ಪಕ್ಷದ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್‌ನೊಂದಿಗೆ ಹೋಲಿಸಿದ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದೆ.
ಏಪ್ರಿಲ್ 6ರಂದು ರಾಜಸ್ಥಾನದ ಅಜ್ಮೇರ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡುವ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯನ್ನು ಸುಳ್ಳುಗಳ ಕಂತೆ ಎಂದು ಕರೆಯುವುದರ ಜೊತೆ ಪ್ರಣಾಳಿಕೆಯ ಪ್ರತಿ ಪುಟವು ಭಾರತವನ್ನು ತುಂಡು ತುಂಡಾಗಿ ಮಾಡುವ ಕೊಳಕು ಎಂದು ಪ್ರಧಾನಿ ಹೇಳಿದ್ದರು.
“ಮುಸ್ಲಿಂ ಲೀಗ್ ಮುದ್ರೆಯಂತಿರುವ ಈ ಪ್ರಣಾಳಿಕೆಯಲ್ಲಿ ಏನೆಲ್ಲ ಬಿಟ್ಟು ಹೋಗಿದೆಯೋ ಅದನ್ನೆಲ್ಲ ಎಡಪಂಥೀಯರು ತೆಗೆದುಕೊಂಡಿದ್ದಾರೆ. ಇಂದು ಕಾಂಗ್ರೆಸ್ ತತ್ವ ಅಥವಾ ನೀತಿಗಳನ್ನು ಬಿಟ್ಟಿದೆ. ಕಾಂಗ್ರೆಸ್ ಪ್ರತಿಯೊಂದನ್ನು ಗುತ್ತಿಗೆಗೆ ಕೊಟ್ಟಿದೆ ಅಥವಾ ಸಂಪೂರ್ಣ ಪಕ್ಷವನ್ನು ಹೊರಗುತ್ತಿಗೆಗೆ ಕೊಟ್ಟಿದೆ” ಎಂದು ಪ್ರಧಾನಿ ಹೇಳಿದ್ದರು.
ಪ್ರಧಾನಿ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೋದಿ – ಅಮಿತ್ ಶಾ ರಾಜಕೀಯ ಹಾಗೂ ಚಿಂತನೆಗಳ ಪೂರ್ವಿಕರು ಸ್ವತಂತ್ರ ಹೋರಾಟದಲ್ಲಿ ಭಾರತೀಯರಿಗೆ ವಿರುದ್ಧವಾಗಿದ್ದ ಬ್ರಿಟಿಷರು ಹಾಗೂ ಮುಸ್ಲಿಂ ಲೀಗ್‌ನೊಂದಿಗೆ ಸಂಬಂಧ ಹೊಂದಿದವರು. ಪ್ರತಿ ದಿನ ಅವರು ಕಾಂಗ್ರೆಸ್ ನ್ಯಾಯ ಪತ್ರದ ಮಾರ್ಗದರ್ಶಿಗಳು ಹಾಗೂ ಸಾಮಾನ್ಯ ಜನರ ಆಕಾಂಕ್ಷೆಗಳು, ಅಗತ್ಯತೆಗಳು ಹಾಗೂ ಬೇಡಿಕೆಗಳಿಗೆ ಸ್ಪಂದಿಸುವುದನ್ನು ವಿರೋಧಿಸುವ ಮುಸ್ಲಿಂ ಲೀಗ್‌ಅನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ವಾಧಿಕಾರದತ್ತ ದೇಶ ದಾಪುಗಾಲು ಹಾಕುತ್ತಿಲ್ಲವೇ? ಅವರಿಗಾದದ್ದು ನಮಗಾಗುವುದಿಲ್ಲವೇ?
“ಮೋದಿ – ಶಾ ಚಿಂತನೆಗಳ ಪೂರ್ವಿಕರು 1942ರಲ್ಲಿ ಭಾರತ ಬಿಟ್ಟು ತೊಲಗಿ ಚಳುವಳಿಗೆ ಕರೆ ನೀಡಿದ್ದ ಮಹಾತ್ಮ ಗಾಂಧಿಯನ್ನು ವಿರೋಧಿಸಿದ್ದರು. ಜನಸಂಘದ ಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಮುಸ್ಲಿಂ ಲೀಗ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಂಗಾಳ, ಸಿಂದ್‌ಗಳಲ್ಲಿ ತಮ್ಮ ಸರ್ಕಾರವನ್ನು ರಚಿಸಿದ್ದು ಎಲ್ಲರಿಗೂ ತಿಳಿದಿದೆ. ಶ್ಯಾಮ್ ಪ್ರಸಾದ್ ಮುಖರ್ಜಿ ಭಾರತ ಬಿಟ್ಟು ತೊಲಗಿ ಚಳವಳಿ ಹಾಗೂ ಕಾಂಗ್ರೆಸನ್ನು ಹೇಗೆ ಹತ್ತಿಕಬೇಕು ಎಂಬುದರ ಬಗ್ಗೆ ಬ್ರಿಟಿಷ್ ಗವರ್ನರ್‌ಗೆ ಪತ್ರ ಬರೆದಿದ್ದರು. ಅಲ್ಲದೆ ಭಾರತೀಯರು ಬ್ರಿಟಿಷರನ್ನು ನಂಬಬೇಕು ಎಂದು ಸಹ ಹೇಳಿದ್ದರು ಎಂಬುದನ್ನು ಖರ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ತಿಳಿಸಿದ್ದಾರೆ.
ಮೋದಿ – ಶಾ ಹಾಗೂ ಅವರ ನಿಯೋಜಿತ ಅಧ್ಯಕ್ಷರು ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಮೋದಿಯ ಭಾಷಣಗಳಲ್ಲಿ ಆರ್‌ಎಸ್‌ಎಸ್‌ನ ಕೆಟ್ಟತನವಿದೆ. ದಿನದಿಂದ ದಿನಕ್ಕೆ ಬಿಜೆಪಿಯ ಚುನಾವಣಾ ನಕ್ಷೆ ಮುಳುಗುತ್ತಿದ್ದು, ಆದ್ದರಿಂದ ತಮ್ಮ ಅತ್ಯುತ್ತಮ ಗೆಳೆಯ ಮುಸ್ಲಿಂ ಲೀಗ್‌ಅನ್ನು ಆರ್‌ಎಸ್‌ಎಸ್ ನೆನಪಿಸಿಕೊಳ್ಳಲು ಆರಂಭಿಸಿದೆ ಎಂದು ಖರ್ಗೆ ವಾಗ್ದಾಳಿ ನಡೆಸಿದರು.
ಆದರೆ ಒಂದು ಸತ್ಯ ಏನೆಂದರೆ ಕಾಂಗ್ರೆಸ್‌ನ ನ್ಯಾಯ ಪತ್ರ ಭಾರತದ 140 ಕೋಟಿ ಭಾರತೀಯರ ಭರವಸೆ ಹಾಗೂ ಆಕಾಂಕ್ಷೆಗಳನ್ನು ಪ್ರಜ್ವಲಗೊಳಿಸಲಿದ್ದು, ಮೋದಿಯ 10 ವರ್ಷಗಳ ಅನ್ಯಾಯ ಅಂತಿಮಗೊಳ್ಳಲಿದೆ ಎಂದು ಖರ್ಗೆ ತಿಳಿಸಿದ್ದಾರೆ.
