ತನಗೆ ಹೆಣ್ಣು ಮಗು ಬೇಡವೆಂದು ತಾಯಿಯೊಬ್ಬಳು 9 ದಿನದ ಶಿಶುವಿನ ಗಂಟಲು ಸೀಳಿ ಕೊಂದ ಘಟನೆ ಹೊರ ದೆಹಲಿಯ ಮುಂಡ್ಕಾ ಪ್ರದೇಶದ ನಡೆದಿದೆ.
22 ವರ್ಷದ ಮಹಿಳೆಯು ತನಗೆ ಜನಿಸಿ ಮಗು ಹೆಣ್ಣಾದ ಕಾರಣ ತನ್ನ ಮನೆಯಲ್ಲಿ ಮಗುವಿನ ಕತ್ತನ್ನು ಸೀಳಿ ಕೊಂದಿದ್ದಾಳೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಗುರುವಾರ ಗೋವಿಂದ ಎಂಬ ವ್ಯಕ್ತಿ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ತನ್ನ ಪತ್ನಿ ತಮ್ಮ ಮಗಳ ಕತ್ತು ಕೊಯ್ದಿದ್ದಾಳೆ ಎಂದು ದೂರು ನೀಡಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ಮುಂಡ್ಕಾದ ಟಿಕ್ರಿಯಲ್ಲಿರುವ ಬಾಬಾ ಹರಿದಾಸ್ ಕಾಲೋನಿಯಲ್ಲಿರುವ ಈ ದಂಪತಿಯ ಮನೆಗೆ ತಂಡವನ್ನು ಕಳುಹಿಸಲಾಗಿದೆ. ತಂಡವು ಎರಡನೇ ಮಹಡಿಯಲ್ಲಿರುವ ಕೋಣೆಯಲ್ಲಿ ಶಿಶುವು ಶವವಾಗಿ ಪತ್ತೆಯಾಗಿದೆ. ಅಲ್ಲಿಯೇ ತಾಯಿಯು ಕೂಡಾ ಇದ್ದಳು ಎಂದು ಉಪ ಪೊಲೀಸ್ ಆಯುಕ್ತ (ಹೊರ) ಜಿಮ್ಮಿ ಚಿರಂ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಚಾಮರಾಜನಗರ | ಮಹಿಳೆಯೊಬ್ಬರು ಬಿಟ್ಟುಹೋಗಿದ್ದ ಹೆಣ್ಣು ಮಗುವಿನ ಗುರುತು ಪತ್ತೆ
“ನಿರಂತರ ವಿಚಾರಣೆಯ ನಂತರ ಮಹಿಳೆ ತನಗೆ ಹೆಣ್ಣು ಮಗು ಇಷ್ಟವಿರಲಿಲ್ಲ. ಅದಕ್ಕಾಗಿಯೇ ಮಗಳನ್ನು ಕೊಂಡಿದ್ದೇನೆ ಎಂದು ಬಹಿರಂಗಪಡಿಸಿದಳು” ಎಂದು ಚಿರಂ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪೊಲೀಸರು ಅಪರಾಧಕ್ಕೆ ಬಳಸಿದ ಚಾಕುವನ್ನು ವಶಕ್ಕೆ ಪಡೆದಿದ್ದಾರೆ. ಬಿಎನ್‌ಎಸ್‌ನ ಸೆಕ್ಷನ್ 103 (1) ಅಡಿಯಲ್ಲಿ ಮಹಿಳೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಆಕೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಮಹಿಳೆಯ ಪತಿ ಹರಿಯಾಣದ ಬಹದ್ದೂರ್‌ಗಢದ ಶೂ ಫ್ಯಾಕ್ಟರಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ. ದಂಪತಿಗೆ ಸುಮಾರು ಎರಡು ವರ್ಷದ ಮಗನಿದ್ದಾನೆ ಎಂದು ವರದಿಯಾಗಿದೆ.