ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕನೋರ್ವ ಗೋಮಾಂಸ ತಿಂದಿದ್ದಾನೆ ಎಂಬ ಶಂಕೆಯಿಂದ ಆತನಿಗೆ ಥಳಿಸಿ ಕೊಂದ ಘಟನೆಯು ಹರಿಯಾಣದ ಚಾರ್ಖಿ ದಾದ್ರಿ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆಯಲ್ಲಿ ಗೋರಕ್ಷಣೆ ನೆಪದಲ್ಲಿ ಕಾರ್ಮಿಕನ ಕೊಂದ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ಆಗಸ್ಟ್ 27ರಂದು ಸಬೀರ್ ಮಲಿಕ್ ಎಂಬ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕನನ್ನು ಕೊಲ್ಲಲ್ಲಾಗಿದೆ.
ಇದನ್ನು ಓದಿದ್ದೀರಾ? ಫ್ರಿಡ್ಜ್‌ನಲ್ಲಿ ಗೋಮಾಂಸವಿದ್ದ ಮನೆಗಳು ಮಾತ್ರ ನೆಲಸಮ; ಅಕ್ರಮವಾದರೂ ಹಾಗೆಯೇ ಇವೆ 16 ನೆರೆಹೊರೆ ಮನೆ!
ಮಲಿಕ್ ಗೋಮಾಂಸ ತಿಂದಿದ್ದಾನೆ ಎಂದು ಶಂಕಿಸಿ ಆರೋಪಿಗಳಾದ ಅಭಿಷೇಕ್, ಮೋಹಿತ್, ರವೀಂದರ್, ಕಮಲಜಿತ್ ಮತ್ತು ಸಾಹಿಲ್, ಸಬೀರ್ ಮಲಿಕ್ ಅವರನ್ನು ಕೊಂದಿದ್ದಾರೆ.
STORY | Cow vigilantes lynch migrant worker in Haryana, 5 held
— Press Trust of India (@PTI_News) August 31, 2024
READ: https://t.co/lsvvaDAUTj
VIDEO:
(Full video available on PTI Videos – https://t.co/n147TvqRQz) pic.twitter.com/FJLkHAUBgO
ಪ್ಲಾಸ್ಟಿಕ್ ಬಾಟಲಿಗಳನ್ನು ಮಾರಾಟ ಮಾಡುವ ನೆಪದಲ್ಲಿ ಮಲಿಕ್ ಅವರನ್ನು ಅಂಗಡಿಯೊಂದಕ್ಕೆ ಕರೆದು ಥಳಿಸಿ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
