ದೆಹಲಿಯ ಇಂದರ್ಲೋಕ್ ಪ್ರದೇಶದ ಬಳಿಯಲ್ಲಿರುವ ಮಸೀದಿ ಸಮೀಪ ರಸ್ತೆಯಲ್ಲಿ ನಮಾಝ್ ಮಾಡುತ್ತಿದ್ದವರಿಗೆ ಕಾಲಿನಿಂದ ಒದ್ದ, ತಪ್ಪಿತಸ್ಥ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಿರುವುದಾಗಿ ದೆಹಲಿಯ ಉತ್ತರ ವಿಭಾಗದ ಡಿಸಿಪಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.
#WATCH | DCP North Manoj Kumar Meena says, “Action has been taken against the police officials seen in the viral video. The police post in charge has been suspended. Disciplinary action is being taken. The situation has been normalized…Traffic has been opened…” https://t.co/SKU1IcOXF7 pic.twitter.com/isnXS0Whl9
— ANI (@ANI) March 8, 2024
ಘಟನೆಯ ವಿಡಿಯೋ ವೈರಲಾದ ಬೆನ್ನಲ್ಲೇ ಆಕ್ರೋಶಿತ ಗುಂಪು, ಇಂದರ್ಲೋಕ್ ಪ್ರದೇಶದಲ್ಲಿರುವ ಮೆಟ್ರೋ ನಿಲ್ದಾಣದ ಸಮೀಪ ಜನರು ಸೇರಿ ಪ್ರತಿಭಟಿಸಿದರು. ಘಟನೆಯ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸ್ಥಳಕ್ಕೆ ಬಂದ ಹಿರಿಯ ಪೊಲೀಸ್ ಅಧಿಕಾರಿಗಳು, ಆಕ್ರೋಶಿತ ಗುಂಪಿನೊಂದಿಗೆ ಮಾತುಕತೆ ನಡೆಸಿ, ಸ್ಥಳದಿಂದ ತೆರಳುವಂತೆ ವಿನಂತಿಸಿದ ಬಳಿಕ ಎಲ್ಲರೂ ಸ್ಥಳದಿಂದ ತೆರಳಿದ್ದಾರೆ. ಪರಿಸ್ಥಿತಿ ಶಾಂತಗೊಂಡಿದೆ.
सस्पेंड करके पल्ला नहीं झाड़ा जा सकता
वर्दी की आड़ में इस तरह की मानसिकता स्वीकार्य नहीं है
पुलिस वाले के ख़िलाफ़ संबंधित धाराओं में मुक़द्दमा दर्ज किया जाना चाहिये#delhipolice #indralok pic.twitter.com/Qt43wOcjqn
— Mobin LLB (@immobink) March 8, 2024
ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿಯ ಉತ್ತರ ವಿಭಾಗದ ಡಿಸಿಪಿ ಮನೋಜ್ ಕುಮಾರ್ ಮೀನಾ, “ಘಟನೆಯ ವಿಡಿಯೋ ದೊರಕಿದೆ. ಈ ಮಾಹಿತಿಯ ಆಧಾರದ ಮೇಲೆ ತಪ್ಪಿತಸ್ಥ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮನೋಜ್ ಕುಮಾರ್ ತೋಮರ್ ಅವರನ್ನು ಕೂಡಲೇ ಅಮಾನತು ಮಾಡಿದ್ದೇವೆ. ಈ ಕುರಿತು ತನಿಖೆ ಆರಂಭಿಸಲಾಗಿದ್ದು,ಶಿಸ್ತು ಕ್ರಮಕ್ಕೂ ಸೂಚಿಸಲಾಗಿದೆ” ಎಂದು ತಿಳಿಸಿದ್ದಾರೆ.
VIDEO | Police deployed in Delhi’s Inderlok area after video of a policeman kicking a few people while they were offering namaz on the road goes viral.
STORY | Police probing cop shown in video ‘kicking’ namazis in Delhi’s Inderlok
READ: https://t.co/7yUjAPYiJ0 pic.twitter.com/LYKrwZlFB5
— Press Trust of India (@PTI_News) March 8, 2024
ಏನಿದು ಘಟನೆ?
ಶುಕ್ರವಾರದ ಪ್ರಾರ್ಥನೆಯ ಹಿನ್ನೆಲೆಯಲ್ಲಿ ಇಂದು ದೆಹಲಿಯ ಮಸೀದಿಯೊಂದರ ಬಳಿಯಲ್ಲಿರುವ ರಸ್ತೆಯಲ್ಲಿ ನಮಾಝ್ ಮಾಡುತ್ತಿದ್ದವರಿಗೆ ಪೊಲೀಸ್ ಅಧಿಕಾರಿಯೋರ್ವ ಬೂಟು ಕಾಲಿನಿಂದ ಒದ್ದ ಘಟನೆ ನಡೆದಿದೆ.
ಘಟನೆಯ ದೃಶ್ಯವನ್ನು ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
किसी तरह से पूर्वांचल मोर्चा अध्यक्ष श्री नीरज तिवारी जी @iamneerajbjp को इंदरलोक की उन्मादी भीड़ से बचा कर निकाला गया।#delhipolice #roadjam #namaz @BJP4Delhi @epanchjanya @AmitShah @iRaviTiwari @PMOIndia @BJP4India @JPNadda @blsanthosh @RadhamohanBJP @Radhamohandas pic.twitter.com/Hsbft1GkgA
— Rakesh Kumar Sisodia(modi ka parivaar) (@Sisodiarkiaf) March 8, 2024
ಪೊಲೀಸ್ ಅಧಿಕಾರಿ ಸ್ಥಳಕ್ಕೆ ಬಂದಾಗ ಜನರ ಗುಂಪು ರಸ್ತೆಯಲ್ಲಿ ಬಟ್ಟೆ ಹಾಕಿ, ನಮಾಝ್ ಮಾಡುತ್ತಿದ್ದರು. ಈ ವೇಳೆ ಅವರನ್ನು ಎದ್ದೇಳಿಸಲು ಯತ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ದೆಹಲಿ | ರಸ್ತೆಯಲ್ಲಿ ನಮಾಝ್ ಮಾಡುತ್ತಿದ್ದವರಿಗೆ ಬೂಟು ಕಾಲಿನಿಂದ ಒದ್ದ ಪೊಲೀಸ್; ವಿಡಿಯೋ ವೈರಲ್
ಈ ವೇಳೆ ಪೊಲೀಸ್ ಅಧಿಕಾರಿ ಬೂಟು ಕಾಲಿನಿಂದ ಒದ್ದಿದ್ದಾರೆ. ಇದಾದ ಕೂಡಲೇ ಅಲ್ಲಿದ್ದ ಮಂದಿ ಆಕ್ಷೇಪ ಎತ್ತಿದ್ದು, ಕಾನ್‌ಸ್ಟೆಬಲ್ ಮತ್ತು ಗುಂಪಿನ ನಡುವೆ ತೀವ್ರ ಮಾತಿನ ಚಕಮಕಿ ಕೂಡ ನಡೆದಿದೆ.
ये बिल्कुल शर्मनाक है। पुलिस के भीतर भी राजनीति का यह ज़हर पहुँच गया है। केवल कार्रवाई काफ़ी नहीं है, पुलिस के भीतर सांप्रदायिकता के किसी भी रूप को मिटाने का प्रयास होना चाहिए। हम कहाँ आ गए हैं । इस नफ़रत को राज्य और मीडिया का संरक्षण मिल चुका है। इसलिए इस नफ़रत से लड़ना असंभव… https://t.co/yY6toAqNXH
— ravish kumar (@ravishndtv) March 8, 2024
ಘಟನೆಗೆ ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಆಕ್ರೋಶ
ಈ ಘಟನೆಯ ಬಗ್ಗೆ ವಿಡಿಯೋ ಹಂಚಿಕೊಂಡು ಟ್ವೀಟ್ ಮಾಡಿರುವ ಹಿರಿಯ ಪತ್ರಕರ್ತ ರವೀಶ್ ಕುಮಾರ್, “ಇದು ಸಂಪೂರ್ಣ ನಾಚಿಕೆಗೇಡಿನ ಸಂಗತಿ. ದ್ವೇಷದ ರಾಜಕಾರಣದ ವಿಷ ಪೊಲೀಸರನ್ನೂ ತಲುಪಿದೆ. ಕೇವಲ ಕ್ರಮವಷ್ಟೇ ಸಾಲದು. ಪೊಲೀಸರೊಳಗಿರುವ ಯಾವುದೇ ರೀತಿಯ ಕೋಮುವಾದವನ್ನು ಹೋಗಲಾಡಿಸುವ ಪ್ರಯತ್ನಗಳಾಗಬೇಕು. ನಾವು ಎಲ್ಲಿಗೆ ಬಂದು ಮುಟ್ಟಿದ್ದೇವೆ. ಈ ದ್ವೇಷಕ್ಕೆ ರಾಜ್ಯ ಮತ್ತು ಮಾಧ್ಯಮಗಳ ರಕ್ಷಣೆ ಸಿಕ್ಕಿದೆ. ಆದ್ದರಿಂದ ಈ ದ್ವೇಷದ ವಿರುದ್ಧ ಹೋರಾಡುವುದು ಅಸಾಧ್ಯವಾಗುತ್ತಿದೆ. ದೆಹಲಿ ಪೊಲೀಸರು ಈ ಹಿಂದೆ ಈ ರೀತಿಯಲ್ಲಿ ಇರಲಿಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.
