ಈಶಾನ್ಯ ದೆಹಲಿಯ ದಯಾಲ್‌ಪುರದ ಮದರಸಾವೊಂದರಲ್ಲಿ ಓದುತ್ತಿದ್ದ ಐದು ವರ್ಷದ ಬಾಲಕ ನಿಗೂಢವಾಗಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಬಾಲಕನ ಕುತ್ತಿಗೆ, ಹೊಟ್ಟೆ ಮತ್ತು ತೊಡೆಸಂದು ಪ್ರದೇಶದಲ್ಲಿ ಗುಳ್ಳೆಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಶುಕ್ರವಾರ ರಾತ್ರಿ 9.52ಕ್ಕೆ ಬ್ರಿಜ್‌ಪುರಿ ಮದರಸಾದಿಂದ ಬಾಲಕನ ಸಾವಿನ ಬಗ್ಗೆ ಕರೆ ಬಂದಿದೆ.
“ಶುಕ್ರವಾರ ಸಂಜೆ 6.30ಕ್ಕೆ ಬಾಲಕನ ತಾಯಿಗೆ ತನ್ನ ಮಗ ಅಸ್ವಸ್ಥನಾಗಿದ್ದಾನೆ ಎಂದು ತಿಳಿಸಲಾಗಿದೆ. ಆಕೆ ಆತನನ್ನು ಬ್ರಿಜ್‌ಪುರಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಆದರೆ ಅಲ್ಲಿ ವೈದ್ಯರು ಬಾಲಕ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತ ಬಾಲಕನ ತಾಯಿ ತನ್ನ ಮಗನ ಶವದೊಂದಿಗೆ ಮದರಸಾಕ್ಕೆ ಮರಳಿದ್ದು ಮೃತದೇಹವನ್ನು ರಸ್ತೆಯಲ್ಲೇ ಇಟ್ಟು ಮದರಸಾ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು: ಮದರಸಾಕ್ಕೆ ಹೋಗಿ ಹೆಣ್ಣುಮಗಳಿಗೆ ಥಳಿಸಿದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ; ಸಂತ್ರಸ್ತ ಬಾಲಕಿ ಹೇಳಿಕೆ
ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಜಿಟಿಬಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಸೂಕ್ತ ತನಿಖೆ ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಹಾಜಿ ದಿನ್ ಮೊಹಮ್ಮದ್ ಅವರು ಮದ್ರಸಾದ ಪ್ರಾಂಶುಪಾಲರಾಗಿದ್ದು, ಸುಮಾರು 250 ಹುಡುಗರು ಇಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಈ ಪೈಕಿ ಸುಮಾರು 150 ಮಂದಿ ದೆಹಲಿಯಿಂದ ಹೊರಗಿನವರಾಗಿದ್ದಾರೆ. ಮುಖ್ಯವಾಗಿ ಅಧಿಕ ಮಂದಿ ಉತ್ತರ ಪ್ರದೇಶವರಾಗಿದ್ದಾರೆ ಎಂದು ವರದಿಯಾಗಿದೆ.
ಮರಣೋತ್ತರ ಪರೀಕ್ಷೆಯ ನಂತರ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
STORY | Boy dies under mysterious circumstances at Delhi madrasa
— Press Trust of India (@PTI_News) August 24, 2024
READ: https://t.co/IKdxbXErO3 pic.twitter.com/UoyjG1wPgL