ತೈಲ ಮಾರುಕಟ್ಟೆ ಕಂಪನಿಗಳು(ಒಎಂಸಿ) ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಿದ್ದು ದರ 33.50 ರೂಪಾಯಿ ಇಳಿಕೆಯಾಗಿದೆ. ಈ ನೂತನ ಬೆಲೆ ಆಗಸ್ಟ್ 1ರಿಂದ ಜಾರಿಗೆ ಬರಲಿವೆ.
19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 33.50 ರೂಪಾಯಿಯಷ್ಟು ಕಡಿತಗೊಳಿಸಲಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಬೆಲೆ ಈಗ ಆಗಸ್ಟ್ 1ರಿಂದ 1,631.50 ರೂಪಾಯಿ ಆಗಲಿದೆ. ಸ್ಥಳೀಯ ತೆರಿಗೆಗಳು ಹಾಗೂ ಸಾಗಾಣಿಕೆ ವೆಚ್ಚವನ್ನು ಆಧರಿಸಿ, ರಾಜ್ಯದಿಂದ ರಾಜ್ಯಕ್ಕೆ ಅನಿಲ ಸಿಲಿಂಡರ್‌ಗಳ ದರದಲ್ಲಿ ವ್ಯತ್ಯಯವಾಗುತ್ತದೆ.
ಇದನ್ನು ಓದಿದ್ದೀರಾ? ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 24 ರೂ. ಇಳಿಕೆ
14.3 ಕೆಜಿಯ ಗೃಹ ಬಳಕೆ ಎಲ್‌ಪಿಜಿ ಬೆಲೆಯನ್ನು ಇಳಿಸಲಾಗಿಲ್ಲ. ಕೊನೆಯದಾಗಿ ಏಪ್ರಿಲ್‌ನಲ್ಲಿ ಬೆಲೆಯನ್ನು 50 ರೂಪಾಯಿ ಏರಿಸಲಾಗಿದೆ. ಅದಾದ ಬಳಿಕ ಯಾವುದೇ ಪರಿಷ್ಕರಣೆ ಮಾಡಿಲ್ಲ, ಸದ್ಯ ಬೆಲೆ 853 ರೂಪಾಯಿಗೆ ಏರಿಕೆಯಾಗಿದೆ.
