ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಬಡ ಮಹಿಳೆಯರಿಗೆ ಹಣ ವರ್ಗಾವಣೆ, ಯುವಕರಿಗೆ ಉದ್ಯೋಗ, ಜಾತಿ ಗಣತಿಗೆ ಆದ್ಯತೆ ನೀಡಲಾಗಿದೆ.
ಇವುಗಳ ಜೊತೆ ಐದು ನ್ಯಾಯ ಒದಗಿಸುವ ಆಧಾರಸ್ತಂಭಗಳಾದ ಯುವ ನ್ಯಾಯ, ನಾರಿ ನ್ಯಾಯ, ಕಿಸಾನ್ ನ್ಯಾಯ, ಶ್ರಮಿಕ್ ನ್ಯಾಯ ಹಾಗೂ ಹಿಸ್ಸೆದರಿ ನ್ಯಾಯಗಳನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಒಳಗೊಂಡಿವೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳು
ಜಾತಿಗಳು, ಉಪಜಾತಿಗಳು ಹಾಗೂ ಅವುಗಳ ಆರ್ಥಿಕ-ಸಾಮಾಜಿಕ ಸ್ಥಿತಿಗತಿಗಳನ್ನು ಎಣಿಕೆ ಮಾಡುವುದರ ಮೂಲಕ ದೇಶಾದ್ಯಂತ ಜಾತಿ ಗಣತಿ ನಡೆಸುವುದು.ಇವುಗಳ ಅಂಕಿಅಂಶಗಳ ಆಧಾರದ ಮೇಲೆ ಕಾರ್ಯಸೂಚಿಗಳನ್ನು ರೂಪಿಸುವುದು.
ಎಸ್‌ಸಿ,ಎಸ್‌ಟಿ ಹಾಗೂ ಒಬಿಸಿ ಸಮುದಾಯಗಳಿಗಿರುವ ಶೇ.50 ಮೀಸಲಾತಿಯನ್ನು ಸಾಂವಿಧಾನಿಕ ತಿದ್ದುಪಡಿಯ ಮೂಲಕ ಹೆಚ್ಚಿಸುವುದು.
आज लोकसभा चुनाव, 2024 के लिए कांग्रेस का ‘न्याय पत्र’ जारी किया गया है।
आप नीचे दी गई लिंक पर क्लिक कर उसे पढ़ सकते हैं- https://t.co/wDwepU4dW2 pic.twitter.com/ulccjN6Trg
— Congress (@INCIndia) April 5, 2024
ಯಾವುದೇ ತಾರತಮ್ಯವಿಲ್ಲದೆ ಎಲ್ಲ ಜಾತಿ ಸಮುದಾಯಗಳ ಆರ್ಥಿಕ ದುರ್ಬಲ ವರ್ಗಗಳಿಗೆ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಶೇ.10 ರಷ್ಟು ಮೀಸಲಾತಿ ಒದಗಿಸುವುದು.
ಒಂದು ವರ್ಷದೊಳಗೆ ಎಸ್‌ಸಿ,ಎಸ್‌ಟಿ ಹಾಗೂ ಒಬಿಸಿ ಸಮುದಾಯಗಳ ಮೀಸಲು ಉದ್ಯೋಗಗಳ ಎಲ್ಲ ಬ್ಯಾಕ್‌ಲಾಗ್ ಉದ್ಯೋಗಗಳನ್ನು ಭರ್ತಿ ಮಾಡುವುದು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎಂದೋ ಕೈತಪ್ಪಿದ ‘ಕಚ್ಚತೀವು’ ಕಥೆ ಇರಲಿ; ಚೀನಾ ಅತಿಕ್ರಮಣ ಬಗ್ಗೆ ಮೋದಿ ಮಾತಾಡಲಿ
ಸರ್ಕಾರಿ ಹಾಗೂ ಕೇಂದ್ರ ಸ್ವಾಮ್ಯದ ಉದ್ಯೋಗಗಳಲ್ಲಿ ಗುತ್ತಿಗೆ ಆಧಾರಿತ ಉದ್ಯೋಗಗಳನ್ನು ರದ್ದುಗೊಳಿಸಿ, ಇವುಗಳನ್ನು ಶಾಶ್ವತ ಉದ್ಯೋಗಗಳನ್ನಾಗಿ ಮಾರ್ಪಡಿಸುವುದು.
ಎಸ್‌ಸಿ,ಎಸ್‌ಟಿ ಸಮುದಾಯದವರಿಗೆ ಮನೆ ನಿರ್ಮಾಣ, ಉದ್ಯಮ ಪ್ರಾರಂಭ ಹಾಗೂ ಆಸ್ತಿ ಖರೀದಿಸಲು ನೀಡುವ ಸಾಂಸ್ಥಿಕ ಸಾಲವನ್ನು ಹೆಚ್ಚಿಸುವುದು.
ಭೂ ಸೀಲಿಂಗ್ ಕಾಯ್ದೆಗಳ ಅಡಿಯಲ್ಲಿ ಬಡವರಿಗೆ ಸರ್ಕಾರಿ ಭೂಮಿ ನೀಡಲು ಹಾಗೂ ಭೂಮಿ ನೀಡುವುದನ್ನು ಹೆಚ್ಚಿಸಲು ಪ್ರಾಧಿಕಾರವನ್ನು ರಚಿಸುವುದು
ಪರಿಶಿಷ್ಟ ಜಾತಿಗೆ ಸೇರಿದ ಗುತ್ತಿಗೆದಾರರಿಗೆ ಹೆಚ್ಚಿನ ಗುತ್ತಿಗೆಗಳನ್ನು ನೀಡಲು ಸಾರ್ವಜನಿಕ ಸಂಗ್ರಹ ನೀತಿಯ ವ್ಯಾಪ್ತಿಯನ್ನು ವಿಸ್ತರಿಸುವುದು.
ಉನ್ನತ ಶಿಕ್ಷಣ ಕೈಗೊಳ್ಳುವ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ನಿಧಿಯನ್ನು ದುಪ್ಪಟ್ಟು ಮಾಡುವುದು.
ಬಡವರು ಪ್ರಮುಖವಾಗಿ ಎಸ್‌ಸಿ, ಎಸ್‌ಟಿ ಸಮುದಾಯಗಳ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳನ್ನು ಸ್ಥಾಪಿಸುವುದು ಹಾಗೂ ಪ್ರತಿ ಬ್ಲಾಕ್‌ನಲ್ಲಿ ಇವುಗಳನ್ನು ವಿಸ್ತರಿಸುವುದು.
ಎಲ್‌ಜಿಬಿಟಿಕ್ಯೂಐಎ, ಹಿರಿಯ ನಾಗರಿಕರಿಗೆ, ವೃದ್ಧರಿಗೆ ನೀಡಲಾಗುವ ವೃದ್ಧಾಪ್ಯ ವೇತನವನ್ನು 1000 ರೂ. ಗೆ ಹೆಚ್ಚಳ
ಒಂದರಿಂದ 12ನೇ ತರಗತಿಯವರೆಗೆ ಸಾರ್ವಜನಿಕ ಶಾಲೆಗಳಲ್ಲಿ ಕಡ್ಡಾಯ ಉಚಿತ ಶಿಕ್ಷಣ ನೀಡುವ ಆರ್‌ಟಿಐ ಕಾಯ್ದೆಗೆ ತಿದ್ದುಪಡಿ
ಎನ್‌ಇಪಿ ಶಿಕ್ಷಣವನ್ನು ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸಿ ಮರು ಪರಿಶೀಲಿಸುವುದರ ಜೊತೆ ತಿದ್ದುಪಡಿ ಮಾಡುವುದು
21 ವರ್ಷದೊಳಗಿನ ಪ್ರತಿಭಾವಂತ ಹಾಗೂ ಉದಯೋನ್ಮುಖ ಕ್ರೀಡಾಪಡುಗಳಿಗೆ ಪ್ರತಿ ತಿಂಗಳು 10 ಸಾವಿರ ರೂ. ಕ್ರೀಡಾ ವಿದ್ಯಾರ್ಥಿ ವೇತನ
ಬಡ ಕುಟುಂಬದ ಮಹಿಳೆಯರಿಗೆ ಯಾವುದೇ ನಿಯಮವಿಲ್ಲದೆ ಮಹಾಲಕ್ಷ್ಮಿ ಯೋಜನೆಯಡಿ ವಾರ್ಷಿಕ 1 ಲಕ್ಷ ರೂ. ವಿತರಣೆ
ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನೊಂದಿಗೆ ಪ್ರತಿ ವರ್ಷ ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಗ್ಯಾರಂಟಿ ಖಾತರಿ ನೀಡಿಕೆ
ಮಾಧ್ಯಮಗಳಿಗೆ ವಿಧಿಸಲಾಗಿರುವ ಹಲವು ನಿರ್ಬಂಧಗಳನ್ನು ಸ್ಥಗಿತಗೊಳಿಸುವುದರ ಜೊತೆ ಮುಕ್ತ ಸ್ವಾತಂತ್ರ ನೀಡುವುದು
ಪ್ರಣಾಳಿಕೆಯ ಆಂಗ್ಲ ಅವತರಣಿಕೆಯ ಸಂಪೂರ್ಣ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಲಿಂಕ್: ಕಾಂಗ್ರೆಸ್ ಪ್ರಣಾಳಿಕೆ Congress Manifesto English Final (1)
