ದೆಹಲಿಯ ಶಹದಾರಾ ಪ್ರದೇಶದಲ್ಲಿ ಮನೆಯೊಂದರ ಛಾವಣಿಯ ಮೇಲೆ ಚೀಲವೊಂದರಲ್ಲಿ 6 ದಿನದ ಹೆಣ್ಣು ಮಗುವಿನ ಶವ ಪತ್ತೆಯಾಗಿದೆ. ಆಕೆಯ ತಾಯಿ ಶಿವಾನಿ (28) ವಿಚಾರಣೆಯ ಸಮಯದಲ್ಲಿ ತಾನೇ ಮಗುವನ್ನು ಎಸೆದಿರುವುದಾಗಿ ಒಪ್ಪಿಕೊಂಡ ಬಳಿಕ ಆಕೆಯನ್ನು ಬಂಧಿಸಲಾಗಿದೆ.
ಇದು ತನಗೆ ಹುಟ್ಟಿದ ನಾಲ್ಕನೇ ಹೆಣ್ಣು ಮಗುವಾಗಿದೆ. ಆದ್ದರಿಂದ ಈ ರೀತಿ ಮಾಡಿರುವುದಾಗಿ ತಿಳಿಸಿದ್ದಾಳೆ. ಈಗಾಗಲೇ ಈಕೆಗೆ ಜನಿಸಿದ ಎರಡು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
6 ವರ್ಷದ ಹೆಣ್ಣು ಮಗು ಕಾಣೆಯಾಗಿದೆ ಎಂದು ಬೆಳಗ್ಗೆ 5:30ರ ಸುಮಾರಿಗೆ ಪೊಲೀಸರಿಗೆ ಕರೆ ಬಂದಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಮಗುವಿನ ತಾಯಿ ಶಿವಾನಿ ಅವರನ್ನು ವಿಚಾರಿಸಿದ್ದಾರೆ. ಹಿಂದಿನ ರಾತ್ರಿಯೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಪೋಷಕರ ಮನೆಗೆ ಬಂದಿರುವುದಾಗಿ, ರಾತ್ರಿ 2-2:30 ಕ್ಕೆ ತನ್ನ ಮಗುವಿಗೆ ಹಾಲುಣಿಸಿ ಬಂದು ಮಲಗಿದೆ. ಆದರೆ ಎದ್ದು ನೋಡಿದಾಗ ಮಗು ಕಾಣೆಯಾಗಿದೆ ಎಂದು ತಾಯಿ ಶಿವಾನಿ ತಿಳಿಸಿದ್ದಾರೆ.
ಶೋಧ ಕಾರ್ಯಾಚರಣೆ ನಡೆಯುತ್ತಿರುವ ನಡುವೆಯೇ ತಾಯಿ ಶಿವಾನಿ ಹೊಲಿಗೆಗಳನ್ನು ತೆಗೆಯಲು ತಾನು ಆಸ್ಪತ್ರೆಗೆ ಹೋಗಬೇಕಾಗಿದೆ ಎಂದು ಹೇಳಿದ್ದಾರೆ. ಇದು ಪೊಲೀಸರಿಗೆ ಅನುಮಾನ ಹುಟ್ಟಿಸಿದೆ. ಆದರೆ ವೈದ್ಯಕೀಯ ಪರಿಸ್ಥಿತಿಯನ್ನು ಪರಿಗಣಿಸಿ ತಾಯಿಗೆ ಆಸ್ಪತ್ರೆಗೆ ಹೋಗಲು ಅವಕಾಶ ನೀಡಿದ್ದರು.
ಇದನ್ನು ಓದಿದ್ದೀರಾ? ಹೆಣ್ಣು ಮಗು ಬೇಡವೆಂದು 9 ದಿನದ ಶಿಶುವಿನ ಗಂಟಲು ಸೀಳಿ ಕೊಂದ ತಾಯಿ
ಜೊತೆಗೆ ನೆರೆಹೊರೆಯ ಸಿಸಿಟಿವಿಗಳನ್ನು ಪರಿಶೀಲಿಸಲು ಮತ್ತು ಹತ್ತಿರದ ಎಲ್ಲಾ ಮನೆಗಳು ಮತ್ತು ಪ್ರದೇಶಗಳನ್ನು ಪರಿಶೀಲಿಸಲು ತಂಡವನ್ನು ರಚಿಸಿದ್ದರು.
ಹುಡುಕಾಟದ ವೇಳೆ ಪಕ್ಕದ ಮನೆಯ ಮೇಲ್ಛಾವಣಿಯಲ್ಲಿ ಚೀಲವೊಂದು ಪತ್ತೆಯಾಗಿದ್ದು, ಅದರಲ್ಲಿ ಮಗು ಪತ್ತೆಯಾಗಿದೆ. ಕೂಡಲೇ ಆಸ್ಪತ್ರೆಗೆ ಮಗುವನ್ನು ಕರೆದೊಯ್ಯಲಾಗಿದ್ದು, ಮಗು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಇದಾದ ಬಳಿಕ ತಾಯಿ ಶಿವಾನಿಯ ವಿಚಾರಣೆ ನಡೆಸಲಾಗಿದ್ದು, ತನಗೆ ಹುಟ್ಟಿದ ನಾಲ್ಕನೇ ಹೆಣ್ಣು ಮಗುವಾದ ಕಾರಣ ತಾನೇ ಮಗುವನ್ನು ಉಸಿರುಗಟ್ಟಿಸಿ ಕೊಂದು ಎಸೆದಿರುವುದಾಗಿ ಹೇಳಿದ್ದಾಳೆ.
ತಾಯಿಯ ಹೇಳಿಕೆಯನ್ನು ಖಚಿತಪಡಿಸಿಕೊಳ್ಳಲು, ಸಾವಿನ ಕಾರಣವನ್ನು ತಿಳಿಯುವ ನಿಟ್ಟಿನಲ್ಲಿ ಮಗುವಿನ ಮರಣೋತ್ತರ ಪರೀಕ್ಷೆಯನ್ನು ಶನಿವಾರ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Delhi Police say, "The body of a 6-day-old girl child found in a bag on the roof of her neighbouring house in Shahdara area. Her mother, Shivani (28) was apprehended after she confessed during interrogation that she threw the child on the roof as it was her fourth girl child, two…
— ANI (@ANI) August 31, 2024
