ಸಂವಿಧಾನವೇ ಸುಪ್ರೀಂ: ಧನಕರ್‌ಗೆ ಸಿಜೆಐ ಪವರ್‌ಫುಲ್ ಕ್ಲಾಸ್‌

Date:

Advertisements

ಸುಪ್ರೀಂ ಕೋರ್ಟ್‌ನ 52ನೇ ಮುಖ್ಯ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರು ಮಹಾರಾಷ್ಟ್ರ ಮತ್ತು ಗೋವಾದ ಬಾರ್ ಕೌನ್ಸಿಲ್ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, “ನ್ಯಾಯಾಂಗ ಅಥವಾ ಕಾರ್ಯಾಂಗ ಶ್ರೇಷ್ಠವಲ್ಲ. ದೇಶದ ಸಂವಿಧಾನವೇ ಸರ್ವಶ್ರೇಷ್ಠ. ಅದರ ಎಲ್ಲ ಸ್ತಂಭಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು” ಎಂದು ಹೇಳಿದ್ದಾರೆ.

ಗವಾಯಿ ಅವರ ಈ ಹೇಳಿಕೆಯ ನಂತರ ಮತ್ತೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಮುನ್ನೆಲೆಗೆ ಬಂದಿದೆ, ಚರ್ಚೆಯಾಗುತ್ತಿದೆ. ಇತ್ತೀಚೆಗೆ, ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ತಮ್ಮ ಕಚೇರಿಗೆ ಬಂದ ಮಸೂದೆಗಳನ್ನು ಕ್ರಮವಾಗಿ ಒಂದು ತಿಂಗಳು ಮತ್ತು ಮೂರು ತಿಂಗಳ ಒಳಗೆ ವಿಲೇವಾರಿ ಮಾಡಬೇಕೆಂದು ಸಮಯ ನಿಗದಿ ಮಾಡಿತ್ತು. ನ್ಯಾಯಾಂಗದ ಈ ಆದೇಶವನ್ನು ಟೀಕಿಸಿದ್ದ ಧನಕರ್, “ಸಂಸತ್ತೇ ಸರ್ವೋಚ್ಚ. ಸಾಂವಿಧಾನಿಕವಾಗಿ ಚುನಾಯಿತರಾಗುವ ಸದಸ್ಯರನ್ನು ಹೊಂದಿರುವ ಸಂಸತ್‌ಗಿಂತ ಮತ್ಯಾವುದಕ್ಕೂ ಹೆಚ್ಚಿನ ಅಧಿಕಾರವಿಲ್ಲ. ರಾಷ್ಟ್ರಪತಿಗೆ ಗಡುವು ನಿಗದಿ ಮಾಡುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇಲ್ಲ” ಎಂದು ಹೇಳಿದ್ದರು.

”ಪ್ರಜಾಪ್ರಭುತ್ವದಲ್ಲಿ ಜನರೇ ನಿರ್ಣಾಯಕ. ಚುನಾವಣೆ ಸಮಯದಲ್ಲಿ ಜನತೆ ತಮ್ಮ ಹಕ್ಕು ಚಲಾಯಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸುತ್ತಾರೆ. ನಮಗೆ ಬೇಕಾದ ಸರ್ಕಾರ ಆಯ್ಕೆ ಮಾಡಿಕೊಳ್ಳುತ್ತಾರೆ. ಚುನಾಯಿತ ಸರ್ಕಾರ ದೇಶದ ಜನರಿಗೆ ಹೊಣೆಯಾಗಿರುತ್ತದೆ. ಹೀಗಾಗಿ, ಸಂವಿಧಾನದಲ್ಲಿ ಸಂಸತ್‌ಗಿಂತ ದೊಡ್ಡವರು ಯಾರೂ ಇಲ್ಲ,” ಎಂದು ಹೇಳಿದ್ದರು.

Advertisements

ಅಂದಹಾಗೆ, ಧನಕರ್ ಅವರು ಈ ಹಿಂದೆಯೂ ಕೂಡ ಹಲವು ಬಾರಿ ಇತರಹದ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದವರು. “ಸನಾತನ ಸಂಸ್ಥೆಯು ದೇಶದ ಸಂಸ್ಕ್ರತಿಯ ಶಿಕ್ಷಣದ ಭಾಗವಾಗಬೇಕು, ಯಾವುದೇ ಪ್ರದೇಶವನ್ನು ವಶಕ್ಕೆ ಪಡೆಯಲು ಅದರ ಭಾಷೆ, ಸಂಸ್ಕ್ರತಿ ನಾಶ ಮಾಡಬೇಕು” ಎಂದು ಹೇಳಿ ಟ್ರೋಲ್‌ಗೆ ಒಳಗಾಗಿದ್ದರು. ಹಾಗೇಯೇ, ರಾಜ್ಯಸಭಾ ಅಧ್ಯಕ್ಷರಾಗಿರುವ ಜಗದೀಪ್ ಧನಕರ್ ಅವರು ಕಲಾಪದ ವೇಳೆ ಪಕ್ಷಪಾತ ಧೋರಣೆಯನ್ನು ಹೊಂದಿದ್ದಾರೆಂದು ಆರೋಪಿಸಿದ್ದ ವಿಪಕ್ಷಗಳ ಸಂಸದರು ರಾಜ್ಯಸಭೆಯಲ್ಲಿ ಧನಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರು.

ಈ ನಡುವೆ, ಮಸೂದೆಗಳಿಗೆ ಅಂಕಿತ ಹಾಕಲು ಗಡುವು ವಿಧಿಸಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬೆನ್ನಲ್ಲೇ ಧನಕರ್‌ ಅವರು, “ನ್ಯಾಯಾಲಯಗಳು ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ” ಎಂದು ನ್ಯಾಯಾಂಗದ ವಿರುದ್ಧ ಕಟುವಾದ ಪ್ರತಿಕ್ರಿಯೆ ನೀಡಿದ್ದರು. ಅವರಿಗೆ ಸಂವಿಧಾನದ ಪಾಠವನ್ನು ಸಿಜೆಐ ಗವಾಯಿ ನೀಡಿದ್ದಾರೆ. ಗವಾಯಿ ಅವರ ಮಾತನ್ನ ಅರ್ಥ ಮಾಡಿಕೊಳ್ಳಬೇಕಿದೆ. ಕಲಿಯಬೇಕಿದೆ.

ಈ ವರದಿ ಓದಿದ್ದೀರಾ?: ಸಿಂಧು ನದಿ ನೀರು ಹರಿಸಲೇಬೇಕು – ಇಲ್ಲದಿದ್ದರೆ ಭಾರತಕ್ಕೇ ಗಂಭೀರ ಸಮಸ್ಯೆ!

ಗವಾಯಿ ಅವರು ಹೇಳಿದಂತೆ, “ನ್ಯಾಯಾಂಗ, ಕಾರ್ಯಾಂಗ ಅಥವಾ ಸಂಸತ್ತು ಶ್ರೇಷ್ಠವಲ್ಲ. ಭಾರತದ ಸಂವಿಧಾನವೇ ಶ್ರೇಷ್ಠ. ಸಂವಿಧಾನದ ಮೂರು ಅಂಗಗಳಾದ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಸಂವಿಧಾನದ ಪ್ರಕಾರ ಕಾರ್ಯ ನಿರ್ವಹಿಸಬೇಕು. ಸಂವಿಧಾನದ ಈ ಈ ಮೂರು ಅಂಗಗಳು ಸಮಾನವಾದವು“ ಎಂಬುದನ್ನು ಧನಕರ್ ಅರಿಯಬೇಕಿದೆ.

“ಸಂಸತ್ತಿಗೆ ಸಂವಿಧಾನವನ್ನು ತಿದ್ದುಪಡಿ ಮಾಡುವ ಅಧಿಕಾರವಿದೆ. ಆದರೆ, ಸಂವಿಧಾನದ ಮೂಲ ಸ್ವರೂಪವನ್ನು ಮುಟ್ಟುವುದಕ್ಕೆ ಆಗುವುದಿಲ್ಲ” ಎಂದು ಗವಾಯಿ ಹೇಳಿದ್ದಾರೆ.

ದೇಶದ ಸಂವಿಧಾನ ನಮಗೆ ಸಮಾನತೆ ನೀಡುವ ಕೆಲಸ ಮಾಡಿದೆ. ಆದರೆ, ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುವವರು ಸಂವಿಧಾನವನ್ನು ಬದಲಿಸುವ ಮಾತನಾಡುತ್ತಿದ್ದಾರೆ. ನಗಣ್ಯವೆಂದು ನೋಡುತ್ತಿದ್ದಾರೆ. ಬಿಜೆಪಿಗರ ಈ ಧೋರಣೆ ಖಂಡನೀಯ.

ಸಂವಿಧಾನದ ಅಡಿಯಲ್ಲಿ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗ ಮೂರು ಕೂಡ ಸಮಾನ. ಅದರಲ್ಲಿ ಶಾಸಕಾಂಗಕ್ಕೆ ಸಲಹೆ ಕೊಡುವ, ಮೇಲ್ವಿಚಾರಣೆ ಮಾಡುವ ಅಧಿಕಾರ ನ್ಯಾಯಾಂಗಕ್ಕೆ ಇದೆ. ಕಾರ್ಯಾಂಗದಲ್ಲಿ ಆಗುತ್ತಿರುವ ವಿಳಂಬ ಕಾರಣಕ್ಕೆ ಕಾರ್ಯಾಂಗಕ್ಕೂ ಕೂಡ ಸುಪ್ರೀಂ ಸಮಯ ನಿಗದಿ ಮಾಡಿದೆ. ಇದನ್ನ ಎಲ್ಲ ಆಯಾಮಗಳ ಮೇಲೆ ನೋಡುವ ಅಗತ್ಯವಿದೆಯೇ ಹೊರತು, ಒಬ್ಬರ ಮೇಲೆ ಇನ್ನೊಬ್ಬರು ಅಧಿಕಾರ ಚಲಾಯಿಸುವ ಆಯಾಮದಿಂದಲ್ಲ. ಧನಕರ್ ಅವರು ಇದನ್ನು ಅರ್ಥಮಾಡಿಕೊಳ್ಳಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X