ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಹಗರಣಗಳ ಬಗ್ಗೆ ತಮಿಳುನಾಡಿನ ಡಿಎಂಕೆ ನೇತೃತ್ವದ ಆಡಳಿತ ಪಕ್ಷ ರಾಜ್ಯದಾದ್ಯಂತ ಜಿ-ಪೇ ಪೋಸ್ಟರ್ ಅಭಿಯಾನ ಹಮ್ಮಿಕೊಂಡಿದೆ.
‘ಕೋಡ್ ಸ್ಕ್ಯಾನ್ ಮಾಡಿ, ಸರ್ಕಾರದ ಹಗರಣಗಳನ್ನು ನೋಡಿ’ ಎಂಬ ಪ್ರಧಾನಿ ಭಾವಚಿತ್ರವಿರುವ ಪೋಸ್ಟರ್‌ಗಳು ರಾಜ್ಯದಾದ್ಯಂತ ಗೋಡೆಗಳು, ಭಿತ್ತಿಪತ್ರಗಳ ಮೂಲಕ ಸಾರ್ವಜನಿಕರಿಗೆ ಲಭ್ಯಗೊಳಿಸಲಾಗಿದೆ.
ಗೋಡೆಗಳಲ್ಲಿರುವ ಪ್ರಧಾನಿ ಭಾವಚಿತ್ರವನ್ನು ಸ್ಕ್ಯಾನ್ ಮಾಡಿದರೆ ವಿಡಿಯೋ ಮೂಲಕ ಚುನಾವಣಾ ಬಾಂಡ್‌ಗಳ ಹಗರಣಗಳು ಒಳಗೊಂಡ ಹತ್ತಾರು ಭ್ರಷ್ಟಾಚಾರದ ದೃಶ್ಯಗಳು ತೆರೆದುಕೊಳ್ಳುತ್ತವೆ.
ಚುನಾವಣಾ ಪ್ರಚಾರದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ವೇಲೂರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಭಾಷಣ ಮಾಡಿದ ಪ್ರಧಾನಿ, ಆಡಳಿತ ಪಕ್ಷ ಡಿಎಂಕೆ ವಿರುದ್ಧ ಕಟುವಾಗಿ ಟೀಕಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಲೆ ಏರಿಕೆ, ನಿರುದ್ಯೋಗವೇ ಚುನಾವಣೆ ವಿಷಯ; ಎಚ್ಚೆತ್ತ ಮತದಾರರು
ಡಿಎಂಕೆ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಒಡೆದು ಆಳುವ ನೀತಿಯ ಮೂಲಕ ರಾಜಕಾರಣ ಮಾಡುತ್ತಿದೆ. ಡಿಎಂಕೆ ಹಾಗೂ ಅದರ ಮಿತ್ರ ಪಕ್ಷ ಕಾಂಗ್ರೆಸ್ ಸಾರ್ವಜನಿಕ ಹಿತಾಸಕ್ತಿಗಿಂತ ಕುಟುಂಬ ಅಭಿವೃದ್ಧಿಯತ್ತ ತೊಡಗಿಕೊಂಡಿದೆ ಎಂದು ಪ್ರಧಾನಿ ಹೇಳಿದ್ದರು.
ಈ ರೀತಿ ಹೇಳಿದ ಮರುದಿನವೆ ರಾಜ್ಯದಾದ್ಯಂತ ಪ್ರಧಾನಿ ವಿರುದ್ಧದ ಜಿ-ಪೇ ಪೋಸ್ಟರ್‌ಗಳು ರಾರಾಜಿಸುತ್ತಿದ್ದು, ಕೇಂದ್ರದ ವಿರುದ್ಧ ಡಿಎಂಕೆ ಸರ್ಕಾರ ಅಭಿಯಾನದಲ್ಲಿ ತೊಡಗಿದೆ.
ತಮಿಳುನಾಡಿನ 39 ಲೋಕಸಭಾ ಸ್ಥಾನಗಳಿಗೆ ಏ.19ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಇಂಡಿಯಾ ಮೈತ್ರಿಕೂಟದ ಪಕ್ಷಗಳಾದ ಡಿಎಂಕೆ 21, ಕಾಂಗ್ರೆಸ್ 9 ಸೇರಿದಂತೆ ಇತರ ಮಿತ್ರ ಪಕ್ಷಗಳು ಎಲ್ಲ 39 ಸ್ಥಾನಗಳಲ್ಲಿ ಸ್ಪರ್ಧಿಸಿವೆ.
ಅದೇ ರೀತಿ ಎನ್‌ಡಿಎ ಮಿತ್ರ ಪಕ್ಷಗಳಾದ ಬಿಜೆಪಿ 19, ಪಿಎಂಕೆ 10 ಕ್ಷೇತ್ರ ಸೇರಿ 39 ಕ್ಷೇತ್ರಗಳಲ್ಲಿ ಕಣಕ್ಕಿಳಿದಿವೆ. ಮತ್ತೊಂದು ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆ 32 ಸ್ಥಾನಗಳಲ್ಲಿ ಸ್ಪರ್ಧಿಸಿವೆ.
“Ji Pay” posters come up in Tamil Nadu just few days before the polls. Once the QR code in the poster is scanned, a video opens up which explains the alleged corruption and scams of the BJP govt. Watch this report.
(#ReporterDiary | @Shilpa1308) pic.twitter.com/ilqhbgBtFW
— IndiaToday (@IndiaToday) April 11, 2024
