ಆಸ್ತಿ, ನಿವಾಸಗಳ ಮೇಲೆ ಬುಲ್ಡೋಜರ್ ಹತ್ತಿಸುವುದಾಗಿ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಬಿಜೆಪಿಯ ನೂತನ ಶಾಸಕ ರವೀಂದರ್ ಸಿಂಗ್ ನೇಗಿ ಬೆದರಿಕೆ ಹಾಕಿರುವ ಘಟನೆ ದೆಹಲಿಯ ಪ್ರತಾಪ್‌ಗಂಜ್‌ನಲ್ಲಿ ನಡೆದಿದೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಈ ಹಿಂದೆ, ದೆಹಲಿ ಪಾಲಿಕೆಯ ಕೌನ್ಸಿಲರ್ ಆಗಿದ್ದ ನೇಗಿ ಮುಸ್ಲಿಮರ ವಿರುದ್ಧ ಪ್ರಚೋದನಾಕಾರಿ ದ್ವೇಷ ಭಾಷಣ ಮಾಡುವಲ್ಲಿ ಕುಖ್ಯಾತಿ ಹೊಂದಿದ್ದರು. ಇತ್ತೀಚೆಗೆ ನಡೆದ ದೆಹಲಿ ಚುನಾವಣೆಯಲ್ಲಿ ಅವರು ಪ್ರತಾಪ್‌ಗಂಜ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪ್ರತಾಪ್‌ಗಂಜ್‌ನ ನಿವಾಸಿ ಅಬ್ದುಲ್ ರಹೀಮ್ ಎಂಬವರ ಅಸ್ತಿಯ ಮೇಲೆ ಬುಲ್ಡೋಜರ್ ಹರಿಸುವುದಾಗಿ ಶಾಸಕ ನೇಗಿ ಬೆದರಿಕೆ ಹಾಕಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಜನಸಮೂಹದ ನಡುವೆ ಪೊಲೀಸರೊಂದಿಗೆ ನೇಗಿ ಇರುವುದು ಕಾಣಿಸುತ್ತದೆ. “ನೀವು ಭೂಮಿಯನ್ನು ಖಾಲಿ ಮಾಡಬೇಕು. ಇಲ್ಲದಿದ್ದರೆ ದೊಡ್ಡ ಕ್ರಮ ಕೈಗೊಳ್ಳಲಾಗುವುದು. ನಿಮ್ಮ ಜೀವನದುದ್ದಕ್ಕೂ ನೀವು ಒದ್ದಾಟ ನಡೆಸಬೇಕಾಗುತ್ತದೆ. ಸ್ಥಳೀಯ ಜನರನ್ನು ವ್ಯಸನಕಾರಿಯಾಗಿಸುವ ಚಾಳಿ ನಿಲ್ಲಿಸಬೇಕು” ಎಂದು ನೇಗಿ ಧಮ್ಕಿ ಹಾಕುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ತಮ್ಮ ಪ್ರದೇಶದಲ್ಲಿ ಯಾವುದೇ ಮಾದಕ ವಸ್ತು ಮಾರಾಟ ನಡೆಯುತ್ತಿಲ್ಲ ಎಂದು ಮುಸ್ಲಿಂ ವ್ಯಕ್ತಿ ಹೇಳಿದ್ದಾರೆ. ಆದಾಗ್ಯೂ, ದ್ವೇಷದ ಮಾತುಗಳನ್ನು ಮುಂದುವರೆಸಿರುವ ನೇಗಿ, “ಈ ಭೂಮಿ ಸರ್ಕಾರಕ್ಕೆ ಸೇರಿದೆ. ಅಬ್ದುಲ್ ಭಾಯ್, ನಾನು ಇಲ್ಲಿ ಜೆಸಿಬಿ ಓಡಿಸುತ್ತೇನೆ. ಇಲ್ಲಿರುವ ಎಲ್ಲವೂ ಒಂದು ನಿಮಿಷದಲ್ಲಿ ನಾಶವಾಗುತ್ತದೆ” ಎಂದು ಬೆದರಿಕೆ ಹಾಕಿದ್ದಾರೆ.
"अब्दुल भाई या तो 2 दिन अंदर अपना सामान समेट ले वरना JCB चलवा दूंगा, ऐसी कार्रवाई करूँगा पूरा जीवन लग जायेगा उस कार्रवाई में" पटपड़गंज से BJP विधायक रविंद्र नेगी
— Zakir Ali Tyagi (@ZakirAliTyagi) February 13, 2025
भाजपा का विधायक ख़ुद को क़ानून से ऊपर समझ रहा है, इसे अभी विधायक बने हुए एक हफ़्ता भी नही हुआ, अभी दिल्ली में CM भी… pic.twitter.com/q06zzr4Kb8
“ಬಿಜೆಪಿ ಶಾಸಕರು ತಮ್ಮನ್ನು ಕಾನೂನಿಗಿಂತ ಶ್ರೇಷ್ಠರೆಂದು ಪರಿಗಣಿಸುತ್ತಾರೆ. ಅವರು ಶಾಸಕರಾಗಿ ಒಂದು ವಾರವೂ ಆಗಿಲ್ಲ, ಇನ್ನೂ ದೆಹಲಿಯ ಮುಖ್ಯಮಂತ್ರಿಯ ಆಯ್ಕೆಯೂ ಆಗಿಲ್ಲ. ಆದರೆ ಬಿಜೆಪಿಯ ಗೂಂಡಾಗಿರಿ ಆರಂಭವಾಗಿದೆ. ಶಾಸಕರೇ ಈ ಕಾರ್ಮಿಕನ ಹೆಸರು ಅಬ್ದುಲ್ ಆಗಿದ್ದಕ್ಕಾಗಿ ಸಂತೋಷಪಡಬೇಡಿ. ಬಿಜೆಪಿ ಸರ್ಕಾರ ರಚನೆಯಾದರೆ, ಅವರು ಪ್ರತಿಯೊಬ್ಬ ಬಡ ಕಾರ್ಮಿಕರ ಗುಡಿಸಲಿನ ಮೇಲೆ ಬುಲ್ಡೋಜರ್ ಓಡಿಸುತ್ತಾರೆ” ಎಂದು ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: 2024ರಲ್ಲಿ ದ್ವೇಷ ಭಾಷಣಗಳ ಸಂಖ್ಯೆ 74.4% ಹೆಚ್ಚಳ; ಬಿಜೆಪಿಗರೇ ಪ್ರಮುಖ ಆರೋಪಿಗಳು!
“ಅದು ಹಾಗೆಯೇ ಆಗುತ್ತದೆ, ಅವರು ಅಮಿತ್, ಸುಮಿತ್, ಗುರುದೀಪ್ ಮತ್ತು ಅಬ್ದುಲ್ ಇನ್ನೂ ಯಾರೇ ಆಗಲಿ ಅವರನ್ನು ಬಿಡುವುದಿಲ್ಲ. ಅವರು ಬಡವರ ಮೇಲೆ ತಮ್ಮ ಗೂಂಡಾಗಿರಿಯನ್ನು ತೋರಿಸುತ್ತಾರೆ ಮತ್ತು ಪ್ರತಿಯೊಬ್ಬ ಬಡವರನ್ನು ಬುಲ್ಡೋಜರ್ ನಿಂದ ನಾಶಮಾಡುತ್ತಾರೆ!” ಎಂದು ಪತ್ರಕರ್ತ ಜಾಕಿರ್ ತಿಯಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಹೊಸದಾಗಿ ಆಯ್ಕೆಯಾದ ಶಾಸಕರೇ, ಭೂಮಿ ಸರ್ಕಾರಿ ಆಗಿದ್ದರೆ ಮೂಲಭೂತ ಅಂಶಗಳನ್ನು ಗ್ರಹಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ – ಮಿಸ್ಟರ್. ಸರ್ಕಾರ ನಿಮ್ಮ ವೈಯಕ್ತಿಕ ಆಸ್ತಿಯಲ್ಲ; ಅದು ಜನರಿಂದ, ಜನರಿಗಾಗಿ, ಜನರಿಗೇ ಇರುವಂತಹದ್ದು. ಆದರೆ ಖಂಡಿತವಾಗಿಯೂ ನಿಮ್ಮಂತಹ ರಾಜಕಾರಣಿಗಳು ದುರ್ಬಲರ ಮುಂದೆ ತಮ್ಮ ಅಧಿಕಾರದ ದರ್ಪ ತೋರಿಸಬಾರದು. ನಿಮಗೆ ನಿಜವಾಗಿಯೂ ಧೈರ್ಯವಿದ್ದರೆ, ನಿಜವಾದ ಶಕ್ತಿ ಹೇಗಿರುತ್ತದೆ ಎಂಬುದನ್ನು ಜನರು ನಿಮಗೆ ತೋರಿಸಲು ನಿರ್ಧರಿಸಿದಾಗ ಅವರನ್ನು ಎದುರಿಸಲು ಪ್ರಯತ್ನಿಸಬೇಕು” ಎಂದು NSUI ನಾಯಕ ಅನೀಶ್ ಕನ್ಸಾಲ್ ಹೇಳಿದ್ದಾರೆ.