ರಾಷ್ಟ್ರ ರಾಜಧಾನಿ ದೆಹಲಿಯ ಕೇಶೋಪುರ್ ಮಂಡಿ ಬಳಿಯ ದೆಹಲಿ ಜಲ ಬೋರ್ಡ್ ಘಟಕದೊಳಗಿನ 40 ಅಡಿ ಆಳದ ಬೋರ್‌ವೆಲ್‌ಗೆ (ಕೊಳವೆ ಬಾವಿ) ಮಗುವೊಂದು ಬಿದ್ದಿದ್ದು, ಸ್ಥಳಕ್ಕೆ ಎನ್‌ಡಿಆರ್‌ಎಫ್ ತಂಡ ಧಾವಿಸಿ ರಕ್ಷಣಾ ಕಾರ್ಯಾಚರಣೆಯ ಸಿದ್ಧತೆ ನಡೆಸುತ್ತಿದೆ.
ಎನ್‌ಡಿಆರ್‌ಎಫ್‌ನಿಂದ ಇನ್‌ಸ್ಪೆಕ್ಟರ್ ವೀರ್ ಪ್ರತಾಪ್ ಸಿಂಗ್ ಅವರೊಂದಿಗೆ ಎನ್‌ಡಿಆರ್‌ಎಫ್ ತಂಡವು ಸ್ಥಳಕ್ಕೆ ಆಗಮಿಸಿದ್ದು, ಮಗು ಬಿದ್ದಿರುವ ಬೋರ್‌ವೆಲ್‌ಗೆ ಸಮವಾಗಿ ಹೊಸ ಬೋರ್‌ವೆಲ್ ಕೊರೆದು ರಕ್ಷಣಾ ಕಾರ್ಯಾಚರಣೆಯನ್ನು ಶೀಘ್ರ ಆರಂಭ ಮಾಡಲಿದೆ ಎಂದು ಎಎನ್‌ಐ ವರದಿ ಮಾಡಿದೆ.
#WATCH | Delhi: A child fell into a 40-foot-deep borewell inside the Delhi Jal Board plant near Keshopur Mandi. The NDRF team has reached the site along with Inspector-in-charge Veer Pratap Singh from NDRF. It will soon start rescue operations by digging a new borewell parallel… pic.twitter.com/CbD4GAKzR3
— ANI (@ANI) March 10, 2024
ಸ್ಥಳದಲ್ಲಿ ದೆಹಲಿ ಅಗ್ನಿ ಶಾಮಕದಳ (ಡಿಎಫ್‌ಎಸ್), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ದೆಹಲಿ ಪೊಲೀಸರು ಆಗಮಿಸಿದ್ದು, ರಕ್ಷಣಾ ಕಾರ್ಯ ಸಾಗುತ್ತಿದೆ. ಈ ಬಗ್ಗೆ ಎಎನ್‌ಐಗೆ ಪ್ರತಿಕ್ರಿಯಿಸಿದ “ನಾವು ಈ ಬೋರ್‌ವೆಲ್‌ಗೆ ಸಮವಾಗಿ ಹೊಸ ಬೋರ್‌ವೆಲ್ ಕೊರೆಯುವ ಮೂಲಕ ಮಗುವಿನ ರಕ್ಷಣಾ ಕಾರ್ಯವನ್ನು ನಡೆಸುತ್ತೇವೆ, ಶೀಘ್ರವೇ ಈ ಕಾರ್ಯ ಆರಂಭವಾಗಲಿದೆ. ಆದರೆ ಇದು ದೀರ್ಘವಾದ ರಕ್ಷಣಾ ಕಾರ್ಯ” ಎಂದು ಮಾಹಿತಿ ನೀಡಿದ್ದಾರೆ.
#WATCH | Delhi: Visuals from the site where a child fell into a 40-foot-deep borewell inside the Delhi Jal Board plant near Keshopur Mandi. pic.twitter.com/f1LUrEi3ti
— ANI (@ANI) March 10, 2024
ಕಳೆದ ವರ್ಷ ಜುಲೈನಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಬಿಹಾರದಲ್ಲಿ 40 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿತ್ತು. ಸತತ ಐದು ಗಂಟೆಗಳ ಕಾರ್ಯಾಚರಣೆ ಬಳಿಕ ಮಗುವನ್ನು ರಕ್ಷಿಸಲಾಗಿತ್ತು. ಇನ್ನು ಜೂನ್‌ನಲ್ಲಿ ಇದೇ ರೀತಿಯ ಘಟನೆ ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ ನಡೆದಿದ್ದು, 300 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದ ಎರಡೂವರೆ ವರ್ಷದ ಪುಟ್ಟ ಮಗು ತನ್ನ ಪ್ರಾಣ ಕಳೆದುಕೊಂಡಿತ್ತು.