ಫುಟ್‌ಪಾತ್‌ನಲ್ಲಿ ಮಲಗಿದ್ದ ಐದು ಜನರ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿ ಉತ್ಸವ್ ಶೇಖರ್ ಎಂಬಾತ ಚಲಾಯಿಸುತ್ತಿದ್ದ ಆಡಿ ಕಾರು ಹರಿದಿದ್ದು, ಐವರೂ ಸ್ಥಲದಲ್ಲೇ ಮೃತಪಟ್ಟಿರುವ ದುರ್ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ನೈಋತ್ಯ ಭಾಗದಲ್ಲಿರುವ ವಸಂತ್ ವಿಹಾರ್‌ನಲ್ಲಿ ಘಟನೆ ನಡೆದಿದೆ. ಆರೋಪಿ ಉತ್ಸವ್ ಶೇಖರ್ ಮದ್ಯಪಾನ ಮಾಡಿ, ಅಮಲಿನಲ್ಲಿ ಕಾರು ಚಲಾಯಿಸುತ್ತಿದ್ದ ಎಂದು ವರದಿಯಾಗಿದೆ.
ಕಾರು ಇದ್ದಕ್ಕಿದ್ದಂತೆ ಪಾದಚಾರಿ ಮಾರ್ಗದ ಮೇಲೆ ಹತ್ತಿದ್ದು, ಅಲ್ಲಿ ಮಲಗಿದ್ದವರ ಮೇಲೆ ಹರಿದಿದೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ.
ನೋಯ್ಡಾದಿಂದ ದ್ವಾರಕಾದಲ್ಲಿರುವ ತನ್ನ ಮನೆಗೆ ಹಿಂತಿರುಗುತ್ತಿದ್ದ ಶೇಖರ್, ಫುಟ್‌ಪಾತ್‌ನಲ್ಲಿ ಮಲಗಿದ್ದ ಐವರನ್ನು ಕೊಂದು ಸುಮಾರು 200 ಮೀಟರ್ ಮುಂದೆ ಹೋಗಿ, ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ವರದಿಯಾಗಿದೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ಬಂದಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಮೃತ ಸಂಸತ್ರಸ್ತರನ್ನು ಲಾಧಿ (40), ಅವರ ಮಗಳು ಬಿಮ್ಲಾ (8), ಅವರ ಪತಿ ಸಬಾಮಿ ಅಲಿಯಾಸ್ ಚಿರ್ಮಾ (45), ಹಾಗೂ ದಂಪತಿಗಳಾದ ರಾಮ್ ಚಂದರ್ (45) ಮತ್ತು ನಾರಾಯಣಿ (35) ಎಂದು ಗುತಿಸಲಾಗಿದೆ. ಈ ಐವರೂ ರಾಜಸ್ಥಾನ ಮೂಲದವರು ಎಂದು ತಿಳಿದುಬಂದಿದೆ.