ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರದ ನಡುವೆ ತ್ರಿಭಾಷಾ ನೀತಿ ವಿಚಾರದಲ್ಲಿ ವಾಗ್ವಾದ ನಡೆಯುತ್ತಿದೆ. ಕೇಂದ್ರ ಸರ್ಕಾರವು ಹಿಂದಿ ಹೇರಿಕೆ ಮಾಡುತ್ತಿದೆ ದಕ್ಷಿಣ ಭಾರತದ ರಾಜ್ಯಗಳು ವರ್ಷಗಳಿಂದ ಆರೋಪಿಸುತ್ತಾ ಬಂದಿದೆ. ಪ್ರಸ್ತುತ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರದ ನಡುವೆ ರಾಜಕೀಯ ವಾಕ್ಸಮರ ನಡೆಯುತ್ತಿರುವ ನಡುವೆ ಡೈರಿಮಿಲ್ಕ್‌ನ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಹಲವರು ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟ್ರೆಂಡಿಂಗ್ ವಿಚಾರಗಳಿಗೆ ಸಂಬಂಧಿಸಿದಂತೆ ಜಾಹೀರಾತು ಮಾಡುವುದು ಕಾರ್ಪೋರೇಟ್ ಸಂಸ್ಥೆಗಳ ಮಾರುಕಟ್ಟೆ ತಂತ್ರವಾಗಿದೆ. ಅದರ ಭಾಗವಾಗಿಯೇ ಡೈರಿ ಮಿಲ್ಕ್ ಇದೀಗ ಭಾಷಾ ಹೇರಿಕೆಯ ವಿವಾದ ನಡುವೆ ತಮಿಳು ಮತ್ತು ಹಿಂದಿಗರ ನಡುವೆ ನಡೆಯುವ ಸಂಭಾಷಣೆಯ ಜಾಹೀರಾತೊಂದನ್ನು ಬಿಡುಗಡೆ ಮಾಡಿದೆ.
ಇದನ್ನು ಓದಿದ್ದೀರಾ? ತ್ರಿಭಾಷಾ ಸೂತ್ರದ ಹೆಸರಿನಲ್ಲಿ ಹಿಂದಿ ಹೇರಿಕೆ ಮಾಡುತ್ತಿದೆ ಕೇಂದ್ರ ಸರ್ಕಾರ? three-language formula | BJP
ವಿಡಿಯೋದಲ್ಲಿ ಏನಿದೆ?
ಹಿಂದಿ ಮಾತನಾಡುವ ಮಹಿಳೆಯರು ಕೂತು ಮಾತನಾಡುತ್ತಿದ್ದ ವೇಳೆ ಹೊಸದಾಗಿ ಉತ್ತರ ಭಾರತಕ್ಕೆ ಹೋದ ಚೆನ್ನೈನ ಮಹಿಳೆಯೊಬ್ಬರು ಗುಂಪಿಗೆ ಸೇರಿಕೊಳ್ಳುತ್ತಾರೆ. ಹೆಚ್ಚಾಗಿ ಹಿಂದಿ ಬಾರದ ತಮಿಳುನಾಡಿನ ಮಹಿಳೆ ಗುಂಪಿನಲ್ಲಿದ್ದರೂ ಕೂಡಾ ಪ್ರತ್ಯೇಕವಾದಂತೆ ಇರುತ್ತಾರೆ.
ಆದರೆ ತಮಿಳಿನ ಮಹಿಳೆಗೆ ಹಿಂದಿ ಬರುವುದಿಲ್ಲ ಎಂದು ತಿಳಿದ ಬಳಿಕ ಹಿಂದಿ ಮಾತನಾಡುವ ಮಹಿಳೆಯೊಬ್ಬರು ತನ್ನಗೆ ಬಂದಷ್ಟು ಹಿಂದಿಯಲ್ಲಿ ಮಾತನಾಡುತ್ತಾ ಘಟನೆಯನ್ನು ವಿವರಿಸುತ್ತಾರೆ. ಆ ವೇಳೆ ಎಲ್ಲರೂ ಜೊತೆಯಾಗಿ ಸಂಭಾಷಣೆ ನಡೆಸುತ್ತಾರೆ. ಈ ಜಾಹೀರಾತಿನ ಮೂಲಕ ಡೈರಿ ಮಿಲ್ಕ್ ಇಂಗ್ಲೀಷ್ ಅನ್ನು ಮಾಧ್ಯಮವಾಗಿ ಬಳಸಿಕೊಂಡಿದ್ದಾರೆ. ಹಿಂದಿ ಹೇರಿಕೆ ವಿರುದ್ಧ ಸ್ಪಷ್ಟ ಸಂದೇಶ ನೀಡಿದಂತಿದೆ.
ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?
ಈ ಜಾಹೀರಾತು ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. “ಉತ್ತರ- ದಕ್ಷಿಣದ ಭಾಷಾ ರಾಜಕೀಯದ ಬಗ್ಗೆ ನನಗೆ ಅರ್ಥವಾಗುವುದಿಲ್ಲ. ಆದರೆ ಇದು ಅತೀ ಉತ್ತಮವಾದ ಜಾಹೀರಾತಾಗಿದೆ. ಡೈರಿ ಮಿಲ್ಕ್ ಇಂಡಿಯಾ ಯಾವೆಗಲೂ ಆ ಸಮಯಕ್ಕೆ ತಕ್ಕುದಾದ ಜಾಹೀರಾತು ನೀಡುತ್ತದೆ” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
English is the best link language
— Satheesh Kumar (@saysatheesh) March 12, 2025
Brilliant ad by @DairyMilkIn
Straight to the point.. simple explanation..
Loved it.. 😍😍😍pic.twitter.com/U1q9OskqTn
ಇನ್ನೋರ್ವ ನೆಟ್ಟಿಗರು, “ಇಂಗ್ಲೀಷ್ ಎಂದಿಗೂ ಉತ್ತಮ ಸಂವಾದ ಭಾಷೆಯಾಗಿದೆ. ಸ್ಥಳೀಯ ಭಾಷೆಗಳು ಬಾರದಿದ್ದಾಗ ಬರುವಷ್ಟು ಇಂಗ್ಲೀಷ್‌ನಲ್ಲೇ ಮಾತನಾಡಬಹುದು. ಇದು ಉತ್ತಮ ಜಾಹೀರಾತಾಗಿದೆ. ನೇರವಾಗಿ ಏನೂ ಹೇಳಬೇಕೋ ಅದನ್ನು ಹೇಳಲಾಗಿದೆ. ಸರಳವಾದ ವಿವರಣೆಯಿದೆ” ಎಂದಿದ್ದಾರೆ.
“ಸದ್ಯ ಎಲ್ಲವೂ ಗೂಗಲ್‌ನಲ್ಲಿ ಸಿಗುವಾಗ ಹಿಂದಿಯನ್ನು ಕಲಿಯುವ ಅಗತ್ಯವೇನಿದೆ? ಯಾರಿಗೆ ಅನಿವಾರ್ಯವಾಗಿ ಹಿಂದಿ ಕಲಿಯಬೇಕೋ ಅವರು ಆ ಸಮಯ ಬಂದಾಗ ಕಲಿಯುತ್ತಾರೆ. ಪ್ರಾಥಮಿಕ ಶಾಲೆಯಿಂದಲೇ ಹಿಂದಿ ಕಲಿಯಬೇಕಾದ ಅಗತ್ಯವೇನಿಲ್ಲ” ಎಂದು ಸತೀಶ್ ಕುಮಾರ್ ಎಂಬ ನೆಟ್ಟಿಗರು ಅಭಿಪ್ರಾಯಿಸಿದ್ದಾರೆ.
