ಹರಿಯಾಣ ಚುನಾವಣೆ ಮುಗಿದ್ದು, ಬಿಜೆಪಿ ಮತ್ತೆ ಗೆದ್ದಿದೆ. ಕಳೆದ ಅವಧಿಯಲ್ಲಿ ಹರಿಯಾಣ ಮುಖ್ಯಮಂತ್ರಿಯಾಗಿದ್ದ ನವಾಬ್ ಸಿಂಗ್ ಸೈನಿ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಕ್ಟೋಬರ್ 15ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ನಡುವೆ, ಅವರಿಗೆ ವಾಟ್ಸಾಪ್ ಗ್ರೂಪ್‌ವೊಂದರಲ್ಲಿ ‘ಕೊಲೆ ಬೆದರಿಕೆ’ ಹಾಕಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಯುವಕನನ್ನು ಅಜ್ಮೀರ್ ಎಂದು ಹೆಸರಿಸಲಾಗಿದೆ. ಆತನನ್ನು ಜೂಲಾನಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆತನ ಮೂಲಃ ಜಿಂದ್ ಜಿಲ್ಲೆಯ ದೇವೆರಾರ್ ಗ್ರಾಮದವನು ಎಂದು ವರದಿಯಾಗಿದೆ.
ಚುನಾವಣಾ ಮತ ಎಣಿಕೆ ನಡೆಯುತ್ತಿದ್ದ ಅಕ್ಟೋಬರ್ 8ರಂದು ವಾಟ್ಸಾಪ್ ಗುಂಪೊಂದರಲ್ಲಿ ಸೈನಿ ಅವರನ್ನು ಕೊಲ್ಲುವುದಾಗಿ ಅಜ್ಮೀರ್ ಪೋಸ್ಟ್ ಹಾಕಿದ್ದನ್ನು ಎಂದು ಆರೋಪಿಸಲಾಗಿದೆ. ಆ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಯುವಕನನ್ಉ ಬಂಧಿಸಲಾಗಿದೆ ಎಂದು ಜಿಂದ್ ಪೊಲೀಸ್ ವರಿಷ್ಠಾಧಿಕಾರಿ ಸುಮಿತ್ ಕುಮಾರ್ ಹೇಳಿದ್ದಾರೆ.
‘‘ಪೊಲೀಸರ ಗಮನಕ್ಕೆ ಬಂದ ತಕ್ಷಣ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಅಜ್ಮೀರ್‌ನನ್ನು ಬಂಧಿಸಲಾಗಿದೆ,’’ ಎಂದು ಅವರು ತಿಳಿಸಿದ್ದಾರೆ.