ಹರಿಯಾಣ, ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣಾ ಮತ ಎಣಿಕೆ ಆರಂಭಗೊಂಡಿದ್ದು,ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಆರಂಭಿಕ ಮುನ್ನಡೆ ಸಾಧಿಸಿದೆ. ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ 464 ಪಕ್ಷೇತರ ಅಭ್ಯರ್ಥಿಗಳು ಸೇರಿ 1,031 ಮಂದಿ ಕಣದಲ್ಲಿದ್ದಾರೆ.10 ವರ್ಷಗಳ ಬಳಿಕ ಚುನಾವಣೆ ಕಂಡಿರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಫಲಿತಾಂಶವೂ ಕುತೂಹಲ ಮೂಡಿಸಿದೆ.
90 ಸ್ಥಾನಗಳ ಹರಿಯಾಣದ 90 ಕ್ಷೇತ್ರಗಳಲ್ಲಿ ಕಾಂಗ್ರೆಸ್ 52 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ, ಬಿಜೆಪಿ 16 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಜಮ್ಮು ಕಾಶ್ಮೀರದ 90 ಕ್ಷೇತ್ರಗಳಲ್ಲಿ ಕಾಂಗ್ರೆಸ್ – ಎನ್‌ಸಿ ಮೈತ್ರಿಕೂಟವೂ 38 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ, ಬಿಜೆಪಿ 22 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.
ಮತ ಎಣಿಕೆ ಹಿನ್ನೆಲೆ ಚುನಾವಣೆ ಕೇಂದ್ರಗಳ ಸುತ್ತಲೂ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಜಮ್ಮು- ಕಾಶ್ಮೀರದ 28 ಮತ ಎಣಿಕೆ ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಶುರುವಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತದ ಅಪೌಷ್ಟಿಕತೆಯ ಗಂಭೀರತೆ ಕೇಂದ್ರಕ್ಕೆ ಅರಿವಾಗುವುದು ಯಾವಾಗ?
ಉಭಯ ರಾಜ್ಯಗಳಲ್ಲಿ ಮತ ಎಣಿಕೆಗೆ ಕೇಂದ್ರ ಚುನಾವಣಾ ಆಯೋಗ ಸಕಲ ಸಿದ್ಧತೆ ಪೂರ್ಣಗೊಳಿಸಿದೆ. ಒಟ್ಟು 1,134 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮಧ್ಯಾಹ್ನದೊಳಗೆ ಹೊರ ಬೀಳಲಿದೆ.
ಹರಿಯಾಣ ಚುನಾವಣೋತ್ತರ ಸಮೀಕ್ಷೆ
ಮ್ಯಾಟ್ರಿಜ್ ಸಮೀಕ್ಷೆ: ಕಾಂಗ್ರೆಸ್ 55-62, ಬಿಜೆಪಿ 18-24, ಐಎನ್ಎಲ್ಡಿ 3-6, ಜೆಜೆಪಿ 03, ಇತರರು 2-5
ಎಬಿಪಿ ಸಮೀಕ್ಷೆ: ಕಾಂಗ್ರೆಸ್ – 57, ಬಿಜೆಪಿ – 27, ಇತರೆ – 06
ದೈನಿಕ್ ಭಾಸ್ಕರ್: ಕಾಂಗ್ರೆಸ್ 44-54, ಬಿಜೆಪಿ 19-29, ಐಎನ್ಎಲ್ಡಿ 1-5, ಜೆಜೆಪಿ- 1, ಇತರರು 4-10
ಜಮ್ಮು ಮತ್ತು ಕಾಶ್ಮೀರ ಚುನಾವಣೋತ್ತರ ಸಮೀಕ್ಷೆ
ದೈನಿಕ್ ಬಾಸ್ಕರ್
ಕಾಂಗ್ರೆಸ್ + ಎನ್‌ಸಿ – 35-40
ಬಿಜೆಪಿ – 20-25
ಪಿಡಿಪಿ – 4-7
ಇತರೆ – 12-16
ಪೀಪಲ್ ಪ್ಲಸ್
ಕಾಂಗ್ರೆಸ್ + ಎನ್‌ಸಿ – 40-48
ಬಿಜೆಪಿ – 27-32
ಪಿಡಿಪಿ – 7-11
ಇತರೆ – 4-6
ಇಂಡಿಯಾ ಟುಡೆ- ಸಿ ವೋಟರ್
ಕಾಂಗ್ರೆಸ್ + ಎನ್‌ಸಿ – 40-48
ಬಿಜೆಪಿ – 27-32
ಪಿಡಿಪಿ – 6-12
ಇತರೆ – 6-11
ಸಿ ವೋಟರ್ – ಆಜ್ ತಕ್
ಕಾಂಗ್ರೆಸ್ + ಎನ್‌ಸಿ – 11-15
ಬಿಜೆಪಿ – 27-31
ಪಿಡಿಪಿ – 02
ಇತರೆ – 01
