ಬಂಗಾಳಕೊಲ್ಲಿಯಲ್ಲಿ ಮಿಚಾಂಗ್ ಚಂಡಮಾರುತ ರೂಪುಗೊಂಡಿದೆ. ಈ ಹಿನ್ನೆಲೆ, ಆಂಧ್ರಪ್ರದೇಶ ಮತ್ತು ತಮಿಳುನಾಡಿನತ್ತ ಚಂಡಮಾರುತ ಬೀಸುತ್ತಿದ್ದು, ಹಲವು ಭಾಗಗಳಲ್ಲಿ ಡಿ.5 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ ಚಂಡಮಾರುತದ ಬಗ್ಗೆ ಮಾಹಿತಿ ನೀಡಿದ ಕೂಡಲೇ, ತಮಿಳುನಾಡು ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಈ ಚಂಡಮಾರುತದಿಂದ ಉಂಟಾಗುವ ಸಮಸ್ಯೆಗಳನ್ನು ಎದುರಿಸಲು ಸಜ್ಜಾಗಿರುವ ತಮಿಳುನಾಡು ಸರ್ಕಾರ ಚೆನ್ನೈ, ತಿರುವಲ್ಲೂರು, ಚೆಂಗಲ್‌ಪಟ್ಟು ಮತ್ತು ಕಾಂಚೀಪುರಂ ಶಾಲೆ ಮತ್ತು ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಿವೆ.
ಬಂಗಾಳಕೊಲ್ಲಿಯಿಂದ ಭಾರೀ ಚಂಡಮಾರುತ ಬೀಸುತ್ತಿರುವ ಹಿನ್ನೆಲೆ, ತಿರುವಲ್ಲೂರು ಮತ್ತು ಚೆನ್ನೈ ಜನರು ಡಿ.4 ಮತ್ತು 5ರಂದು ಆದಷ್ಟು ಮನೆಯಲ್ಲಿ ಸುರಕ್ಷಿತವಾಗಿ ಇರಬೇಕು. ಅನಿವಾರ್ಯ ಸಂದರ್ಭ ಇದ್ದರೆ ಮಾತ್ರ ಹೊರಬರಬೇಕು, ಇಲ್ಲದಿದ್ದರೆ ಮನೆಯಿಂದಲೇ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದೆ.
சென்னை பள்ளிக்கரணை அப்பார்ட்மெண்ட் 😭😭😭
Chennai people be safe pic.twitter.com/xNFgNRkSmn— 🌄Anbe Sivam🌄 (@Anbe_sivamoffl) December 4, 2023
ಇನ್ನು ಅಗತ್ಯ ಸಿಬ್ಬಂದಿ ಜತೆಗೆ ಮಾತ್ರ ಕಾರ್ಯ ನಿರ್ವಹಿಸಲು ಉದ್ಯೋಗಿಗಳಿಗೆ ತಿಳಿಸುವಂತೆ ಖಾಸಗಿ ಕಂಪನಿಗಳಿಗೆ ಕೇಳಲಾಗಿದೆ.
118 ರೈಲು ಸೇವೆ ರದ್ದು ಮಾಡಿದ ದಕ್ಷಿಣ ರೈಲ್ವೆ
ದಕ್ಷಿಣ ರೈಲ್ವೆ ಡಿಸೆಂಬರ್ 3 ರಿಂದ 7ರ ವರೆಗೆ 118 ರೈಲು ಸೇವೆಗಳನ್ನು ರದ್ದುಗೊಳಿಸಿದೆ. ಬೆಂಗಳೂರು-ಹೌರಾ, ತಿರುವನಂತಪುರಂ-ನವದೆಹಲಿ ಕೇರಳ ಎಕ್ಸ್‌ಪ್ರೆಸ್, ಪಾಟ್ನಾ-ಎರ್ನಾಕುಲಂ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, ತಿರುವನಂತಪುರ ಸಿಕಂದರಾಬಾದ್ ಶಬರಿ ಎಕ್ಸ್‌ಪ್ರೆಸ್, ವಿಜಯವಾಡ ಜನಶತಾಬ್ದಿ, ಬರೌನಿ-ಕೊಯಮತ್ತೂರು ವಿಶೇಷ ರೈಲು, ಗಯಾ ಚೆನ್ನೈ ಎಕ್ಸ್‌ಪ್ರೆಸ್, ಗೋರಖ್‌ಪುರ್ ರಪ್ತಿಸಾಗರ್ ಎಕ್ಸ್‌ಪ್ರೆಸ್, ಕೊಚುವೇಲಿ, ನಿಜಾಮುದ್ದೀನ್ ಚೆನ್ನೈ ಡುರಂಟೊ ಎಕ್ಸ್‌ಪ್ರೆಸ್ ಸೇರಿ ರದ್ದಾಗಿರುವ ಪ್ರಮುಖ ರೈಲುಗಳಾಗಿವೆ.
ಹೈ ಅಲರ್ಟ್ ಘೋಷಣೆ
ಬಂಗಾಳಕೊಲ್ಲಿಯಲ್ಲಿ ಡಿ.3ರ ವೇಳೆಗೆ ಮಿಚಾಂಗ್ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆ ಇದೆ. ಆಂಧ್ರಪ್ರದೇಶ, ತಮಿಳುನಾಡು ಕರಾವಳಿಗೆ ಡಿ.4ರಂದು ಈ ಚಂಡಮಾರುತ ಬಂದು ಅಪ್ಪಳಿಸಲಿದೆ. ಹಾಗಾಗಿ, 16 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮ್ಯಾನ್ಮಾರ್ ಸಲಹೆಯಂತೆ ಈ ಚಂಡಮಾರುತಕ್ಕೆ ‘ಮಿಚಾಂಗ್’ ಎಂದು ಹೆಸರಿಡಲಾಗಿದೆ.
ತಮಿಳುನಾಡಿನ ಚೆನ್ನೈ, ತಿರುವಳ್ಳೂರು, ಚೆಂಗಲ್‌ಪಟ್ಟು ಮತ್ತು ಕಾಂಚೀಪುರಂ, ತಿರುವಣ್ಣಾಮಲೈ, ವಿಲ್ಲುಪುರಂ, ಕಡಲೂರು, ಮೈಲಾಡುತುರೈ, ತಂಜಾವೂರು, ಅರಿಯಲೂರು, ಪೆರಂಬಲೂರು, ಕಲ್ಲಕುರಿಚ್ಚಿ, ವೆಲ್ಲೂರು, ತಿರುಪತ್ತೂರು, ಧರ್ಮಪುರಿ, ಕೃಷ್ಣಗಿರಿ ಸೇಲಂ, ನಾಮಕ್ಕಲ್ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
#WATCH | Tamil Nadu: As cyclone ‘Michaung’ approaches Chennai coast, accompanied by heavy rainfall, several trains are delayed and a few have been cancelled.
(Visuals from Egmore Railway Station) pic.twitter.com/5SfV1Xr81L
— ANI (@ANI) December 4, 2023
ಈಗಾಗಲೇ ಚೆನ್ನೈನಲ್ಲಿ ಭಾರೀ ಮಳೆಯಾಗುತ್ತಿದ್ದು, ಚೆನ್ನೈನಾದ್ಯಂತ ಹಲವಾರು ಮೆಟ್ರೋ ನಿಲ್ದಾಣಗಳ ಬಳಿ ಜಲಾವೃತವಾಗಿದೆ. ಸೇಂಟ್ ಥಾಮಸ್ ಮೆಟ್ರೋ ನಿಲ್ದಾಣದಲ್ಲಿ 4 ಅಡಿಗಳಷ್ಟು ನೀರು ನಿಂತಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ ಇಬ್ಬರ ಬಂಧನ
ಪುದುಚೇರಿಯ ಪೂರ್ವ-ಆಗ್ನೇಯಕ್ಕೆ ಸುಮಾರು 440 ಕಿಲೋ ಮೀಟರ್ ಮತ್ತು ಚೆನ್ನೈನ ಆಗ್ನೇಯಕ್ಕೆ 420 ಕಿಲೋ ಮೀಟರ್, ಆಂಧ್ರ ಪ್ರದೇಶದ ನೆಲ್ಲೂರಿನ ಆಗ್ನೇಯಕ್ಕೆ 740 ಕಿಲೋ ಮೀಟರ್ ದೂರದಲ್ಲಿ ಚಂಡಮಾರುತ ರೂಪಗೊಂಡಿದೆ. ಗಾಳಿಯೂ ಗಂಟೆಗೆ 80 ರಿಂದ 90 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿದ್ದು, ಈ ವೇಗ ಗಂಟೆಗೆ 100 ಕಿಲೋ ಮೀಟರ್‌ಗೆ ಹೆಚ್ಚುವ ಸಾಧ್ಯತೆ ಇಂದು ಐಎಂಡಿ ಮಾಹಿತಿ ನೀಡಿದೆ.
ಚಂಡಮಾರುತದ ಬಗ್ಗೆ ಸಾರ್ವಜನಿಕರು ಮತ್ತು ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದ್ದು, ಕೃಷ್ಣಪಟ್ಟಣಂ ಸೇರಿದಂತೆ ಮೀನುಗಾರಿಕಾ ಬಂದರುಗಳಲ್ಲಿ 1,000ಕ್ಕೂ ಹೆಚ್ಚು ದೋಣಿಗಳು ಲಂಗರು ಹಾಕಿವೆ.
ತಮಿಳುನಾಡು ವಿಪತ್ತು ನಿರ್ವಹಣಾ ಪಡೆಯ 14 ತಂಡಗಳು 350 ಸಿಬ್ಬಂದಿ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) 225 ಸಿಬ್ಬಂದಿ ಒಂಬತ್ತು ತಂಡಗಳು ಮೈಲಾಡುತುರೈ, ನಾಗಪಟ್ಟಣಂ, ತಿರುವಳ್ಳೂರ್, ಕಡಲೂರು, ವಿಲ್ಲುಪುರಂ, ಕಾಂಚೀಪುರಂ, ಚೆನ್ನೈ, ಚೆಂಗಲ್‌ಪೇಟ್‌ನ ಕರಾವಳಿ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ.