ಮದುವೆಗೆ ನಿರಾಕರಿಸುವುದು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 306ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆಯಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ತನ್ನ ಮಗನನ್ನು ಪ್ರೀತಿಸುತ್ತಿದ್ದ ಇನ್ನೊಬ್ಬ ಮಹಿಳೆಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪವನ್ನು ಹೊತ್ತಿರುವ ಮಹಿಳೆಯ ವಿರುದ್ಧದ ಆರೋಪಪಟ್ಟಿಯನ್ನು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರ ನ್ಯಾಯಪೀಠವು ರದ್ದುಗೊಳಿಸಿದೆ. ಈ ಸಂದರ್ಭದಲ್ಲಿ ಮದುವೆಗೆ ನಿರಾಕರಿಸುವುದು ಆತ್ಮಹತ್ಯೆಗೆ ಪ್ರಚೋದನೆಯಾಗಲ್ಲ ಎಂದು ತಿಳಿಸಿದೆ.
ಇದನ್ನು ಓದಿದ್ದೀರಾ? 26/11ರ ಮುಂಬೈ ದಾಳಿ | ಉಗ್ರ ರಾಣಾ ಹಸ್ತಾಂತರಕ್ಕೆ ದಾರಿ ಮಾಡಿಕೊಟ್ಟ ಅಮೆರಿಕ ಸುಪ್ರೀಂ ಕೋರ್ಟ್
ಮಹಿಳೆಯೋರ್ವರೊಂದಿಗೆ ಮದುವೆಯಾಗಲು ತನ್ನ ಮಗನಿಗೆ ಆರೋಪಿ ಮಹಿಳೆ ಅನುಮತಿ ನೀಡಿರಲಿಲ್ಲ. ಹಾಗೆಯೇ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಇದರಿಂದಾಗಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಆರೋಪಪಟ್ಟಿ ಮತ್ತು ಸಾಕ್ಷಿಗಳ ಹೇಳಿಕೆಗಳು ಸೇರಿದಂತೆ ದಾಖಲೆಯಲ್ಲಿರುವ ಎಲ್ಲಾ ಪುರಾವೆಗಳು ಸರಿಯಾಗಿದ್ದರೂ ಸಹ, ಮೇಲ್ಮನವಿ ಸಲ್ಲಿಸಿದವರ ವಿರುದ್ಧ (ಆರೋಪಿ ಮಹಿಳೆ) ಯಾವುದೇ ಸಾಕ್ಷ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ಇದನ್ನು ಓದಿದ್ದೀರಾ? ಮಾನನಷ್ಟ ಮೊಕದ್ದಮೆ: ರಾಹುಲ್ ಗಾಂಧಿ ವಿರುದ್ಧದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ
“ಮದುವೆಗೆ ನಿರಾಕರಿಸುವುದು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 306ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆಯಾಗುವುದಿಲ್ಲ. ಮೃತರಿಗೆ ಆತ್ಮಹತ್ಯೆ ಮಾಡುವುದು ಬಿಟ್ಟು ಬೇರೆ ಯಾವುದೇ ದಾರಿಯಿರಲಿಲ್ಲ ಎಂಬುದನ್ನು ಒಪ್ಪಲಾಗದು” ಎಂದು ಪೀಠ ಹೇಳಿದೆ.
“ಸಂಬಂಧವನ್ನು ಕೊನೆಗೊಳಿಸುವಂತೆ ತನ್ನ ಮಗನ ಮೇಲೆ ಒತ್ತಡ ಹೇರುವ ಯಾವುದೇ ಪ್ರಯತ್ನವನ್ನು ತಾಯಿ ಮಾಡಿಲ್ಲ ಎಂದು ದಾಖಲೆಗಳಿಂದ ತಿಳಿದುಬಂದಿದೆ. ನಿಜವಾಗಿ ಈ ಸಂಬಂಧದ ಬಗ್ಗೆ ಅತೃಪ್ತಿ ಇದ್ದದ್ದು ಮೃತರ ಕುಟುಂಬಸ್ಥರು” ಎಂದು ತಿಳಿಸಿದ್ದಾರೆ.
