ವಿಚ್ಛೇದನ ಪಡೆದ ದಂಪತಿ ಸಮಾನ ಹುದ್ದೆಯಲ್ಲಿದ್ದು ಸಮಾನವೇತನ ಗಳಿಸುತ್ತಿರುವ ಕಾರಣದಿಂದಾಗಿ ಪತ್ನಿಗೆ ಜೀವನಾಂಶ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಪತ್ನಿ ತನ್ನ ಪತಿಯಂತಹ ಹುದ್ದೆಯಲ್ಲಿಯೇ ಇದ್ದು, ಆಕೆಯ ಖರ್ಚನ್ನು ಆಕೆಯ ವೇತನದಲ್ಲೇ ನಿಭಾಯಿಸಬಲ್ಲಳು ಎಂದು ಹೇಳಿ ಜೀವನಾಂಶ ಕೋರಿದ ಮಹಿಳೆಯ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯನ್ ಅವರ ದ್ವಿಸದಸ್ಯ ಪೀಠವು ಈ ತೀರ್ಪನ್ನು ನೀಡಿದೆ. ಸಹಾಯಕ ಪ್ರಾಧ್ಯಾಪಕರೂ ಆಗಿರುವ ಮಹಿಳೆ ತನ್ನ ಪತಿಯಿಂದ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು.
ಇದನ್ನು ಓದಿದ್ದೀರಾ? ಸುಪ್ರೀಂ ಕೋರ್ಟ್ | ಬ್ಯಾಲೆಟ್ ಪೇಪರ್ ಮತದಾನ ಮರುಜಾರಿ ಕೋರಿದ್ದ ಅರ್ಜಿ ವಜಾ
“ಪತಿ ಮತ್ತು ಪತ್ನಿ ಇಬ್ಬರು ಕೂಡಾ ಸಹಾಯಕ ಪ್ರಾಧ್ಯಾಪಕರು ಆಗಿದ್ದಾರೆ. ಸಮಾನವಾದ ಉದ್ಯೋಗ ಹೊಂದಿದ್ದಾರೆ. ಆದ್ದರಿಂದ ಸಂವಿಧಾನದ ವಿಧಿ 136ರ ಅಡಿಯಲ್ಲಿ ಬರದು. ಆದ್ದರಿಂದಾಗಿ ಈ ಅರ್ಜಿಯನ್ನು ವಜಾಗೊಳಿಸಲಾಗುವುದು” ಎಂದು ಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.
ಪತ್ನಿ ತನ್ನಷ್ಟೇ ದುಡಿಯುತ್ತಿರುವ ಕಾರಣದಿಂದಾಗಿ ಜೀವನಾಂಶ ನೀಡಬೇಕಾಗಿಲ್ಲ ಎಂಬುದು ಪತಿಯ ವಾದವಾಗಿತ್ತು. ಅರ್ಜಿಯ ವಿರುದ್ಧ ವಾದ ಮಂಡಿಸಿದ ಪತಿಯ ಪರ ವಕೀಲ ಶಶಾಂಕ್ ಸಿಂಗ್, “ಅವರು ಮಾಸಿಕವಾಗಿ 60 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದರು. ಇಬ್ಬರೂ ಒಂದೇ ದರ್ಜೆಯ ಹುದ್ದೆಯನ್ನು ಹೊಂದಿದ್ದಾರೆ” ಎಂದು ಪ್ರತಿಪಾದಿಸಿದ್ದಾರೆ.
ಆದರೆ ತನ್ನ ಪತಿ ಮಾಸಿಕವಾಗಿ ಒಂದು ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಆದ್ದರಿಂದಾಗಿ ಜೀವನಾಂಶ ನೀಡಬೇಕು ಎಂಬುದು ಪತ್ನಿಯ ವಾದವಾಗಿದೆ. ವೇತನದ ವಿಚಾರದಲ್ಲಿ ವಾದ ನಡೆದ ಕಾರಣ ಸುಪ್ರೀಂ ಕೋರ್ಟ್ ಇಬ್ಬರೂ ತನ್ನ ಪೇ ಸ್ಲಿಪ್ (ಮಾಸಿಕ ವೇತನದ ದಾಖಲೆ) ಸಲ್ಲಿಸುವಂತೆ ತಿಳಿಸಿದೆ.
ಇನ್ನು ಇತ್ತೀಚೆಗೆ ಜೀವನಾಂಶ ಕೋರಿ ಸಲ್ಲಿಸಿದ್ದ ಇನ್ನೊಂದು ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, “ಇಂತಹ ಕಾನೂನು ಮಹಿಳೆಗೆ ಯಾವುದೇ ಆರ್ಥಿಕ ತೊಂದರೆ ಉಂಟಾಗದಿರಲಿ ಎಂಬ ಉದ್ದೇಶವನ್ನು ಹೊಂದಿದೆ. ಪತಿಯಿಂದ ಹಣ ದೋಚಲು ಈ ಕಾನೂನು ಇರುವುದಲ್ಲ” ಎಂದು ಹೇಳಿತ್ತು.

ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com