ಹನ್ನೆರಡು ವರ್ಷದ ಬಾಲಕಿಯೊಬ್ಬಳ ಮೇಲೆ ಮೂವರು ಅಪ್ರಾಪ್ತರು ಸೇರಿ ನಾಲ್ವರು ಸಾಮೂಹಿಕ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ.
ಅತ್ಯಾಚಾರಕ್ಕೆ ಸಹಕರಿಸಿದ ಓರ್ವ ಮಹಿಳೆಯು ಸೇರಿ ಎಲ್ಲ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಅಪ್ರಾಪ್ತರಲ್ಲಿ 12,14 ಹಾಗೂ 15 ವರ್ಷದವರಾಗಿದ್ದಾರೆ.
ಹಳೆಯ ದೆಹಲಿಯ ಸಾದಾರ್ ಬಜಾರ್‌ನಲ್ಲಿ ಟೀ ಅಂಗಡಿ ಇಟ್ಟುಕೊಂಡಿರುವ ಪ್ರಮುಖ ಆರೋಪಿಯೊಬ್ಬ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬಳಿಗೆ ಹಣದ ಆಮಿಷವೊಡ್ಡಿ ಜನವರಿ ಒಂದರಂದು ಸಂತ್ರಸ್ತ 12 ವರ್ಷದ ಬಾಲಕಿಯನ್ನು ಕರೆದುಕೊಂಡು ಬರುವಂತೆ ತಿಳಿಸಿದ್ದಾನೆ.
ಆರೋಪಿಗಳು ದುಷ್ಕೃತ್ಯವೆಸಗುವ ಸಲುವಾಗಿಯೆ ಪ್ಲಾಸ್ಟಿಕ್ ಟಾರ್ಪಲ್‌ನಿಂದ ತಾತ್ಕಾಲಿಕ ಗುಡಿಸಲು ನಿರ್ಮಿಸಿಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಶಾಲಾ ಸಿಬ್ಬಂದಿಗೆ ‘ನಡತೆ ಸರ್ಟಿಫಿಕೇಟ್ʼ ಮಕ್ಕಳೇ ಕೊಡುವಂತಾಗಬೇಕು
ಪಕ್ಕದ ಕಟ್ಟಡದಲ್ಲಿ ಪ್ಲಾಸ್ಟಿಕ್ ಚಿಂದಿ ಆಯುವಂತೆ ಬಾಲಕಿಯನ್ನು ನಾಲ್ವರು ಆರೋಪಿಗಳಿದ್ದ ಗುಡಿಸಲಿಗೆ ಕರೆದುಕೊಂಡು ಬಂದಿದ್ದಾಳೆ. ಬಾಲಕಿ ಬಂದ ನಂತರ ನಾಲ್ವರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ನಂತರದಲ್ಲಿ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.
ಬಾಲಕಿ ಮನೆಗೆ ಬಂದ ಎರಡು ದಿನಗಳ ನಂತರ ಡಿ.5 ರಂದು ಪೋಷಕರಿಗೆ ಅತ್ಯಾಚಾರವಾಗಿರುವ ವಿಷಯ ಗೊತ್ತಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಛತ್ತೀಸ್‌ಗಢ ಮೂಲದ ಟೀ ಅಂಗಡಿ ಮಾಲೀಕ, ಉತ್ತರ ಪ್ರದೇಶ, ಮಧ್ಯ ಪ್ರದೇಶದ ಅಪ್ರಾಪ್ತ ಬಾಲಕರು ಹಾಗೂ ಒರ್ವ ಮಹಿಳೆಯನ್ನು ಬಂಧಿಸಿದ್ದಾರೆ.