ಶುಕ್ರವಾರದ ಪ್ರಾರ್ಥನೆಯ ಹಿನ್ನೆಲೆಯಲ್ಲಿ ಇಂದು ದೆಹಲಿಯ ಮಸೀದಿಯೊಂದರ ಬಳಿಯಲ್ಲಿರುವ ರಸ್ತೆಯಲ್ಲಿ ನಮಾಝ್ ಮಾಡುತ್ತಿದ್ದವರಿಗೆ ಪೊಲೀಸ್ ಅಧಿಕಾರಿಯೋರ್ವ ಬೂಟು ಕಾಲಿನಿಂದ ಒದ್ದ ಘಟನೆ ನಡೆದಿದೆ.
ಘಟನೆಯ ದೃಶ್ಯವನ್ನು ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ. ಘಟನೆಯು ದೆಹಲಿಯ ಇಂದರ್ಲೋಕ್ ಪ್ರದೇಶದಲ್ಲಿರುವ ಮಸೀದಿ ಸಮೀಪ ನಡೆದಿರುವುದಾಗಿ ವರದಿಯಾಗಿದೆ.
ಪೊಲೀಸ್ ಅಧಿಕಾರಿ ಸ್ಥಳಕ್ಕೆ ಬಂದಾಗ ಜನರ ಗುಂಪು ರಸ್ತೆಯಲ್ಲಿ ಬಟ್ಟೆ ಹಾಕಿ, ನಮಾಝ್ ಮಾಡುತ್ತಿದ್ದರು. ಈ ವೇಳೆ ಅವರನ್ನು ಎದ್ದೇಳಿಸಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸ್ ಅಧಿಕಾರಿ ಬೂಟು ಕಾಲಿನಿಂದ ಒದ್ದಿದ್ದಾರೆ. ಇದಾದ ಕೂಡಲೇ ಅಲ್ಲಿದ್ದ ಮಂದಿ ಆಕ್ಷೇಪ ಎತ್ತಿದ್ದು, ಕಾನ್‌ಸ್ಟೆಬಲ್ ಮತ್ತು ಗುಂಪಿನ ನಡುವೆ ತೀವ್ರ ಮಾತಿನ ಚಕಮಕಿ ಕೂಡ ನಡೆದಿದೆ.
Action must be taken against this policeman who kicked Muslim worshippers during Friday prayer in Delhi.@DelhiPolice @CPDelhi pic.twitter.com/AO3BSUx3ph
— Md Asif Khan (@imMAK02) March 8, 2024
ಘಟನೆಯ ವಿಡಿಯೋ ವೈರಲಾಗುತ್ತಿದ್ದಂತೆಯೇ ಎಚ್ಚೆತ್ತಿರುವ ಪೊಲೀಸ್ ಅಧಿಕಾರಿಗಳು, ವಿಚಾರಣೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
A Delhi police officer was seen kicking people who were offering namaz on the road in an incident reportedly from Inderlok, Delhi.
Police initiated an enquiry into the matter. pic.twitter.com/ZIUgWf6nfT
— Amit Pandey (@yuva_journalist) March 8, 2024
ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಉತ್ತರ ವಿಭಾಗದ ಡಿಸಿಪಿ, “ಘಟನೆಯ ಬಗ್ಗೆ ಮಾಹಿತಿ ಸಿಕ್ಕಿದೆ. ಇಂದರ್ಲೋಕ್ ಪ್ರದೇಶದ ಬಳಿ ಈ ಘಟನೆ ನಡೆದಿದೆ. ಈ ಕುರಿತು ತನಿಖೆ ಆರಂಭಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
This is not a policeman doing his duty. This is a hateful zombie in uniform who’s got the power of the law to insult and punish a human just because his way of worshiping is different from his.
This is the India that BJP has built in last one decade. India is beyond redemption. pic.twitter.com/D4MNp3PrzQ
— Arfa Khanum Sherwani (@khanumarfa) March 8, 2024
ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದ್ದು, ರಸ್ತೆಯಲ್ಲಿ ಗಂಟೆಗಳಿಗಿಂತಲೂ ಹೆಚ್ಚಾಗಿ ಡಿಜೆ ಹಾಕಿ ಕುಣಿಯುವವರ ಬಗ್ಗೆ ನೋಡಿಯೂ ಕೂಡ ಕ್ರಮ ಕೈಗೊಳ್ಳಲು ಹಿಂಜರಿಯುವ ಪೊಲೀಸರು, ಮುಸ್ಲಿಮರ ಶುಕ್ರವಾರದ ಪ್ರಾರ್ಥನೆಯ ಕೆಲವು ನಿಮಿಷಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲವೇ? ಇದು ದೇಶದಲ್ಲಿ ಮುಸ್ಲಿಮರ ವಿರುದ್ಧ ಹರಡಲಾಗುತ್ತಿರುವ ದ್ವೇಷದ ಇನ್ನೊಂದು ರೂಪವಷ್ಟೇ. ಇದು ಖಂಡನೀಯ” ಎಂದು ಪೋಸ್ಟ್ ಹಾಕುತ್ತಿದ್ದಾರೆ.
6,00,000 mosques in India and Namazi still chose to block the road and offer Namaz.
Islamists- Leftists are getting triggered over the cop. Nothing wrong here. pic.twitter.com/WxInh5i1j6
— BALA (@erbmjha) March 8, 2024
ಈ ನಡುವೆ ಸಂಘಪರಿವಾರ ಹಾಗೂ ಬಲಪಂಥೀಯ ಬೆಂಬಲಿಗರು, ರಸ್ತೆಯಲ್ಲಿ ನಮಾಝ್ ಮಾಡಲು ನಿಮಗೆ ಅವಕಾಶ ಕೊಟ್ಟವರಾರು. ಪೊಲೀಸ್ ಏನು ಮಾಡಬೇಕೋ ಅದನ್ನೇ ಮಾಡಿದ್ದಾನೆ ಎಂದು ಹೇಳುವ ಮೂಲಕ ಪೊಲೀಸ್ ಸಿಬ್ಬಂದಿಯ ಪರವಾಗಿ ಪೋಸ್ಟ್ ಹಾಕುತ್ತಿದ್ದಾರೆ.
