ದಲಿತ ಸಮುದಾಯದ ವ್ಯಕ್ತಿಯೊಬ್ಬರು ತಮ್ಮ ಮನೆಯ ಮುಂದೆ ಕುರ್ಚಿಯಲ್ಲಿ ಕುಳಿತಿದ್ದನ್ನೂ ಸಹಿಸಲಾರದ ಬ್ರಾಹ್ಮಣ ಸಮುದಾಯದ ಜಾತೀವಾದಿಯೊಬ್ಬ ದಾಂಧಲೆ ನಡೆಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯ ಚಿಟೈಪುರ್ವಾ ಗ್ರಾಮದಲ್ಲಿ ಜಾತಿ ದೌರ್ಜನ್ಯದ ಈ ಘಟನೆ ನಡೆದಿದೆ. ದಲಿತ ಸಮುದಾಯದ ಅಶೋಕ್ ಸಾಕೇತ್ ಎಂಬವರು ತಮ್ಮ ಮನೆಯ ಎದುರು ಕುರ್ಚಿ ಹಾಕಿಕೊಂಡು ಕುಳಿತಿದ್ದರು. ಅಲ್ಲಿಗೆ, ಬ್ರಾಹ್ಮಣ ಸಮುದಾಯದ ಮಯಾಂಕ್ ದ್ವಿವೇದಿ ಎಂಬಾತ ಬಂದಿದ್ಧಾರೆ.
‘ತಾವು ಬಂದರೂ ಕುರ್ಚಿಯಲ್ಲಿಯೇ ಕುಳಿತಿದ್ದೀಯಾ? ನಮ್ಮ ಮುಂದೆ ಕುರ್ಚಿಯಲ್ಲಿ ಕುಳಿತುಕೊಳ್ಳುವಷ್ಟು ಧೈರ್ಯವಾ’ ಎಂದು ಮಯಾಂಕ್ ದ್ವಿವೇದಿ ದಾಂಧಲೆ ನಡೆಸಿದ್ದಾರೆ. ಅಶೋಕ್ ಸಾಕೇತ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಸ್ಥಳದಲ್ಲಿದ್ದವರು ಆತನನ್ನು ತಡೆದಿದ್ದು, ಅಶೋಕ್ ಮತ್ತು ಜಾತೀವಾದಿ ಮಯಾಂಕ್ ನಡುವೆ ವಾಗ್ವಾದ ನಡೆಸಿದ್ದಾರೆ.
MP के मऊगंज जिले की ग्राम पंचायत पिपरा के चितईपुरवा गांव का मयंक द्विवेदी नामक मनुवादी महज इसलिए भड़क गया कि Sc समाज के अशोक साकेत एक ब्राम्हण के सामने कुर्सी पर कैसे बैठ सकता है। @DGP_MP इस मनुवादी पर कठोरतम कार्यवाही सुनिश्चित कराएं असमाजिक तत्व राष्ट्र एकता के लिए घातक हैं। pic.twitter.com/KBUldyip0s
— Satyendra Vidrohi (@SatendraVidrohi) November 13, 2024
ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಾತಿ ದೌರ್ಜನ್ಯ ಎಸಗಿದ ಮನುವಾದಿ ಬ್ರಾಹ್ಮಣನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರು ನೆಟ್ಟಿಗರು ಒತ್ತಾಯಿಸಿದ್ದಾರೆ. ಸಮಾಜ ವಿರೋಧಿ ಶಕ್ತಿಗಳು ರಾಷ್ಟ್ರೀಯ ಏಕತೆಗೆ ಮಾರಕವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.