ಕೇಂದ್ರ ಆರೋಗ್ಯ ಸಚಿವಾಲಯವು ತನ್ನ ಎಲ್ಲಾ ಸಂಸ್ಥೆಗಳಿಗೆ ಅವರು ಇರುವ ರಾಜ್ಯದ ಸಂಪ್ರದಾಯಗಳ ಆಧಾರದ ಮೇಲೆ ಘಟಿಕೋತ್ಸವ ಸಮಾರಂಭಗಳಿಗೆ ಸೂಕ್ತವಾದ ಭಾರತೀಯ ವಸ್ತ್ರ ಸಂಹಿತೆ ಅನ್ನು ವಿನ್ಯಾಸಗೊಳಿಸಲು ಸೂಚಿಸಿದೆ.
ಘಟಿಕೋತ್ಸವ ದಿನದಂದು ಕಪ್ಪು ಕೋಟ್ ಮತ್ತು ಟೋಪಿ ಧರಿಸುವ ಪ್ರಸ್ತುತ ಅಭ್ಯಾಸವು ‘ವಸಾಹತುಶಾಹಿ ಪರಂಪರೆ’ ಆಗಿದ್ದು ಅದನ್ನು ಬದಲಾಯಿಸಬೇಕಾಗಿದೆ. ಈ ಉಡುಪು ಯುರೋಪ್‌ನಲ್ಲಿ ಮಧ್ಯಯುಗದಲ್ಲಿ ಹುಟ್ಟಿಕೊಂಡಿದೆ. ಬ್ರಿಟಿಷರು ತಮ್ಮ ಎಲ್ಲಾ ವಸಾಹತುಗಳಲ್ಲಿ ಇದನ್ನು ಪರಿಚಯಿಸಿದ್ದಾರೆ. ಇದನ್ನು ಬದಲಾಯಿಸಬೇಕು ಎಂದು ಸಚಿವಾಲಯ ಹೇಳಿದೆ.
ಇದನ್ನು ಓದಿದ್ದೀರಾ? ಅಸ್ಸಾಂ | ಶಾಲಾ ಶಿಕ್ಷಕರು ಜೀನ್ಸ್ ಧರಿಸದಂತೆ ವಸ್ತ್ರ ಸಂಹಿತೆ ಹೊರಡಿಸಿದ ಸರ್ಕಾರ
“ಕೋಟ್, ಟೋಪಿ ಹಾಕುವ ಸಂಪ್ರದಾಯವು ವಸಾಹತುಶಾಹಿ ಪರಂಪರೆಯಾಗಿದ್ದು ಅದನ್ನು ಬದಲಾಯಿಸಬೇಕಾಗಿದೆ” ಎಂದು ಆರೋಗ್ಯ ಸಚಿವಾಲಯದ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
“ವೈದ್ಯಕೀಯ ಶಿಕ್ಷಣವನ್ನು ನೀಡುವಲ್ಲಿ ತೊಡಗಿರುವ ಏಮ್ಸ್/ಐಎನ್‌ಐಗಳು ಸೇರಿದಂತೆ ಸಚಿವಾಲಯದ ವಿವಿಧ ಸಂಸ್ಥೆಗಳು ಸ್ಥಳೀಯ ಸಂಪ್ರದಾಯಗಳ ಆಧಾರದ ಮೇಲೆ ತಮ್ಮ ಸಂಸ್ಥೆಯ ಘಟಿಕೋತ್ಸವ ಸಮಾರಂಭಕ್ಕೆ ಸೂಕ್ತವಾದ ಭಾರತದ ವಸ್ತ್ರ ಸಂಹಿತೆಯನ್ನು ವಿನ್ಯಾಸಗೊಳಿಸಲಿದೆ ಎಂದು ಸಚಿವಾಲಯವು ನಿರ್ಧರಿಸಿದೆ” ಎಂದು ಹೇಳಿದೆ.
