan injured in stone pelting incident during Vijayawada road show
READ: https://t.co/lauxKSXtWB pic.twitter.com/aw1ZZzfH21
— Press Trust of India (@PTI_News) April 13, 2024
ಈ ಕಲ್ಲುತೂರಾಟದ ಹಿಂದೆ ಟಿಡಿಪಿ ಕೈವಾಡವಿದೆ ಎಂದು ವೈಎಸ್ಆರ್ ಕಾಂಗ್ರೆಸ್ ಆರೋಪಿಸಿದೆ. ಚುನಾವಣೆಯಲ್ಲಿ ಮತದಾರರನ್ನು ಗೆಲ್ಲಲು ಸಾಧ್ಯವಾಗದ ಪಕ್ಷಗಳು ಕಲ್ಲುತೂರಾಟ ನಡೆಸಿ ನಮ್ಮನ್ನು ಬೆದರಿಸುವ ತಂತ್ರಕ್ಕೆ ಇಳಿದಿದೆ. ಇದಕ್ಕೆ ಜನರು ಉತ್ತರಿಸಲಿದ್ದಾರೆ ಎಂದು ವೈಎಸ್ಆರ್ ಕಾಂಗ್ರೆಸ್ ಹೇಳಿಕೊಂಡಿದೆ.
175 ವಿಧಾನಸಭಾ ಸದಸ್ಯರ ಬಲ ಹೊಂದಿರುವ ಆಂಧ್ರಪ್ರದೇಶದಲ್ಲಿ ಲೋಕಸಭಾ ಚುನಾವಣೆಯ ಜೊತೆಗೇ ವಿಧಾನಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆಯು ಕೂಡ ಮೇ 13ರಂದು ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
