ರಾಜ್ಯಗಳ ಅನಿಯಂತ್ರಿತ ಸಾಲ ದೇಶದ ಒಟ್ಟಾರೆ ಕ್ರೆಡಿಟ್ ರೇಟಿಂಗ್ ಮೇಲೆ ಪರಿಣಾಮ ಬೀರಲಿದ್ದು, ಕೇರಳದ ಆರ್ಥಿಕ ವ್ಯವಸ್ಥೆಯು ಹಲವಾರು ಸಮಸ್ಯೆಗಳಿಂದ ಕೂಡಿದೆ ಎಂದು ನಿರ್ಣಯಿಸಲಾಗಿದೆ ಎಂದು ಕೇಂದ್ರ ಸರ್ಕಾರವು ರಾಜ್ಯಗಳ ಸಾಲ ಸಾಮರ್ಥ್ಯದ ಮೇಲೆ ಮಿತಿಗಳನ್ನು ವಿಧಿಸುತ್ತಿರುವುದರ ಬಗ್ಗೆ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಸುಪ್ರೀಂ ಕೋರ್ಟ್‌ಗೆ ದಾಖಲೆ ಸಲ್ಲಿಸುವ ಮೊದಲು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಸಾರ್ವಜನಿಕ ಹಣಕಾಸು ನಿರ್ವಹಣೆಯು ರಾಷ್ಟ್ರೀಯ ಸಮಸ್ಯೆಯಾಗಿದೆ ಎಂದು ಸಲ್ಲಿಸಿದರು.
ರಾಜ್ಯವು ಅನುತ್ಪಾದಕ ವೆಚ್ಚಗಳು ಅಥವಾ ದುರ್ಬಲ ಉದ್ದೇಶಿತ ಸಬ್ಸಿಡಿಗಳಿಗಾಗಿ ಅನಿಯಂತ್ರಿತ ಸಾಲದಲ್ಲಿ ತೊಡಗಿರುವುದರಿಂದ ಖಾಸಗಿಯವರು ಕೂಡ ಮಾರುಕಟ್ಟೆಯಲ್ಲಿ ಸಾಲವನ್ನು ಪಡೆಯಲು ತೊಂದರೆ ಪಡೆಯಬೇಕಿದೆ ಎಂದು ವೆಂಕಟರಮಣಿ ತಿಳಿಸಿದರು.
“ರಾಜ್ಯಗಳ ಸಾಲವು ದೇಶದ ಕ್ರೆಡಿಟ್ ರೇಟಿಂಗ್ ಮೇಲೆ ಪರಿಣಾಮ ಬೀರುತ್ತವೆ. ಯಾವುದೇ ರಾಜ್ಯವು ಸಾಲಗಳನ್ನು ಡಿಫಾಲ್ಟ್ ಮಾಡಿದರೆ ವಿಖ್ಯಾತಿಯ ಸಮಸ್ಯೆಗಳು ಸೃಷ್ಟಿಯಾಗುತ್ತದೆ. ಇಡೀ ದೇಶದಲ್ಲಿ ಹಣಕಾಸಿನ ಸ್ಥಿರತೆಗೆ ಸಮಸ್ಯೆಯುಂಟಾಗುವ ದೊಡ್ಡ ಪರಿಣಾಮಗಳು ಉಂಟಾಗುತ್ತದೆ” ಎಂದು ತಮ್ಮ ದಾಖಲೆಯಲ್ಲಿ ವೆಂಕಟರಮಣಿ ತಿಳಿಸಿದ್ದಾರೆ.
ಅನಿಯಂತ್ರಿತ ಸಾಲವು ಖಾಸಗಿ ಉದ್ಯಮಗಳಲ್ಲಿ ಸಾಲದ ವೆಚ್ಚವನ್ನು ಹೆಚ್ಚುಗೊಳಿಸುತ್ತದೆ ಹಾಗೂ ಉತ್ಪಾದನೆ, ಸರಕು ಸಾಗಣೆ ಹಾಗೂ ಮಾರುಕಟ್ಟೆ ಸೇವೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ವೆಂಕಟರಮಣಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿನ ದಿಲ್ಲಿ ಚಲೋ ಮತ್ತು ಬಿಜೆಪಿಯ ಭಂಡತನ
“ಹೆಚ್ಚಿನ ಸಾಲದ ಪರಿಣಾಮವಾಗಿ ಹೆಚ್ಚುತ್ತಿರುವ ರಾಜ್ಯಗಳ ಸಾಲ ಸೇವೆಯ ಹೊಣೆಗಾರಿಕೆಗಳು ಅಭಿವೃದ್ಧಿಯ ನೆರವಿನ ಲಭ್ಯತೆಯನ್ನು ಕಡಿಮೆಗೊಳಿಸುತ್ತವೆ. ಜನರಲ್ಲಿ ಬಡತನ ಹೆಚ್ಚಾಗಿ ರಾಜ್ಯದ ಆದಾಯ ಕುಂಠಿತಗೊಳ್ಳುತ್ತದೆ. ಇದರೊಂದಿಗೆ ರಾಷ್ಟ್ರೀಯ ಆದಾಯಕ್ಕೂ ಹೊಡೆತ ಬೀಳುತ್ತದೆ. ಇವೆಲ್ಲವುಗಳು ಹಲವು ಸಾಮಾಜಿಕ ಹಾಗೂ ಇತರ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ” ಎಂದು ತಮ್ಮ ದಾಖಲೆಯಲ್ಲಿ ಎಜಿ ತಿಳಿಸಿದ್ದಾರೆ.
ಎಲ್ಲ ರಾಜ್ಯಗಳು ಕೇಂದ್ರ ಸರ್ಕಾರದ ಯಾವುದೇ ಮೂಲದಿಂದ ಸಾಲ ಪಡೆಯಲು ಅನುಮತಿ ಕೇಳಬೇಕು ಎಂದು ಎಜಿ ಉಲ್ಲೇಖಿಸಿದ್ದಾರೆ.
ಈ ರೀತಿಯ ಅನುಮತಿಯನ್ನು ಕೇಳುವಾಗ ಕೇಂದ್ರ ಸರ್ಕಾರವು ಸಂವಿಧಾನದ 293(4) ವಿಧಿಯನ್ವಯ ದೇಶದ ಸೂಕ್ಷ್ಮ ಆರ್ಥಿಕತೆಯ ಸ್ಥಿರತೆಯ ಎಲ್ಲ ಉದ್ದೇಶಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ರಾಜ್ಯಗಳು ಕೇಳುವ ಸಾಲದ ಅನುಮತಿಯ ಬಗ್ಗೆ ಸಾಲದ ಮಿತಿಯನ್ನು ನಿಗದಿಪಡಿಸುತ್ತದೆ ಎಂದು ಅಟಾರ್ನಿ ಜನರಲ್ ಹೇಳಿದರು.
ಹಣಕಾಸು ಆಯೋಗದ ಶಿಫಾರಸ್ಸುಗಳ ಮಾರ್ಗಸೂಚಿಯಂತೆ ರಾಜ್ಯಗಳಿಗೆ ತಾರತಮ್ಯರಹಿತ ಹಾಗೂ ಪಾರದರ್ಶಕವಾಗಿ ಸಾಲದ ಮಿತಿಯನ್ನು ನಿಗದಿಪಡಿಸಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ರಾಜ್ಯಗಳಿಗೆ ಹಣಕಾಸು ನೀಡುವ ಸಂದರ್ಭ ಕೇಂದ್ರ ಸರ್ಕಾರವು ತನ್ನ ಅಧಿಕಾರ ಬಳಕೆ ಮಾಡಿಕೊಂಡು ತಮಗೆ ನೀಡುವ ನಿವ್ವಳ ಸಾಲದ ಮೇಲೆ ನಿಯಂತ್ರಣ ಹೇರುತ್ತಿರುವ ಬಗ್ಗೆ ಕೇರಳ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೊಳಪಡಿಸಿದ ಉನ್ನತ ನ್ಯಾಯಾಲಯವು ಎರಡು ವಾರಗಳಲ್ಲಿ ಉತ್ತರ ನೀಡುವಂತೆ ಜ.12ರಂದು ಕೇಂದ್ರಕ್ಕೆ ಸೂಚಿಸಿತ್ತು.
ಸಂವಿಧಾನದ 131ನೇ ವಿಧಿಯಡಿ ಸಲ್ಲಿಸಲಾದ ಮೂಲ ಮೊಕದ್ದಮೆಯಲ್ಲಿ, ಕೇರಳ ಸರ್ಕಾರವು ಸಂವಿಧಾನದ ವಿವಿಧ ವಿಧಿಗಳ ಅಡಿಯಲ್ಲಿ ಸಾಲದ ಮಿತಿಗಳು ಅಥವಾ ಅಂತಹ ಸಾಲಗಳ ಪ್ರಮಾಣದ ತಮ್ಮ ಹಣಕಾಸುಗಳನ್ನು ನಿಯಂತ್ರಿಸಲು ರಾಜ್ಯಗಳಿಗೆ ಹಣಕಾಸಿನ ಸ್ವಾಯತ್ತತೆಯನ್ನು ನೀಡುತ್ತದೆ ಎಂದು ತನ್ನ ಅರ್ಜಿಯಲ್ಲಿ ಹೇಳಿದೆ.