300 ವರ್ಷಗಳ ಬಳಿಕ ದೇವಾಲಯ ಪ್ರವೇಶಿಸಿದ ದಲಿತರು

Date:

Advertisements

ಶತಮಾನಗಳಿಂದ ಅಸ್ತಿತ್ವದಲ್ಲಿದ್ದ ಜಾತಿ ಸಂಕೋಲೆಯನ್ನು ದಲಿತರು ಮುರಿದಿದ್ದು, ಬರೋಬ್ಬರಿ 300 ವರ್ಷಗಳ ಬಳಿಕ ಶಿವನ ದೇವಾಲಯವನ್ನು ಪ್ರವೇಶಿಸಿದ್ದಾರೆ. ಪಶ್ಚಿಮ ಬಂಗಾಳದ ಪುರ್ಬ ಬರ್ಧಮಾನ್ ಜಿಲ್ಲೆಯ ಗಿಧೇಶ್ವರ ಶಿವ ದೇವಾಲಯಕ್ಕೆ 3 ಶತಮಾನಗಳ ಬಳಿಕ ಮೊದಲ ಬಾರಿಗೆ ದಲಿತರು ಪ್ರವೇಶಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುರ್ಬ ಬರ್ಧಮಾನ್ ಜಿಲ್ಲೆಯ ಗಿಧಗ್ರಾಮ್ ಗ್ರಾಮದಲ್ಲಿ ಗಿಧೇಶ್ವರ ಶಿವ ದೇವಾಲಯವಿದೆ. ಆದರೆ, 300 ವರ್ಷಗಳಿಂದ ದೇವಾಲಯಕ್ಕೆ ದಲಿತರಿಗೆ ಪ್ರವೇಶವಿರಲಿಲ್ಲ. ಗ್ರಾಮದಲ್ಲಿ ಸುಮಾರು 130 ದಲಿತ ‘ದಾಸ್‌’ ಸಮುದಾಯದ ಕುಟುಂಬಗಳಿದ್ದು, ಅವರ ಐದು ಮಂದಿ ಪ್ರತಿನಿಧಿಗಳು ಬುಧವಾರ ದೇವಾಲಯವನ್ನು ಪ್ರವೇಶಿಸಿದ್ದಾರೆ.

ನಾಲ್ವರು ಮಹಿಳೆಯರು ಮತ್ತು ಒಬ್ಬ ಪುರುಷ ದೇವಾಲಯದ ಮೆಟ್ಟಿಲುಗಳನ್ನು ಹತ್ತಿ, ದೇವಾಲಯವನ್ನು ಪ್ರವೇಶಿಸಿ, ಶಿವಲಿಂಗದ ಮೇಲೆ ಹಾಲು ಮತ್ತು ನೀರನ್ನು ಸುರಿದು ಅಭಿಷೇಕ ಮಾಡಿದ್ದಾರೆ. ಈ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಲು ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸರನ್ನು ನಿಯೋಜಿಸಲಾಗಿತ್ತು.

Advertisements

ಸುಮಾರು 300 ವರ್ಷಗಳ ಹಿಂದೆ ಸ್ಥಾಪಿತವಾದ ಗಿಧೇಶ್ವರ ಶಿವ ದೇವಾಲಯಕ್ಕೆ ದಲಿತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಗ್ರಾಮದಲ್ಲಿರುವ ‘ದಾಸ’ ಉಪನಾಮಗಳನ್ನು ಹೊಂದಿರುವ ಚಮ್ಮಾರಿಕೆ ಮತ್ತು ನೇಕಾರರಿಕೆ ಕೆಲಸ ಮಾಡುವ ದಲಿತ ಕುಟುಂಬಗಳು ದೇವಾಲಯದಲ್ಲಿ ಪೂಜೆ ಸಲ್ಲಿಸುವ ತಮ್ಮ ಮೂಲಭೂತ ಹಕ್ಕಿಗಾಗಿ ಹೋರಟ ನಡೆಸುತ್ತಿದ್ದರು.

ಈ ವರದಿ ಓದಿದ್ದೀರಾ?: ತುಳುನಾಡ ಸಂಸ್ಕೃತಿಯಂತೆ ‘ದೈವ’ ಆಗಬೇಕಾಗಿದ್ದ ಸೌಜನ್ಯ ದೇವಿಯಾದಳು; ವೈದಿಕೀಕರಣದ ಹೊಸ ಮಗ್ಗಲು

ಫೆಬ್ರವರಿ 26ರಂದು ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ದಲಿತರು ಯೋಜಿಸಿದ್ದರು. ಆದರೆ, ‘ತಳ ಸಮುದಾಯ’ದವರು ಎಂಬ ಕಾರಣಕ್ಕೆ ಅವರನ್ನು ದೇವಾಲಯದ ಆವರಣದಿಂದ ಓಡಿಸಲಾಗಿತ್ತು. ಮಾತ್ರವಲ್ಲದೆ, ಬೆದರಿಕೆಯನ್ನೂ ಹಾಕಲಾಗಿತ್ತು.

ಇದೀಗ, ಆಡಳಿತ ಮತ್ತು ಪೊಲೀಸರ ‘ಸಕ್ರಿಯ ಹಸ್ತಕ್ಷೇಪ ಮತ್ತು ಸಹಕಾರ’ದಿಂದ ದೇವಾಲಯ ಪ್ರವೇಶಿಸಿದ್ದಾರೆ. ಶಿವನ ವಿಗ್ರಹಕ್ಕೆ ಪೂಜೆ ಸಲ್ಲಿಸಿದ್ದಾರೆ. “ದೇವಾಲಯದಲ್ಲಿ ಪೂಜೆ ಸಲ್ಲಿಸುವ ಹಕ್ಕು ನಮಗೆ ದೊರೆತಿರುವುದಕ್ಕೆ ನಾವು ಸಂತೋಷಗೊಂಡಿದ್ದೇವೆ. ಎಲ್ಲರ ಯೋಗಕ್ಷೇಮಕ್ಕಾಗಿ ನಾನು ದೇವರನ್ನು ಪ್ರಾರ್ಥಿಸಿದೆ” ಎಂದು ದೇವಾಲಯದ ಪ್ರವೇಶಿಸಿದ ಗ್ರಾಮದ ದಲಿತ ಮುಖಂಡ ಸಂತೋಷ್ ದಾಸ್ ಹೇಳಿದರು.

“ನಾವು ಈ ಹಿಂದೆಯೇ ಧ್ವನಿ ಎತ್ತಬೇಕಿತ್ತು. ಆಡಳಿತಾತ್ಮಕ ಒತ್ತಡದಿಂದಾಗಿ ದಲಿತರು ದೇವಾಲಯ ಪ್ರವೇಶಕ್ಕೆ ಗ್ರಾಮದ ಮುಖ್ಯಸ್ಥರು ಒಪ್ಪಿಕೊಂಡಿದ್ದಾರೆ. ಪೊಲೀಸ್ ನಿಯೋಜನೆಯನ್ನು ತೆಗೆದುಹಾಕಿದ ನಂತರವೂ ದೇವಾಲಯದ ಬಾಗಿಲುಗಳು ನಮಗಾಗಿ ತೆರೆದಿರುತ್ತವೆಯೇ ಎಂಬುದನ್ನು ಕಾದು ನೋಡಬೇಕು” ಎಂದಿದ್ದಾರೆ..

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X