ಮಧ್ಯ ದೆಹಲಿಯ ರಾಜಿಂದರ್ ನಗರದಲ್ಲಿನ ಕೋಚಿಂಗ್ ಸೆಂಟರ್‌ನ ನೆಲಮಾಳಿಗೆ ಜಲಾವೃತವಾಗಿದ್ದು ನೆಲಮಾಳಿಗೆಯಲ್ಲಿ ಸಿಲುಕಿ ಮೂವರು ಯುಪಿಎಸ್‌ಸಿ ಆಕಾಂಕ್ಷಿಗಳು ಸಾವನ್ನಪ್ಪಿದ್ದಾರೆ. ಭಾರೀ ಮಳೆಯ ಸಮಯದಲ್ಲಿ ಚರಂಡಿ ಒಡೆದು ನೆಲಮಾಳಿಗೆಯಲ್ಲಿ ನೀರು ತುಂಬಿದೆ ಎಂದು ವರದಿಯಾಗಿದೆ.
ನಿಜವಾಗಿ 8-10 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಆದರೆ ಆ ಮಾಹಿತಿ ಮುಚ್ಚಿಡಲಾಗುತ್ತಿದೆ ಎಂದು ವಿದ್ಯಾರ್ಥಿಯೊಬ್ಬರು ಆರೋಪಿಸಿದ್ದಾರೆ.
ಜಲಾವೃತವಾಗಿರುವ ದೆಹಲಿ ಬೀದಿಯಲ್ಲಿ ಯುಪಿಎಸ್‌ಸಿ ಆಕಾಂಕ್ಷಿಯೊಬ್ಬರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ.
ಶನಿವಾರ ಸಂಜೆ 7 ಗಂಟೆ ಸುಮಾರಿಗೆ, ದೆಹಲಿ ಅಗ್ನಿಶಾಮಕ ದಳಕ್ಕೆ ನೆಲಮಾಳಿಗೆಯಲ್ಲಿ ಪ್ರವಾಹದ ಬಗ್ಗೆ ಮಾಹಿತಿ ಲಭಿಸಿದೆ. ಕೂಡಲೇ ರಕ್ಷಣಾ ಕಾರ್ಯಾಚರಣೆಗಾಗಿ ಐದು ಅಗ್ನಿಶಾಮಕ ಟೆಂಡರ್‌ಗಳನ್ನು ನಿಯೋಜಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಡೈವರ್‌ಗಳನ್ನು ಸಹ ನಿಯೋಜಿಸಲಾಗಿತ್ತು. ಆದರೆ ಕೋಚಿಂಗ್ ಸೆಂಟರ್‌ನ ಅಧ್ಯಾಪಕರೊಬ್ಬರು ಅಗ್ನಿಶಾಮಕದ ಬದಲಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಡೈವರ್‌ಗಳಿಗೆ ಅಧಿಕ ಆದ್ಯತೆ ನೀಡಬೇಕಾಗಿತ್ತು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬಾಗಲಕೋಟೆ | ಗ್ರಾಮ ಜಲಾವೃತ, ಜಮೀನು ಮುಳುಗಡೆ; ತಮ್ಮೂರು ಬಿಡಲು ಗ್ರಾಮಸ್ಥರ ನಕಾರ
ಇಬ್ಬರು ವಿದ್ಯಾರ್ಥಿಗಳ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇಬ್ಬರೂ ಮಹಿಳೆಯರಾಗಿದ್ದಾರೆ. ಮೊದಲು ರಾತ್ರಿ 10:30ಕ್ಕೆ ಒಬ್ಬರ ಮೃತದೇಹವನ್ನು ಮತ್ತು ನಂತರ ರಾತ್ರಿ 11:20ಕ್ಕೆ ಮತ್ತೋರ್ವ ವಿದ್ಯಾರ್ಥಿಯ ಮೃತದೇಹವನ್ನು ಹೊರತೆಗೆಯಲಾಗಿದೆ. ಡಿಎಫ್‌ಎಸ್ ಅಧಿಕಾರಿಗಳ ಪ್ರಕಾರ ಇನ್ನೋರ್ವ ವ್ಯಕ್ತಿಯ ಹುಡುಕಾಟ ನಡೆಯುತ್ತಿದೆ.
ಶನಿವಾರ ರಾತ್ರಿ ಸ್ಥಳದಲ್ಲಿದ್ದ ವಿದ್ಯಾರ್ಥಿಗಳ ಪ್ರಕಾರ, ನೆಲಮಾಳಿಗೆಯಲ್ಲಿ ಕೋಚಿಂಗ್ ಸೆಂಟರ್‌ನ ಗ್ರಂಥಾಲಯವಿದೆ. ಅಲ್ಲಿ ವಿದ್ಯಾರ್ಥಿಗಳು ಅಧ್ಯಯನಕ್ಕೆ ಹೋಗುತ್ತಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ನೆಲಮಾಳಿಗೆಯು ಸುಮಾರು 10-12 ಅಡಿಗಳಷ್ಟು ನೀರಿನಿಂದ ತುಂಬಿದೆ. ಆದ್ದರಿಂದ ವಿದ್ಯಾರ್ಥಿಗಳು ಪಾರಾಗಲು ಯಾವುದೇ ಅವಕಾಶ ಇರಲಿಲ್ಲ.
ಇನ್ನು ಓಲ್ಡ್ ರಾಜಿಂದರ್ ನಗರದಲ್ಲಿ ಸಂಜೆ 5.30ರಿಂದ ರಾತ್ರಿ 8.30ರ ನಡುವೆ 31.5 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಈ ಘಟನೆ ಬೆನ್ನಲ್ಲೇ ಆಡಳಿತಾರೂಢ ಎಎಪಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಈ ಘಟನೆಗೆ ಪ್ರದೇಶದ ಶಾಸಕರ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ. ಈ ನಡುವೆ ವಿದ್ಯಾರ್ಥಿಗಳು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
“ಈ ನಿರ್ಲಕ್ಷ್ಯಕ್ಕೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಇಲ್ಲಿನ ನೆಲಮಾಳಿಗೆ ತೆರೆದಿರುವ ಇವುಗಳೆಲ್ಲವೂ ಕಾನೂನುಬಾಹಿರವಾಗಿ ನಡೆಯುತ್ತಿದ್ದು, ಯಾವುದೇ ಸುರಕ್ಷತಾ ಕ್ರಮಗಳಿಲ್ಲ. ಆದ್ದರಿಂದ ಇವೆಲ್ಲವನ್ನೂ ತಡೆದು ಕ್ರಮಕೈಗೊಳ್ಳಬೇಕು” ಎಂದು ಯುಪಿಎಸ್‌ಸಿ ಆಕಾಂಕ್ಷಿ ಆಗ್ರಹಿಸಿದ್ದಾರೆ.
“ನಿಜವಾದ ಮೃತರ ಸಂಖ್ಯೆಯನ್ನು ಹೇಳಬೇಕು. 8-10 ಜನರು ಸಾವನ್ನಪ್ಪಿದ್ದಾರೆ” ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.
#WATCH | Old Rajender Nagar Incident | Delhi: Students continue to protest against the MCD and the coaching institute where three students lost their lives after the basement of the institute was filled with water yesterday pic.twitter.com/9Erd7TgOAt
— ANI (@ANI) July 28, 2024
#WATCH | Old Rajender Nagar Incident | “Our demand is that action should be taken against those responsible for this negligence. All these things opened in the basement here are being operated illegally and there are no safety measures. So all these things need to be stopped and… https://t.co/uZSE38jxqc pic.twitter.com/vFmaQHovEU
— ANI (@ANI) July 28, 2024