ಶನಿವಾರ, ನಿರ್ಮಲಾ ಸೀತಾರಾಮನ್ ಅವರು ಬಜೆಟ್ 2025-26ಅನ್ನು ಮಂಡಿಸುತ್ತಿದ್ದಾರೆ. ಇದೇ ಸಮಯದಲ್ಲಿ, 19 ಕೆ.ಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 7 ರೂ. ಇಳಿಕೆ ಮಾಡಲಾಗಿದೆ.
ಇಂಧನ ಪರಿಷ್ಕೃತ ದರ ಪಟ್ಟಿಯು ಶನಿವಾರ ಬೆಳಗ್ಗೆ ಪ್ರಕಟವಾಗಿದ್ದು, ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 7 ರೂ. ಇಳಿಕೆಯಾಗಿದೆ. ಆದಾಗ್ಯೂ, ವಿಮಾನ ಇಂಧನದ ದರವು 5.6% ಏರಿಕೆಯಾಗಿದೆ.
ಪರಿಷ್ಕೃತ ದರದ ಅನ್ವಯ, 19 ಕೆ.ಜಿ ವಾಣಿಜ್ಯ ಸಿಲಿಂಡರ್ ಬೆಲೆಯು 1,797ರೂ.ಗೆ ಇಳಿಕೆಯಾಗಿದೆ. ವಿಮಾನಗ ಇಂಧನ (ಎಟಿಎಫ್) ದರವು ಒಂದು ಸಾವಿರ ಲೀಟರ್‌ಗೆ 5,078 ರೂ.ಗೆ ಏರಿಕೆಯಾಗಿದೆ.