ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಶನಿವಾರ ಜೀವ ಬೆದರಿಕೆ ಬಂದಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಮುಂದಿನ 10 ದಿನಗಳಲ್ಲಿ ಅಧಿಕಾರದಿಂದ ಕೆಳಗಿಳಿಯದಿದ್ದರೆ ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಗತಿಯನ್ನು ಕಾಣಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಗಿದೆ. ಅಕ್ಟೋಬರ್ 12 ರಂದು ದಸರಾ ಆಚರಣೆ ವೇಳೆ ಬಾಬಾ ಸಿದ್ದೀಕಿ ಕೊಲೆಯಾಗಿದೆ.
ಇದನ್ನುಓದಿದ್ದೀರಾ? ಪೂರ್ಣ ಕುಂಭ ಮೇಳಕ್ಕೆ ಲಿಂಗಾಯತರಿಗೆ ವಿಶೇಷ ಆಹ್ವಾನ: ಯೋಗಿ ಆದಿತ್ಯನಾಥ್ ಸಲಹೆಗೆ ಆರೆಸ್ಸೆಸ್ ಸಮ್ಮತಿ
ಮುಂಬೈ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ಸೆಲ್‌ಗೆ ಅಪರಿಚಿತ ಸಂಖ್ಯೆಯಿಂದ ಈ ಸಂದೇಶ ಬಂದಿದೆ. ಸದ್ಯ ಮುಂಬೈ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಆದಿತ್ಯನಾಥ್ ಮೇಲೆ ಜೀವ ಬೆದರಿಕೆ ಹಾಕಿರುವ ಆರೋಪಿಯನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.
ಅಕ್ಟೋಬರ್ 12ರಂದು ದಸರಾ ಆಚರಣೆ ವೇಳೆ ಬಾಬಾ ಸಿದ್ದೀಕಿ ಕೊಲೆಯಾಗಿದೆ. ಬಾಬಾ ಸಿದ್ದೀಕಿ ಅವರ ಮಗ ಜೀಶನ್ ಸಿದ್ದೀಕಿ ಅವರ ಕಚೇರಿಯ ಹೊರಗೆ ಮೂವರು ವ್ಯಕ್ತಿಗಳು ಬಾಬಾ ಸಿದ್ದೀಕಿ ಅವರನ್ನು ಗುಂಡಿಕ್ಕಿ ಕೊಂದಿದ್ದರು.
ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಎರಡು ಕೋಟಿ ರೂಪಾಯಿ ಬೇಡಿಕೆಯನ್ನಿಟ್ಟು ಬೆದರಿಕೆ ಹಾಕಿದ್ದ ಆಜಮ್ ಮೊಹಮ್ಮದ್ ಮುಸ್ತಫಾ ಬಂಧನದ ನಂತರ ಈ ಘಟನೆ ನಡೆದಿದೆ. ಇನ್ನು ನೋಯ್ಡಾದ 20 ವರ್ಷದ ಮೊಹಮ್ಮದ್ ತಯ್ಯಬ್ ಎಂಬಾತನನ್ನು ಸಲ್ಮಾನ್ ಖಾನ್ ಮತ್ತು ಜೀಶನ್ ಸಿದ್ದೀಕಿಗೆ ಹಣಕ್ಕಾಗಿ ಬೆದರಿಕೆ ಹಾಕಿದ ಆರೋಪದಲ್ಲಿ ಬಂಧಿಸಲಾಗಿದೆ.
