ವಿಪಕ್ಷ ನಾಯಕರನ್ನೇ ಚುನಾವಣಾ ಅಧಿಕಾರಿಗಳು ನೇರವಾಗಿ ಗುರಿ ಮಾಡುತ್ತಿರುವುದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಲಿಕಾಪ್ಟರ್‌ಅನ್ನು ಬಿಹಾರದ ಸಮಸ್ತಿಪುರದಲ್ಲಿ ಪರಿಶೀಲನೆ ನಡೆಸಲಾಗಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ನಾಯಕರನ್ನು ಪರಿಶೀಲನೆ ನಡೆಸದೆ ಬಿಟ್ಟುಬಿಡುತ್ತಿರುವುದಕ್ಕೆ ವಿಪಕ್ಷ ನಾಯಕರು ವಾಗ್ಧಾಳಿ ನಡೆಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭಾ ಚುನಾಣೆಯ ಪ್ರಯುಕ್ತ ಬಿಹಾರದ ಸಮಸ್ತಿಪುರ ಹಾಗೂ ಮುಜಾಫರ್‌ಫುರ ನಗರದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದರು.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಹಾರದ ಕಾಂಗ್ರೆಸ್ ನಾಯಕ ರಾಜೇಶ್ ರಾಥೋರ್ “ ಕಾಂಗ್ರೆಸ್ ನಾಯಕರ ಚಾಪರ್‌ಗಳನ್ನು ನಿಯಮಿತವಾಗಿ ಪರಿಶೀಲನೆ ನಡೆಸಲಾಗುತ್ತಿದೆಯೆ ಅಥವಾ ಎನ್‌ಡಿಎ ಪ್ರಮುಖ ನಾಯಕರ ಚಾಪರ್‌ಗಳನ್ನು ಇದೇ ರೀತಿ ಪರಿಶೀಲನೆ ನಡೆಸಲಾಗುತ್ತಿದೆಯೆ ಎಂಬುದನ್ನು ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕು” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅರವಿಂದ್ ಕೇಜ್ರಿವಾಲ್ ಆಗಮನ ಮೋದಿ ನಿರ್ಗಮನದ ಸೂಚಕವೇ?
“ಚುನಾವಣಾ ಆಯೋಗವು ಇಂತಹ ದಾಖಲೆಗಳನ್ನು ಸಾರ್ವಜನಿಕಗೊಳಿಸಬೇಕು. ಇಲ್ಲದಿದ್ದರೆ ಕೇವಲ ವಿಪಕ್ಷ ನಾಯಕರನ್ನು ಮಾತ್ರ ಗುರಿಪಡಿಸಿ, ಎನ್‌ಡಿಎ ನಾಯಕರನ್ನು ಆರಾಮಾಗಿ ಹೋಗಲು ಬಿಡಲಾಗುತ್ತಿದೆ ಎಂದು ಅರ್ಥೈಸಲಾಗುತ್ತದೆ” ಎಂದು ಹೇಳಿದರು.
ಖರ್ಗೆಯವರ ಹೆಲಿಪಾಪ್ಟರ್‌ಅನ್ನು ಬಿಹಾರದಲ್ಲಿ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಪರಿಶೀಲನೆ ನಡೆಸುತ್ತಿರುವ ವಿಡಿಯೋ ಎಲ್ಲಡೆ ಹರಿದಾಡುತ್ತಿದೆ.
ಇತ್ತೀಚಿಗೆ ಕೇರಳದಲ್ಲಿ ರಾಹುಲ್ ಗಾಂಧಿ ಸೇರಿ ವಿವಿಧ ರಾಜ್ಯಗಳಲ್ಲಿ ವಿಪಕ್ಷ ನಾಯಕರ ಹೆಲಿಕಾಪ್ಟರ್‌ಗಳನ್ನು ಪರಿಶೀಲನೆಗೊಳಪಡಿಸಲಾಯಿತು.

ಚುನಾವಣಾ ಪ್ರಚಾರಕ್ಕಾಗಿ ತೆರಳುವ ಮಲ್ಲಿಕಾರ್ಜುನ ಖರ್ಗೆ , ರಾಹುಲ್ ಗಾಂಧಿ ಮತ್ತಿತರ ವಿಪಕ್ಷ ನಾಯಕರುಗಳ ಹೆಲಿಕಾಪ್ಟರ್ ಗಳನ್ನು ಚುನಾವಣಾಧಿಕಾರಿಗಳು ಹೆಲಿಪಾಡ್ ನಲ್ಲಿ ಪರಿಶೀಲಿಸುತ್ತಾರೆ.
ಆಡಳಿತ ಪಕ್ಷದ ಮೋದಿ , ಶಾ , ನಡ್ಡಾ , ಸಿಂಗ್ ಪ್ರಯಾಣಿಸುವ ಹೆಲಿಕಾಪ್ಟರ್ ಗಳನ್ನು ಚುನಾವಣಾಧಿಕಾರಿಗಳು ಪರಿಶೀಲಿಸುತ್ತಾರೆಯೇ ?
ಪರಿಶೀಲಿಸುತ್ತಿಲ್ಲವಾದರೆ ಯಾಕೆ ? ಏನು ಕಾರಣ ?
ತಿಳಿಯುವ ಹಕ್ಕು ಭಾರತೀಯರಾದ ನಮ್ಮೆಲ್ಲರಿಗಿದೆ.