ಮಧ್ಯ ದೆಹಲಿಯ ರಾಜಿಂದರ್ ನಗರದಲ್ಲಿನ ಕೋಚಿಂಗ್ ಸೆಂಟರ್‌ನ ನೆಲಮಾಳಿಗೆ ಜಲಾವೃತವಾಗಿ ಮೂವರು ಯುಪಿಎಸ್‌ಸಿ ಆಕಾಂಕ್ಷಿಗಳು ಸಾವನ್ನಪ್ಪಿದ ಪ್ರಕರಣದಲ್ಲಿ ಕೋಚಿಂಗ್ ಸೆಂಟರ್ ಐಎಎಸ್ ಸ್ಟಡಿ ಸರ್ಕಲ್‌ನ ಮಾಲೀಕ ಮತ್ತು ನಿರ್ವಾಹಕರನ್ನು ಭಾನುವಾರ ಬಂಧಿಸಲಾಗಿದೆ.
ಭಾನುವಾರ ಮುಂಜಾನೆ ನೀರು ತುಂಬಿದ ಕೋಚಿಂಗ್ ಸೆಂಟರ್‌ನ ನೆಲಮಾಳಿಗೆಯಿಂದ ಇಬ್ಬರು ವಿದ್ಯಾರ್ಥಿನಿಯರು ಮತ್ತು ಒಬ್ಬ ವಿದ್ಯಾರ್ಥಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಬಳಿಕ “ಮಾಲೀಕ ಅಭಿಷೇಕ್ ಗುಪ್ತಾ ಮತ್ತು ಕೋ-ಆರ್ಡಿನೇಟರ್ ದೇಶಪಾಲ್ ಸಿಂಗ್ ವಿರುದ್ಧ ನರಹತ್ಯೆ ಮತ್ತು ನಿರ್ಲಕ್ಷ್ಯದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ” ಎಂದು ಉಪ ಪೊಲೀಸ್ ಆಯುಕ್ತ ಎಂ ಹರ್ಷವರ್ಧನ್ ತಿಳಿಸಿದ್ದಾರೆ.
“ಪ್ರಸ್ತುತ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಕೊನೆಗೊಂಡಿದೆ. ನೆಲಮಾಳಿಗೆಯಿಂದ ಒಟ್ಟು ಮೂರು ಶವಗಳನ್ನು ಹೊರತೆಗೆಯಲಾಗಿದೆ. ಎಲ್ಲರ ಗುರುತು ಪತ್ತೆಯಾಗಿದೆ. ಘಟನೆಯ ಬಗ್ಗೆ ನಾವು ಕುಟುಂಬ ಸದಸ್ಯರಿಗೆ ತಿಳಿಸಿದ್ದೇವೆ” ಎಂದು ಡಿಸಿಪಿ ಹೇಳಿದರು.
ಇದನ್ನು ಓದಿದ್ದೀರಾ? ದೆಹಲಿ | ಕೋಚಿಂಗ್ ಸೆಂಟರ್ ಜಲಾವೃತ; ಮೂವರು ಯುಪಿಎಸ್‌ಸಿ ಆಕಾಂಕ್ಷಿಗಳ ಸಾವು
ಮೃತ ವಿದ್ಯಾರ್ಥಿಗಳನ್ನು ತಾನಿಯಾ ಸೋನಿ (25), ಶ್ರೇಯಾ ಯಾದವ್ (25) ಮತ್ತು ನೆವಿನ್ ಡಾಲ್ವಿನ್ (28) ಎಂದು ಗುರುತಿಸಲಾಗಿದೆ.
ಶ್ರೇಯಾ ಉತ್ತರ ಪ್ರದೇಶದ ಅಂಬೇಡ್ಕರ್ ನಗರದವರಾಗಿದ್ದರೆ, ತಾನಿಯಾ ಸೋನಿ ತೆಲಂಗಾಣದವರಾಗಿದ್ದಾರೆ. ನವೀನ್ ಡಾಲ್ವಿನ್ ಕೇರಳದ ಎರ್ನಾಕುಲಂನಿಂದ ಬಂದ ವಿದ್ಯಾರ್ಥಿಯಾಗಿದ್ದಾರೆ.
ಇನ್ನು ದೆಹಲಿಯ ಮೇಯರ್ ಶೆಲ್ಲಿ ಒಬೆರಾಯ್ ಅವರು ಕಟ್ಟಡಗಳ ನೆಲಮಾಳಿಗೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಗರದ ಎಲ್ಲಾ ಕೋಚಿಂಗ್ ಸೆಂಟರ್‌ಗಳ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದಾರೆ. ಅಂತಹ ಕೋಚಿಂಗ್ ಸೆಂಟರ್‌ಗಳು ಕಟ್ಟಡದ ನಿಯಮಗಳ ಉಲ್ಲಂಘನೆಯಾಗಿದೆ ಎಂದಿದ್ದಾರೆ.
ದೆಹಲಿಯ ಮಹಾನಗರ ಪಾಲಿಕೆಯ (ಎಂಸಿಡ) ಯಾವುದೇ ಅಧಿಕಾರಿಗಳು ದುರಂತಕ್ಕೆ ಹೊಣೆಗಾರರೇ ಎಂದು ತಿಳಿಯಲು ತಕ್ಷಣ ತನಿಖೆ ನಡೆಸಬೇಕು ಎಂದು ದೆಹಲಿ ಮೇಯರ್ ಹೇಳಿದರು.
#WATCH | On Delhi’s Old Rajinder Nagar Coaching Centre Incident, Mayor Shelly Oberoi says, “…It is sad that 3 children have died. I have written to the MCD Commissioner that strict action should be taken against all such coaching centres across Delhi which are under the… pic.twitter.com/aIwaAEVjFL
— ANI (@ANI) July 28, 2024